ಕುವೈತ್‌ನ 58ನೇ ದೇಶೀಯ ಉತ್ಸವ-706 ಖೈದಿಗಳ ಬಿಡುಗಡೆ

ಕುವೈತ್ ಸಿಟಿ: ಕುವೈತ್‌ನ 58ನೇ ದೇಶೀಯ ಉತ್ಸವ ಮತ್ತು 28ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಲ್ಲಿನ ಕಾರಾಗ್ರಹದಲ್ಲಿರುವ 706 ಖೈದಿಗಳನ್ನು ಅಮೀರರು ಬಂಧಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಪೈಕಿ 47 ಸ್ವದೇಶೀ ಖೈದಿಗಳ ಸಮೇತ 161 ಮಂದಿಗೆ ಸೋಮವಾರ ಮುಕ್ತಿ ನೀಡಲಾಗುವುದು. 545 ಬಂಧಿಗಳಿಗೆ ಶಿಕ್ಷಾ ಕಾಲಾವಧಿಯಲ್ಲಿ ವಿನಾಯಿತಿ ನೀಡಲು ಅಮೀರರು ಆದೇಶ ನೀಡಿದ್ದು, ಅವರ ಪೈಕಿ 148 ಮಂದಿ ಸ್ವದೇಶೀ ಪ್ರಜೆಗಳಾಗಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!