janadhvani

Kannada Online News Paper

ಬಡ್ಡಿಸಹಿತ ಸಾಲ ವ್ಯವಹಾರಗಳು ಘೋರ ಅಪರಾಧ- ಸೌದಿ ವಿದ್ವಾಂಸ

ಜಿದ್ದಾ: ಬಡ್ಡಿಸಹಿತ ಸಾಲ ವ್ಯವಹಾರಗಳು ಗಂಭೀರ ಅಪರಾಧವೆಂದು ಸೌದಿ ವಿದ್ವಾಂಸ ಶೈಖ್ ಸಾದ್ ಬಿನ್ ನಸ್ಸಾರ್ ಅಲ್-ಶಾತ್ರಿ ಹೇಳಿದ್ದಾರೆ.
ಸೌದಿ ಅರೇಬಿಯಾದಲ್ಲಿ ಪ್ರಮುಖ ಚಾನೆಲ್ ಒಂದರಲ್ಲಿ ನಡೆದ ಚರ್ಚೆಯಲ್ಲಿ ಅವರು ಬಡ್ಡಿ ವ್ಯವಹಾರಗಳ ಬಗೆಗಿನ ಇಸ್ಲಾಂ ಧರ್ಮದಲ್ಲಿನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಸಾಲವನ್ನು ನೀಡುವುದು ಮತ್ತು ಪಡೆಯುವುದು ತಪ್ಪಲ್ಲ. ಬಡ್ಡಿಯ ಆಧಾರದ ಮೇಲೆ ಸಾಲ ನೀಡುವುದು ಯಾ ಪಡೆಯುವುದು ಪಾಪವಾಗಿದೆ. ಅದು ಮಹಾ ಪಾಪ ಎಂದವರು ವ್ಯಕ್ತಪಡಿಸಿದ್ದಾರೆ.

ಚಾನೆಲ್‌ನ ಪ್ರತಿನಿಧಿಯ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆಯನ್ನು ಅವರು ನೀಡಿದ್ದಾರೆ. ಬ್ಯಾಂಕುಗಳು ಮತ್ತಿತರ ಕಡೆಗಳಿಂದ ಸಾರ್ವಜನಿಕರು ಸಾಲ ಪಡೆಯುತ್ತಾರೆ. ಅಂತಹ ಸಾಲಗಳಿಗೆ ಬಡ್ಡಿಯನ್ನು ಕೂಡಾ ಪಡೆಯಲಾಗುತ್ತದೆ.

ಬಡ್ಡಿ ಸಹಿತವಾದ ಸಾಲ ಪಡೆಯುವುದು ಮತ್ತು ನೀಡುವುದನ್ನು ಅಲ್ಲಾಹನು ಅಸಹ್ಯ ಪಟ್ಟಿದ್ದಾನೆ. ಆದ್ದರಿಂದ ಅದು ನಿಷಿದ್ದವಾಗಿದೆ. ಅಲ್ಲಾಹನನ್ನು ಭಯಪಡುವವರು ಅಂತಹ ಸಾಲದ ಒಪ್ಪಂದಗಳಿಂದ ದೂರ ಉಳಿದುಕೊಳ್ಳಬೇಕು ಎಂದು ಶೈಖ್ ಸಾದ್ ಬಿನ್ ನಸ್ಸಾನ್ ಅಲ್ ಶಾತಿರಿ ಹೇಳಿದರು.

error: Content is protected !! Not allowed copy content from janadhvani.com