janadhvani

Kannada Online News Paper

ಮಧ್ಯಮ,ಸಣ್ಣ ಉದ್ಯಮಗಳಲ್ಲಿ ಲೆವಿ ರದ್ದು ಪಡಿಸುವಂತೆ ಸೌದಿ ಶೂರಾ ಕೌನ್ಸಿಲ್ ಆಗ್ರಹ

ದಮ್ಮಾಮ್: ದೇಶದ ಮಧ್ಯಮ,ಸಣ್ಣ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ವಿದೇಶೀಯರಿಗೆ ವಿಧಿಸಲಾಗುವ ಲೆವಿ ಅನ್ನು ರದ್ದುಪಡಿಸುವಂತೆ ಶುರಾ ಕೌನ್ಸಿಲ್ ಕೋರಿದೆ.

ಅನೇಕ ಕಂಪನಿಗಳು ವಿದೇಶಿ ಪ್ರಜೆಗಳ ಮೇಲೆ ವಿಧಿಸಲಾಗುವ ತೆರಿಗೆಯ ಕೊರತೆಯಿಂದಾಗಿ ತೊಂದರೆಗಳನ್ನು ಎದುರಿಸುತ್ತಿವೆ. ಆ ಪೈಕಿ ಅನೇಕ ಸಂಸ್ಥೆಗಳನ್ನು ಮುಚ್ಚಲಾಗಿದ್ದು, ಸ್ವದೇಶೀಕರಣವನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗದ ಸಂಸ್ಥೆಗಳನ್ನು ಪತ್ತೆ ಹಚ್ಚಿ, ಅಂತಹ ಸಂಸ್ಥೆಗಳಿಗೆ ವಿನಾಯಿತಿ ನೀಡಬೇಕು.

ದೇಶದ ಬೆಳವಣಿಗೆಗೆ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೊಡುಗೆ ಅಪಾರ ಎಂದು ಶುರಾ ಕೌನ್ಸಿಲ್ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಏತನ್ಮಧ್ಯೆ, ಕಾರ್ಮಿಕ ಮತ್ತು ಸಾಮಾಜಿಕ ಕಲ್ಯಾಣ ಸಚಿವಾಲಯವು 2018ರ ಲೆವಿ ಇನ್ವಾಯ್ಸ್ ಗಳ ಮೊತ್ತವನ್ನು ಹಿಂತಿರುಗಿಸಲು ಮತ್ತು ಮರುಪಾವತಿಸದವರಿಗೆ ವಿನಾಯಿತಿ ನೀಡುವ ಅರ್ಜಿ ವಿಧಾನಗಳನ್ನು ಪ್ರಾರಂಭಿಸಿಲಾಗಿದೆ ಎಂದಿದೆ. ಆನ್ ಲೈನ್ ನಲ್ಲಿ ಶೀಘ್ರದಲ್ಲೇ ನೋಂದಾಯಿಸಲು ಸಂಬಂಧಿಸಿದ ಸಂಸ್ಥೆಗಳಿಗೆ ಸಚಿವಾಲಯವು ಕೇಳಿದೆ.

error: Content is protected !! Not allowed copy content from janadhvani.com