ದುಬೈ: ಕೈಗೆ ಬಂದ ಆರ್ಡರ್ ಅನ್ನು ನಿಗದಿತ ಸ್ಥಳಕ್ಕೆ ತಲುಪಿಸುವ ಧಾವಂತದಲ್ಲಿದ್ದರೂ, ರಸ್ತೆ ಬದಿಯ ಒಡೆದ ಪೈಪ್ ಅನ್ನು ಸರಿಪಡಿಸಿ ಸಂಚಾರಕ್ಕೆ ಉಂಟಾಗಿದ್ದ ಅಡಚಣೆಯನ್ನು ನಿವಾರಿಸಿದ ಭಾರತೀಯ ಯುವಕನನ್ನು ದುಬೈ ಸರ್ಕಾರ ಗೌರವಿಸಿದೆ.
ಮಹಮ್ಮದ್ ಪರ್ವೇಜ್ ಎಂಬ ಡೆಲಿವರಿ ಉದ್ಯೋಗಿಯನ್ನು ಜಬಲ್ ಅಲಿಯಲ್ಲಿರುವ ಪರ್ಮನೆಂಟ್ ಕಮಿಟಿ ಆಫ್ ಲೇಬರ್ ಅಫೇರ್ಸ್ ಕಚೇರಿಗೆ ಆಹ್ವಾನಿಸಿ ಅಧಿಕಾರಿಗಳು ಗೌರವಿಸಿದರು. ಓರ್ವ ಸ್ಥಳೀಯ ನಾಗರಿಕರು ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಬಳಿಕ ಪರ್ವೇಜ್ ಅವರ ಮಾದರಿ ಕಾರ್ಯ ಜಗತ್ತಿನ ಗಮನ ಸೆಳೆಯಿತು.
ವೀಡಿಯೊ ವೈರಲ್ ಆದ ಬಳಿಕ ಈ ವಿಚಾರ ಅಧಿಕಾರಿಗಳ ಗಮನಕ್ಕೂ ಬಂದಿತು. ಜಿಡಿಆರ್‌ಎಫ್‌ಎ ದುಬೈ ಅಧೀನದಲ್ಲಿರುವ ಪರ್ಮನೆಂಟ್ ಕಮಿಟಿ ಆಫ್ ಲೇಬರ್ ಅಫೇರ್ಸ್‌ನ ಅಬ್ದುಲ್ಲಾ ಲಶ್ಕರಿ ಅವರು ಪರ್ವೇಜ್ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಅಭಿನಂದಿಸಿದರು. ಬಳಿಕ ಪ್ರಮಾಣಪತ್ರ ಮತ್ತು ಬಹುಮಾನವನ್ನು ಹಸ್ತಾಂತರಿಸಿದರು.
ಆರ್ಡರ್ ತಲುಪಿಸಲು ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ನೀರು ನಿಂತಿರುವುದು ಹಾಗೂ ಸಂಚಾರಕ್ಕೆ ಅಡಚಣೆ ಉಂಟಾಗಿರುವುದು ಪರ್ವೇಜ್ ಅವರ ಗಮನಕ್ಕೆ ಬಂತು. ರಸ್ತೆ ಬದಿಯ ಪೈಪ್‌ನಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದನ್ನು ಗಮನಿಸಿದ ಅವರು ಬೈಕ್ ನಿಲ್ಲಿಸಿ ಪೈಪ್ ಸರಿಪಡಿಸಲು ಮುಂದಾದರು.
ಆರಂಭಿಕ ಪ್ರಯತ್ನಗಳು ವಿಫಲವಾದರೂ ಹಿಂದೆ ಸರಿಯದೆ ಮತ್ತೆ ಪ್ರಯತ್ನಿಸಿದ ಪರ್ವೇಜ್, ಕೊನೆಗೂ ಪೈಪ್ ಅನ್ನು ಸರಿಪಡಿಸಿ ರಸ್ತೆಗೆ ಹರಿಯುತ್ತಿದ್ದ ನೀರಿನ ಪ್ರಮಾಣವನ್ನು ನಿಯಂತ್ರಿಸಿದರು.
ಯಾರೂ ಕೇಳದಿದ್ದರೂ, ಇದರಿಂದ ತಮ್ಮ ಕೆಲಸ ವಿಳಂಬವಾಗಬಹುದು ಎಂಬುದನ್ನೂ ಲೆಕ್ಕಿಸದೆ ಸಾರ್ವಜನಿಕ ಸಮಸ್ಯೆಯನ್ನು ಪರಿಹರಿಸಲು ಮುಂದಾದ ಪರ್ವೇಜ್ ಅವರ ಕಾರ್ಯವನ್ನು ದಾರಿಹೋಕರಾಗಿದ್ದ ಸ್ಥಳೀಯ ನಾಗರಿಕರೊಬ್ಬರು ಚಿತ್ರೀಕರಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ದೃಶ್ಯಗಳು ವ್ಯಾಪಕವಾಗಿ ಹರಡುತ್ತಿದ್ದಂತೆ ಅವರ ಜವಾಬ್ದಾರಿಯುತ ನಡೆ ಮತ್ತು ಮಾನವೀಯತೆಯನ್ನು ಹಲವರು ಪ್ರಶಂಸಿಸಿದರು.
ಅನಿರೀಕ್ಷಿತವಾಗಿ ದೊರೆತ ಗೌರವ ಮತ್ತು ಆತ್ಮೀಯ ಸ್ವಾಗತಕ್ಕೆ ಸಂತಸ ವ್ಯಕ್ತಪಡಿಸಿದ ಪರ್ವೇಜ್, ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು. “ಐ ಲವ್ ಯೂ ದುಬೈ” ಎಂಬ ಮಾತುಗಳ ಮೂಲಕ ಅವರು ತಮ್ಮ ಸಂತೋಷವನ್ನು ಹಂಚಿಕೊಂಡರು.















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ