ಅಬುಧಾಬಿ: ನಾಳೆಯಿಂದ ಅಬುಧಾಬಿ ರಸ್ತೆಗಳಲ್ಲಿ ಪ್ರತಿ ಗಂಟೆಗೆ 20 ಕಿಲೋಮೀಟರ್, ಗರಿಷ್ಠ ವೇಗಮಿತಿಗಿಂದ ಹೆಚ್ಚು ವೇಗದಲ್ಲಿ ಸಂಚರಿಸಬಹುದೆಂಬ ಅನುಮತಿಯನ್ನು ರದ್ದು ಮಾಡಲಾಗುವುದು. ಹೊಸ ವೇಗದ ಮಿತಿಯನ್ನು ಆಗಸ್ಟ್ 12 ರಿಂದ ಜಾರಿಗೆ ತರಲಾಗುವುದು ಎಂದು ಅಬುಧಾಬಿ ಪೊಲೀಸರು ತಿಳಿಸಿದ್ದಾರೆ.
100 ಕಿ.ಮೀ. ಇರುವ ಕಡೆ 120 ಕಿ.ಮೀ. ವೇಗದಲ್ಲಿ ಸಂಚರಿಸುವುದು ಕಾನೂನುಬದ್ಧವಾಗಿದ್ದವು. ಆದರೆ, ಆಗಸ್ಟ್ 12ರಿಂದ ಅಬುಧಾಬಿ ರಸ್ತೆಗಳಲ್ಲಿನ ವೇಗದ ಮಿತಿಯನ್ನು ಮೀರಿದವರಿಗೆ ದಂಡ ವಿಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯರಸ್ತೆಗಳು ಮತ್ತು ಒಳರಸ್ತೆಗಳಲ್ಲಿಯೂ ಹೆಚ್ಚುವರಿ ವೇಗವನ್ನು ಅನುಮತಿಸಲಾಗಿದ್ದವು. ನಗರದ ಗರಿಷ್ಠ ವೇಗವು ಗಂಟೆಗೆ 60 ಕಿಮೀ ಮತ್ತು 80 ಕಿ.ಮೀ. ಆಗಿದೆ.
ಅಲ್ಲಿ ಒಂದು ಕಿಲೋ ಮೀಟರ್ ವೇಗ ಹೆಚ್ಚಾಗಿದ್ದರೂ ದಂಡ ಕಟ್ಟಬೇಕಾಗುತ್ತದೆ. ಅಬುಧಾಬಿ ರಸ್ತೆಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳಿಗೆ ಟ್ರಾಫಿಕ್ ಉಲ್ಲಂಘನೆಗಳೇ ಕಾರಣ ಎನ್ನುವ ಬಗ್ಗೆ ಅಧ್ಯಯನದಿಂದ ತಿಳಿದುಬಂದ ಕಾರಣ ಹೊಸ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಬುಧಾಬಿ ಪೊಲೀಸ್ ಮುಖ್ಯಸ್ಥ ಮೇಜರ್ ಜನರಲ್ ಮುಹಮ್ಮದ್ ಖಲ್ಫಾನ್ ಅಲ್ ರುಮೈತಿ ಹೇಳಿದರು.
ಹೊಸ ವೇಗ ಮಿತಿಯ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಅವರು ಹೇಳಿದರು.
ದುಬೈ, ಅಬುಧಾಬಿ ಮತ್ತು ಪಶ್ಚಿಮ ಪ್ರಾಂತಗಳಿಗೆ ಪ್ರಯಾಣಿಸುವವರು ಈ ಪರಿಷ್ಕರಣೆಯನ್ನು ಗಮನಿಸದಿದ್ದಲ್ಲಿ ಇಂದಿನಿಂದ ದಂಡ ಪಾವತಿಸಬೇಕಾದೀತು ಎಂದು ಎಚ್ಚರಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ