ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ರಜಾದಿನಗಳು

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದ ತರಗತಿ ನಡೆಯುವ ದಿನಗಳು, ಮಧ್ಯಂತರ ಹಾಗೂ ಬೇಸಿಗೆ ರಜಾ ದಿನದ ಮಾಹಿತಿ ಒಳಗೊಂಡ ಮಾರ್ಗಸೂಚಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

2019-20ನೇ ಸಾಲಿನಲ್ಲಿ 250 ದಿನಗಳ ಶೈಕ್ಷಣಿಕ ಅವಧಿ ಇರುತ್ತದೆ. ಶಾಲಾ ದಿನಗಳ ಮೊದಲ ಅವಧಿ 2019ರ ಮೇ.29ಕ್ಕೆ ಆರಂಭವಾಗಿ ಅಕ್ಟೋಬರ್‌ 5ಕ್ಕೆ ಕೊನೆಗೊಳ್ಳಲಿದೆ.

ಎರಡನೇ ಅವಧಿ ಅಕ್ಟೋಬರ್‌ 21ರಿಂದ ಆರಂಭವಾಗಿ 2020ರ ಏಪ್ರಿಲ್‌ 11ರಂದು ಮುಕ್ತಾಯವಾಗಲಿದೆ. ಈ ವರ್ಷದ ಅಕ್ಟೋಬರ್‌ 6ರಿಂದ 20ರ ವರೆಗೆ ಮಧ್ಯಂತರ ರಜೆ ನೀಡಲಾಗುತ್ತಿದೆ. 2020 ಏಪ್ರಿಲ್‌ 12ರಿಂದ ಮೇ 24ರ ವರೆಗೆ ಬೇಸಿಗೆ ರಜೆ ನೀಡಲು ಇಲಾಖೆ ನಿರ್ಧರಿಸಿದೆ

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!