ನ್ಯಾಯಯುತ ಕಾರಣಗಳಿದ್ದರೆ ಪ್ರಾಯೋಜಕತ್ವವನ್ನು ಬದಲಿಸಬಹುದು:ಸೌದಿ ಕಾರ್ಮಿಕ ಸಚಿವಾಲಯ

ರಿಯಾದ್: ನ್ಯಾಯಯುತ ಕಾರಣಗಳಿದ್ದರೆ ಮನೆ ಕೆಲಸಗಾರರು ಪ್ರಾಯೋಜಕತ್ವವನ್ನು ಬದಲಾಯಿಸಬಹುದಾಗಿದೆ ಎಂದು ಸೌದಿ ಕಾರ್ಮಿಕ, ಸಾಮಾಜಿಕ ಸೇವಾ ಸಚಿವಾಲಯ ವ್ಯಕ್ತಪಡಿಸಿದೆ.

ಸಂಬಳ ಪಡೆಯದಿರುವಂತಹ ಕಾರಣಕ್ಕೂ ಪ್ರಾಯೋಜಕತ್ವವನ್ನು ಬದಲಾಯಿಸಬಹುದು. ಮನೆ ಕೆಲಸಗಾರ ವೀಸಾಗಳಲ್ಲಿರುವವರ ಪ್ರಾಯೋಜಕತ್ವ ಬದಲಾವಣೆಗೆ ಬೇಕಾದ ಕಾರಣಗಳನ್ನು ಸಹ ಸಚಿವಾಲಯ ವಿವರಿಸಿದೆ.

ಉದ್ಯೋಗದಾತ ಮೂರು ತಿಂಗಳ ಕಾಲ ನಿರಂತರವಾಗಿ ಸಂಬಳ ನೀಡದಿದ್ದರೆ ಅಥವಾ ಎಡೆ ಬಿಟ್ಟು ಮೂರು ತಿಂಗಳ ಸಂಬಳ ನೀಡದಿರುವುದು, ವೀಸಾದಲ್ಲಿ ಬಂದು ಮನೆಯ ಪ್ರವೇಶ ದ್ವಾರ, ಅಥವಾ ಅಭಯ ಕೇಂದ್ರಕ್ಕೆ ತಲುಪಿ 15 ದಿನಗಳಾದರೂ ಉದ್ಯೋಗದಾತ ಸ್ವೀಕರಿಸಲು ಬಾರದಿರುವುದು ಮುಂತಾದ ಕಾರಣಗಳಿದ್ದರೆ ಪ್ರಾಯೋಜಕತ್ವವನ್ನು ಬದಲಾಯಿಸಬಹುದಾಗಿದೆ.

ಇಖಾಮಾ ನೀಡದಿರುವುದು ಅಥವಾ ನವೀಕರಿಸಿ ಕೊಡದಿರುವುದು, ಸ್ನೇಹಿತರ ಮನೆಗಳಲ್ಲಿ ಕೆಲಸದಲ್ಲಿ ಕೆಲಸಮಾಡಿಸಿ, ಅವರಿಂದ ವೇತನ ಪಡೆಯುವುದು, ಆರೋಗ್ಯ ಬೆದರಿಕೆಯನ್ನೊಡ್ಡುವ ಕೆಲಸವನ್ನು ಮಾಡಿಸುವುದು ಮುಂತಾದ ಸಂದರ್ಭದಲ್ಲಿಯೂ ಬದಲಾವಣೆಗೆ ಅವಕಾಶವಿದೆ.

ಕೆಟ್ಟದಾಗಿ ವರ್ತಿಸುವುದು, ಪ್ರಾಯೋಜಕನ ವಿರುದ್ದ ನೀಡಲಾದ ದೂರು ವಿನಾಕಾರಣ ವಿಳಂಬವಾಗುವುದು, ಅನ್ಯಾಯವಾಗಿ ಉರೂಬ್ ದೂರು ದಾಖಲಿಸುವುದು, ಯಾತ್ರೆ, ಜೈಲು, ಸಾವಿನ ಕಾರಣಗಳಿಗಾಗಿ ಮೂರು ತಿಂಗಳ ಸಂಬಳ ನೀಡಲು ಆಗದಂತಹ ಪರಿಸ್ಥಿತಿ ನಿರ್ಮಾಣ ಮಾಡುವುದು ಮುಂತಾದ ಕಾರಣಕ್ಕಾಗಿಯೂ ಪ್ರಾಯೋಜಕತ್ವ ಬದಲಾವಣೆಯನ್ನು ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!