ಕುವೈತ್ ಸಿಟಿ: ಈದ್ ಹಬ್ಬದ ನಂತರ ದೇಶದ ಸರ್ಕಾರಿ ಸಂಸ್ಥೆಗಳ ಕೆಲಸದ ಅವಧಿಯಲ್ಲಿ ಬದಲಾವಣೆ ಮಾಡಲಾಗುವುದು ಎಂದು ಕುವೈತ್ ಸಿವಿಲ್ ಸರ್ವಿಸ್ ಕಮಿಷನ್ ತಿಳಿಸಿದೆ. ಹೊಸ ನಿಯಮದಂತೆ, ದೈನಂದಿನ ಕೆಲಸದ ಅವಧಿಯನ್ನು 6 ಗಂಟೆಗಳಿಗೆ ಇಳಿಸಲಾಗಿದೆ. ಇದರೊಂದಿಗೆ ಕಚೇರಿಗಳಲ್ಲಿ ನೌಕರರ ಹಾಜರಾತಿಯನ್ನು ಶೇ. 30ಕ್ಕೆ ಸೀಮಿತಗೊಳಿಸಲಾಗಿದೆ.
ಉದ್ಯೋಗಿಗಳಿಗಾಗಿ ಸರದಿ (Rotation) ಪದ್ಧತಿಯನ್ನು ಜಾರಿಗೆ ತರಲಾಗುವುದು ಮತ್ತು ಅಗತ್ಯವಿರುವ ಕಡೆಗಳಲ್ಲಿ ‘ವರ್ಕ್ ಫ್ರಮ್ ಹೋಮ್’ (ಮನೆಯಿಂದಲೇ ಕೆಲಸ) ಮಾಡಲು ಅವಕಾಶ ನೀಡಲಾಗುವುದು. ಸಂಜೆಯ ಶಿಫ್ಟ್ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಈದ್ ರಜೆ ಮುಗಿದ ಮರುದಿನದಿಂದಲೇ ಈ ಹೊಸ ಸೂಚನೆಗಳು ಜಾರಿಗೆ ಬರಲಿವೆ. ಮುಂದಿನ ಆದೇಶದವರೆಗೆ ಈ ನಿಯಮ ಮುಂದುವರಿಯಲಿದೆ ಎಂದು ಕಮಿಷನ್ ಸ್ಪಷ್ಟಪಡಿಸಿದೆ.
















ಇನ್ನಷ್ಟು ಸುದ್ದಿಗಳು
ಈದ್ ಸಂಭ್ರಮದ ಮೇಲೆ ಯುದ್ಧದ ಛಾಯೆ: ಕುವೈತ್ ಗ್ರ್ಯಾಂಡ್ ಮಸೀದಿಯಲ್ಲಿ ಈದ್ ಪ್ರಾರ್ಥನೆ ರದ್ದು
ಕುಟುಂಬ ಸಂದರ್ಶಕ ವೀಸಾದಲ್ಲಿರುವ ಭಾರತೀಯರ ಮಾಹಿತಿ ಸಂಗ್ರಹಕ್ಕೆ ರಾಯಭಾರ ಕಚೇರಿ ಕ್ರಮ
ಅನಿವಾರ್ಯ ಪರಿಸ್ಥಿತಿ: ಸಂದರ್ಶಕ ವೀಸಾ ಅವಧಿ ಒಂದು ತಿಂಗಳು ಉಚಿತ ವಿಸ್ತರಣೆ
ಕುವೈತ್ ಮೇಲೆ ಕ್ಷಿಪಣಿ ದಾಳಿ- ಅಮೆರಿಕಾ ಸೇನಾ ವಿಮಾನಗಳು ಪತನ
ವಲಸಿಗರಿಗೆ ಶುಭ ಸುದ್ದಿ: ‘ಸಹಲ್’ ಅಪ್ಲಿಕೇಶನ್ ನಲ್ಲಿ ಪಾಸ್ಪೋರ್ಟ್ ವಿವರಗಳನ್ನು ನವೀಕರಿಸಲು ಸೌಲಭ್ಯ
ಕುವೈತ್ನಲ್ಲಿ ಚಾಲನಾ ಪರವಾನಗಿ ಕಾರ್ಯವಿಧಾನಗಳು ಮತ್ತಷ್ಟು ಕಠಿಣ
ಯಾತ್ರಿಕರ ಗಮನಕ್ಕೆ: ವಿದೇಶದಿಂದ ಔಷಧಿ ಸಾಗಿಸುವುದಕ್ಕೆ ನಿಯಂತ್ರಣ
ಇಸ್ರಾಅ್ ಮತ್ತು ಮಿ’ರಾಜ್ ಪ್ರಯುಕ್ತ ಜನವರಿ 18 ರಂದು ಸಾರ್ವಜನಿಕ ರಜೆ
ಬ್ಯಾಂಕ್ ಸಾಲ: ಮರುಪಾವತಿಸದ ವಲಸಿಗರು ವಿಮಾನ ನಿಲ್ದಾಣದಲ್ಲಿ ಬಂಧನ
ಕಿಂಗ್ ಫೈಸಲ್ ರಸ್ತೆಯಲ್ಲಿ 21 ದಿನಗಳವರೆಗೆ ಸಂಚಾರ ನಿರ್ಬಂಧ