ಅರುವತ್ತು ವರ್ಷ ದಾಟಿದವರ ಇಖಾಮಾ ನವೀಕರಣೆಯಿಲ್ಲ

ಕುವೈತ್ ಸಿಟಿ: ಕುವೈತ್‌ನಲ್ಲಿ ಅರುವತ್ತು ವರ್ಷ ದಾಟಿದ ಪದವೀಧರರಲ್ಲದವರ ಇಖಾಮಾ ನವೀಕರಿಸದಿರಲು ಮುಂದಾಗಿದೆ. ಈ ಕುರಿತು ಮಾನವ ಸಂಪನ್ಮೂಲ ಸಾರ್ವಜನಿಕ ಇಲಾಖೆಯು ಶೀಘ್ರದಲ್ಲೇ ಅಧಿಕೃತವಾಗಿ ಮಾಹಿತಿ ನೀಡಲಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

ಅಂತಹ ವಿದೇಶಿಯರನ್ನು ಉಳಿಸಿಕೊಳ್ಳುವುದರಲ್ಲಿ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಅಥಾರಿಟಿಯ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಉನ್ನತ ಯೋಗ್ಯತೆ ಇರುವ ದೀರ್ಘಕಾಲದಿಂದ ಸೇವೆ ಗೈಯ್ಯುತ್ತಾ ಬಂದಿರುವ ಕಾರ್ಮಿಕರನ್ನು ಮಾನವೀಯ ಪರಿಗಣನೆ ಮತ್ತು ಅವರ ಸೇವೆಯ ಅವಶ್ಯಕತೆಯನ್ನು ಮನಗಂಡು ಪ್ರಾಯಗಣನೆ ಮಾಡದೆ ಮುಂದುವರೆಯಲು ಅವಕಾಶ ನೀಡಬೇಕು ಎಂದೂ ಸದಸ್ಯರು ಕೊರಿಕೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!