janadhvani

Kannada Online News Paper

ಸೌದಿ: ಖಾಸಗೀ ವಲಯದಲ್ಲಿ ಸಮಸ್ಯೆ- ಅಧ್ಯಯನ ನಡೆಸಲು ಉನ್ನತ ಸಮಿತಿ ರಚನೆ

ರಿಯಾದ್: ಸೌದಿ ಅರೇಬಿಯಾದಲ್ಲಿ ಖಾಸಗಿ ವಲಯದ ಕಂಪನಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು.

ಆರ್ಥಿಕ ಅಭಿವೃದ್ಧಿ ಸಮಿತಿಯ ಅಡಿಯಲ್ಲಿ ರೂಪೀಕರಿಸಲಾಗುವ ಸಮಿತಿಯು ಹದಿನೇಳು ಸರ್ಕಾರಿ ಇಲಾಖೆಗಳನ್ನು ಒಳಗೊಂಡಿರುತ್ತದೆ. ವಿಷನ್ 2030ರ ಭಾಗವಾಗಿ ಖಾಸಗಿ ವಲಯದ ಬೆಳವಣಿಗೆಗಾಗಿ ಹೊಸ ಸಮಿತಿಯನ್ನು ರಚಿಸಲಾಗುತ್ತಿದೆ.

ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅಧ್ಯಕ್ಷರಾಗಿರುವ ಹಣಕಾಸು ಅಭಿವೃದ್ಧಿ ಸಮಿತಿಯಡಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುತ್ತಿದ್ದು, ಹದಿನೇಳು ಸರ್ಕಾರಿ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿಯಲ್ಲಿ ಮಂತ್ರಿಗಳೂ ಸೇರಿದಂತೆ ಹಲವು ಉನ್ನತಾಧಿಕಾರಿಗಳು ಸದಸ್ಯರಾಗಲಿದ್ದಾರೆ.

ಖಾಸಗಿ ವಲಯದಲ್ಲಿ ಕೆಲಸ ಮಾಡುವ ಕಂಪನಿಗಳು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳನ್ನು ಮತ್ತು ವಿಭಿನ್ನ ವಲಯಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಲಾಗಿ ಅಧ್ಯಯನ ನಡೆಸಲಾಗುತ್ತದೆ. ಬಳಿಕ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಾದ ಸಹಾಯ ಸಹಕಾರಗಳನ್ನು ಶಿಫಾರಸು ಮಾಡಲಿದೆ.

ವಿಶ್ಲೇಷಣಾ ಸಭೆಗಳಲ್ಲಿ ಅಗತ್ಯವಾದಲ್ಲಿ ಅರ್ಹ ವೃತ್ತಿಪರರನ್ನು ಆಹ್ವಾನಿಸುತ್ತದೆ ಮತ್ತು ಉಪ- ಸಮಿತಿಗಳನ್ನು ರೂಪಿಸಲಿವೆ. ಸಮಿತಿಯ ಅಪೇಕ್ಷೆಯ ಮೇರೆಗೆ ಅಗತ್ಯವಿರುವ ದಾಖಲೆಗಳು ಮತ್ತು ಮಾಹಿತಿಗಳನ್ನು 24 ಗಂಟೆಗಳ ಒಳಗೆ ಆಯಾ ಇಲಾಖೆಗಳಿಗೆ ಕಳುಹಿಸಬೇಕು. ಹೊಸ ಸಮಿತಿಯ ರಚನೆಯು ಖಾಸಗಿ ಕ್ಷೇತ್ರದಲ್ಲಿ ಹೊಸ ಹುರುಪನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

error: Content is protected !! Not allowed copy content from janadhvani.com