ಶಾರ್ಜಾ: ನಿಮ್ಮ ಮನೆ ಬಾಗಿಲಿಗೆ ಬಂದು ಕಡಿಮೆ ವೆಚ್ಚದಲ್ಲಿ ಕುಡಿಯುವ ನೀರು ನೀಡುವ ಬಗ್ಗೆ ಬುಕ್ಲೆಟ್ ಅಥವಾ ಕೂಪನ್‌ಗಳನ್ನು ನೀಡಿ ಯಾರಾದರೂ ವಾಗ್ದಾನ ನೀಡಿದರೆ ಅಂಗೀಕೃತ ವಿತರಣೆಗಾರ ಎನ್ನುವುದನ್ನು ಖಾತರಿ ಪಡಿಸದೆ ಹಣ ಪವತಿಸಬೇಡಿ ಹುಷಾರ್. ವಿವಿಧ ಇಮಾರಾತ್‌ಗಲ್ಲಿ ಈ ರೀತಿಯ ಸುಳ್ಳು ಬರವಸೆಗಳನ್ನು ನೀಡಿ ವಂಚಿಸುವ ಜಾಲಗಳು ಕಾರ್ಯಾಚರಿಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗೆ ಶಾರ್ಜಾದ ಖಾದಿಸಿಯ್ಯಾದಲ್ಲಿ ಮಹ್ತ ವಲಯದಲ್ಲಿ ಇಂತಹ ಪ್ರಸಂಗ ಉಂಟಾಗಿದ್ದು, 99 ದಿರ್ಹಂ ನೀಡಿ ಕುಡಿಯುವ ನೀರಿನ ಕೂಪನ್ ಪಡಕೊಂಡರೆ ಪ್ರತೀ ಸೋಮವಾರ ಮತ್ತು ಶುಕ್ರವಾರ ಮನೆಗೆ ಆವಶ್ಯಕವಾದ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಸುಬಗನಂತೆ ಕಾಣುವ ವ್ಯಕ್ತಿಯೊಬ್ಬ ವಾಗ್ದಾನ ನೀಡಿದ್ದಾನೆ.
ಪ್ರಮುಖ ಬ್ರಾಂಡ್ ಒಂದರ ಕುಡಿಯುವ ನೀರನ್ನು ಸದಾ ಉಪಯೋಗಿಸುವ ಹಲವಾರು ಮಂದಿ ಆದಾಯಕರವಾದ ಈ ಆಫರ್ ಕೇಳಿ ಹಣ ನೀಡಿ ಕೂಪನ್‌ಗಳನ್ನೂ ಪಡೆದಿದ್ದಾರೆ. ಆದರೆ ಆತ ಮರಳಿದ ನಂತರ ಪರಿಶೀಲಿಸಿದಾಗ ಅದು ಪ್ರಮುಖ ಕಂಪೆನಿಯ ಮಾದರಿಯಲ್ಲಿ ಡಿಸೈನ್ ಮಾತ್ರ ಎಂಬುವುದು ಖಾತರಿಯಾಯ್ತು.
ಕೂಪನ್‌ನಲ್ಲಿ ನಮೂದಿಸಿದ ಸಂಖ್ಯೆಗೆ ಕರೆ ಮಾಡಿದಾಗ ಅದು ಚಲಾವಣೆಯಲ್ಲೂ ಇಲ್ಲ ಎಂಬುದಾಗಿ ಶಾರ್ಜಾದಲ್ಲಿ ವಾಸವಿರುವ ನೌಶಾದ್ ಹನೀಫ್ ಹೇಳುತ್ತಾರೆ. ದಿನಗಳು ಕಾದರೂ ನೀರು ತಲುಪಲೇ ಇಲ್ಲ. ಇದೇ ರೀತಿಯಲ್ಲಿ ಹಲವು ರೆಸ್ಟೋರೆಂಟ್ಗಳಿಗೆ ಇಂತಹ ಕೂಪನ್ ನೀಡಿ ವಂಚಿಸಲಾದ ಬಗ್ಗೆ ಮಾಹಿತಿಯಿದೆ.