ಅಬುಧಾಬಿ: ಅಬುಧಾಬಿಯು ಭಾರತದ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಡುತ್ತಿದೆ.
ಕಳೆದ ಐದು ತಿಂಗಳಲ್ಲಿ ಸುಮಾರು 1.67 ಲಕ್ಷ ಭಾರತೀಯ ಪ್ರವಾಸಿಗರು ಅಬುಧಾಬಿಗೆ ತೆರಳಿದ್ದಾರೆ.ಹೋಟೆಲ್ ಗಳು ಮತ್ತು ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವವರ ಸಂಖ್ಯೆಯು ಹೆಚ್ಚಾಗಿದೆ. ಪ್ರವಾಸೋದ್ಯಮ ಇಲಾಖೆಯ ಅನುಸಾರ, ಅಬುಧಾಬಿಗೆ ಬರುವ ಒಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿ 4.9 ಶೇಕಡಾ ಹೆಚ್ಚಾಗಿದೆ.
ಚೀನಾ, ಇಂಗ್ಲೆಂಡ್, ಅಮೆರಿಕಾ ಮತ್ತು ಜರ್ಮನಿ ಮುಂತಾದೆಡೆಯಿಂದಲೂ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಿದೆ. ಚೀನಾ ಪ್ರವಾಸಿಗರ ಸಂಖ್ಯೆಯು 19.9% ನಷ್ಟು ಹೆಚ್ಚಳವಾಗಿದ್ದು, ಅದು 1,92,500 ನಷ್ಷಾಗಿದೆ. ಅಬುಧಾಬಿಯ 163 ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಅಪಾರ್ಟ್ಮೆಂಟ್‌ಗಳಲ್ಲಿ 31,236 ಕೊಠಡಿಗಳಿವೆ. ಈ ವರ್ಷದ ಮೊದಲ ಐದು ತಿಂಗಳಲ್ಲಿ 20,73,586 ಜನರು ಇಲ್ಲಿ ವಾಸಿಸವಿದ್ದರು.
ಯಾಸ್ ಐಲ್ಯಾಂಡ್ ನಲ್ಲಿ ವಿಶ್ವದರ್ಜೆಯ ವಾರ್ನರ್ ಬ್ರದರ್ಸ್ ವರ್ಲ್ಡ್ ರೆಸಾರ್ಟ್ ಅನ್ನು ಸೆಪ್ಟೆಂಬರ್ 25 ರಂದು ತೆರೆಯಲಾಗುತ್ತದೆ. ಸಾದಿಯಾತ್ ದ್ವೀಪದಲ್ಲಿ ಸ್ಥಾಪಿಸಲಾಗುವ ಆಡಂಬರದ ರೆಸಾರ್ಟ್‌ನ್ನು ನವೆಂಬರ್ನಲ್ಲಿ ತೆರೆಯಲಾಗುತ್ತದೆ.
ಮೆಚ್ಚಿನ ಪರಂಪರೆಯ ತಾಣಗಳು
ದೇಶದ ಸಾಂಸ್ಕೃತಿಕ ಪ್ರದೇಶಗಳಿಗೆ ಭೇಟಿ ನೀಡುವ ಸಂದರ್ಶಕರ ಸಂಖ್ಯೆಯಲ್ಲಿಯೂ ಹಚ್ಚಳ ಉಂಟಾಗಿದೆ. ಅದಲ್ಲದೆ, ವಿಶ್ವದರ್ಜೆಯ ವ್ಯವಹಾರ ವ್ಯವಸ್ಥೆಯನ್ನು ಕೂಡ ತಯಾರು ಗೊಳಿಸಲಾಗಿದೆ.
ಹಚ್ಚ ಹಸಿರಿನ ನಗರವಾದ ಅಲ್ ಐನ್, ಒಂಟೆ ಮೇಳ ನಡೆಯುವ ಅಲ್ ದಫ್ರಾದ ಪಾರಂಪರಿಕ ತಾಣದ ನೋಟಗಳು, ಫೆರಾರಿ ವರ್ಲ್ಡ್, ಲುವ್ರ್ ಮ್ಯೂಸಿಯಂ, ಮರುಭೂಮಿ ಸಫಾರಿ, ಲಿವಾ ಖರ್ಜೂರ ಉತ್ಸವ ಮುಂತಾದವು ಪ್ರವಾಸಿಗಳನ್ನು ಅಬುಧಾಬಿಗೆ ಆಕರ್ಷಿಸುತ್ತಿದೆ.















ಇನ್ನಷ್ಟು ಸುದ್ದಿಗಳು
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ