janadhvani

Kannada Online News Paper

ಮಾರ್ಚ್ ಒಂದರಿಂದ ಕಣ್ಣೂರಿನಿಂದ ಅಬುಧಾಬಿಗೆ ಗೋಏರ್ ಯಾನ ಆರಂಭ

ಅಬುಧಾಬಿ: ಕಣ್ಣೂರು ವಿಮಾನ ನಿಲ್ದಾಣ ಮೂಲಕ ಗೋಏರ್ ಯುಎಇಗೆ ಹಾರಾಟ ನಡೆಸಲಿದೆ. ಮಾರ್ಚ್ ಒಂದರಿಂದ ಅದು ಹಾರಾಟ ಆರಂಭಿಸಲಿದೆ ಎಂದು ತಿಳಿದು ಬಂದಿದೆ. https://www.goair.in ವೆಬ್ಸೈಟ್ ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿದೆ.

ಶುಕ್ರವಾರ, ರವಿವಾರ, ಸೋಮವಾರ, ಬುಧವಾರ ಮುಂತಾದ ದಿನಗಳಲ್ಲಿ ರಾತ್ರಿ 10:10ಕ್ಕೆ ಕಣ್ಣೂರಿನಿಂದ ಹೊರಡುವ ವಿಮಾನ ರಾತ್ರಿ 12:40ಕ್ಕೆ ಅಬುಧಾಬಿ ತಲುಪಲಿದೆ.

ಶನಿವಾರ, ಸೋಮವಾರ, ಮಂಗಳವಾರ, ಗುರುವಾರ ಮುಂತಾದ ದಿನಗಳಲ್ಲಿ 1:40ಕ್ಕೆ ಅಬುಧಾಬಿಯಿಂದ ಹೊರಡುವ ವಿಮಾನ ಬೆಳಗ್ಗೆ 7:10ಕ್ಕೆ ಕಣ್ಣೂರು ತಲುಪಲಿದೆ.

ಎಪ್ರಿಲ್‌ನಿಂದ ಈ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಲಿದ್ದು, ರಜಾ ನಿಮಿತ್ತ ಜೂನ್ ಅಥವಾ ಇನ್ನಿತರ ದಿನಗಳಲ್ಲಿ ಊರಿಗೆ ಪ್ರಯಾಣ ಬೆಳೆಸುವಾಗ ಹಾರಾಟ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ. ಹಚ್ಚಿನ ಹಾರಾಟಗಳು ಪ್ರಾರಂಭವಾಗುವುದರೊಂದಿಗೆ ಈಗಿರುವ ದರದಲ್ಲಿ ಕಡಿತ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.

error: Content is protected !! Not allowed copy content from janadhvani.com