janadhvani

Kannada Online News Paper

ಅಕ್ರಮ ವಲಸಿಗರಿಗೆ ಕೆಲಸ ನೀಡಿದಲ್ಲಿ ಭಾರೀ ಶಿಕ್ಷೆ, ದಂಡ- ಜವಾಝಾತ್

ಈ ವರದಿಯ ಧ್ವನಿಯನ್ನು ಆಲಿಸಿ


ರಿಯಾದ್: ಸೌದಿ ಅರೇಬಿಯಾದಲ್ಲಿ ಅಕ್ರಮವಾಗಿ ನೆಲೆಸಿರುವ ಕಾನೂನು ಉಲ್ಲಂಘಕರಿಗೆ ಕೆಲಸ ನೀಡಿದಲ್ಲಿ ಭಾರೀ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಪಾಸ್ ಪೋರ್ಟ್ ಇಲಾಖೆ (ಜವಾಝಾತ್) ಎಚ್ಚರಿಕೆ ನೀಡಿದೆ.
ಒಂದು ಲಕ್ಷ ರಿಯಾಲ್ ದಂಡ ಮತ್ತು ಐದು ವರ್ಷಗಳ ವರೆಗೆ ನೇಮಕಾತಿಗೆ ತಡೆ ವಿಧಿಸಲಾಗುವುದು.ಅದೂ ಅಲ್ಲದೆ ದೇಶದ ಮಾಧ್ಯಮಗಳಲ್ಲಿ ಆ ಸಂಸ್ಥೆಯ ಬಗ್ಗೆ ಜಾಹೀರಾತು ನೀಡಲಾಗುವುದು. ಹೊರತಾಗಿ,ಸಂಸ್ಥೆಯ ರುವಾರಿ ಸ್ಥಳೀಯನಾಗಿದ್ದರೆ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಆತ ಪರದೇಶಿಯಾದಲ್ಲಿ ಗಡೀಪಾರು ಮಾಡಲಾಗುವುದು ಎಂದು ಜವಾಝಾತ್ ಹೇಳಿದೆ.

ಅಕ್ರಮ ಅಪರಾಧಿಗಳ ಸಂಖ್ಯೆಯ ಪ್ರಕಾರ ಶಿಕ್ಷೆ ಮತ್ತು ದಂಡಗಳನ್ನು ದ್ವಿಗುಣಗೊಳಿಸಲಾಗುವುದು ಎಂದು ಜವಾಝಾತ್‌ನ ಎಚ್ಚರಿಕೆಯಲ್ಲಿ ತಿಳಿಸಲಾಗಿದೆ. ಇಖಾಮಾ ಕಾನೂನು ಉಲ್ಲಂಘಕರು, ಕಾರ್ಮಿಕ ಕಾನೂನು ಉಲ್ಲಂಘಕರು ಮತ್ತು ಗಡಿ ಕಾನೂನು ಉಲ್ಲಂಘಕರನ್ನು ಯಾವುದೇ ಕಾರಣಕ್ಕೂ ದೇಶದಲ್ಲಿ ಕೆಲಸಕ್ಕೆ ಅನುಮತಿಸಬಾರದೆಂದು ಜವಾಝಾತ್ ನೆನಪಿಸಿದೆ.

ಅಂತಹ ಉಲ್ಲಂಘಕರಿಗೆ ಆಶ್ರಯ ನೀಡುವವರಿಗೆ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಆರು ತಿಂಗಳುಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರಿಯಾಲ್ ದಂಡವನ್ನು ಕಾನೂನಿನ ಉಲ್ಲಂಘಕರಿಗೆ ನೀಡಲಾಗುತ್ತದೆ ಮತ್ತು ವಿದೇಶಿಯಾಗಿದ್ದರೆ ಗಡೀಪಾರು ಮಾಡಲಾಗುವುದು ಎಂದು ಜವಾಝಾತ್ ವಿವರಿಸಿದೆ. ಸಂದರ್ಶನ ವಿಸಾದಲ್ಲಿ ಬಂದವರು ಕಾಲಾವಧಿ ಮುಗಿದ ಬಳಿಕ ಸೌದಿ ಅರೇಬಿಯಾವನ್ನು ತೊರೆಯುವಂತೆ ಪ್ರವಾಸಿಗರನ್ನು ಜವಾಝಾತ್ ಸೂಚಿಸಿದೆ.

error: Content is protected !! Not allowed copy content from janadhvani.com