janadhvani

Kannada Online News Paper

ಡಿಕೆಯಸ್ಸಿ ತುಖ್ಬಾ ಘಟಕದಿಂದ ಲೈಲತುಲ್ ಖದ್ರ್ ಸಂದೇಶ ಹಾಗೂ ಇಫ್ತಾರ್ ಕೂಟ

ತುಖ್ಬಾ(ಸೌದಿ ಅರೇಬಿಯಾ) : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು, ದಮ್ಮಾಂ ವಲಯ ಅಧೀನದ ತುಖ್ಬಾ ಘಟಕದ ವತಿಯಿಂದ ಲೈಲತುಲ್ ಖದ್ರ್ ಸಂದೇಶ ಮತ್ತು ಇಫ್ತಾರ್ ಸೌಹಾರ್ದ ಕೂಟವು ಮಾರ್ಚ್ 13, 2026ರ ಶುಕ್ರವಾರದಂದು ತುಖ್ಬದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವು ಇಸ್ಮಾಯೀಲ್ ಕಾಟಿಪಳ್ಳ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ತುಖ್ಬ ಘಟಕದ ಅಧ್ಯಕ್ಷರಾದ ಜೆಪ್ಪು ಮುಹಮ್ಮದ್ ಹನೀಫ್ ಅವರು ಸಭಾಧ್ಯಕ್ಷತೆ ವಹಿಸಿ, ಆಗಮಿಸಿದ ಸರ್ವ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಡಿಕೆಯಸ್ಸಿ ಕೇಂದ್ರ ಮೀಡಿಯಾ ವಿಂಗ್ ಮುಖ್ಯಸ್ಥ ಇಸ್ಮಾಯೀಲ್ ಕಾಟಿಪಳ್ಳ ಅವರು ಸೂರಃ ಅಲ್-ಖದ್ರ್ ಪಠಿಸಿ, ಪವಿತ್ರ ಲೈಲತುಲ್ ಖದ್ರ್ ರಾತ್ರಿಯ ಮಹತ್ವ ಹಾಗೂ ಅದರ ಆಧ್ಯಾತ್ಮಿಕ ಸಂದೇಶದ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಸನ್ ಮೂಡುತೋಟ ಅವರು ತುಖ್ಬ ಘಟಕದ ಸಕ್ರಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕೇಂದ್ರ ಸಮಿತಿ ಹಣಕಾಸು ಕಾರ್ಯದರ್ಶಿ ದಾವೂದ್ ಕಜಮಾರ್ ಮಾತನಾಡಿ, ರಮಳಾನ್ ಕಾಲದ ಸತ್ಕರ್ಮಗಳು, ಮುಡಿಪು ಪ್ರದೇಶದಲ್ಲಿ ಡಿಕೆಯಸ್ಸಿಯ ನೂತನ ಯೋಜನೆಗಾಗಿ ಸ್ಥಳ ಖರೀದಿ ಹಾಗೂ ಮರ್ಕಝ್‌ನ ದೈನಂದಿನ ವೆಚ್ಚಗಳಿಗಾಗಿ ಜಾರಿಯಲ್ಲಿರುವ ‘ಉಸ್ರತುಲ್ ಇಹ್ಸಾನ್’ ಮಾಸಿಕ ಚಂದಾ ಪದ್ಧತಿಯ ಬಗ್ಗೆ ವಿವರಣೆ ನೀಡಿದರು.

ವೇದಿಕೆಯಲ್ಲಿ ದಮ್ಮಾಂ ವಲಯ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ, ವಿವಿಧ ಘಟಕಗಳ ಅಧ್ಯಕ್ಷರಾದ ಜಮಾಲ್ ಸ್ವಾಲಿಹ್ ಕಣ್ಣಂಗಾರ್ (ದಮ್ಮಾಂ), ಉಸ್ಮಾನ್ ಹೊಸಂಗಡಿ (ಅಲ್ ಖೋಬರ್), ಅಶ್ರಫ್ ಚಿಕ್ಕಮಗಳೂರು (ಮದದ್ ವಿಂಗ್), ಸ್ಥಾಪಕ ಸದಸ್ಯ ಅಬ್ದುಲ್ ಅಝೀಝ್ ಮೂಡುತೋಟ ಮತ್ತು ಅಶ್ರಫ್ ನಾವುಂದ ಉಪಸ್ಥಿತರಿದ್ದರು.

ತುಖ್ಬ ಘಟಕದ ಮಾಜಿ ಅಧ್ಯಕ್ಷರುಗಳಾದ ಅಬೂಬಕ್ಕರ್ ಹಂಡೇಲು, ಅಬ್ದುಲ್ ಹಮೀದ್ ಉಚ್ಚಿಲ, ಅಸೀಬ್ ರಹ್ಮಾನ್ ಮೂಳೂರು, ಸಲೀಂ ಉಪ್ಪಿನಂಗಡಿ, ಸಂಶೀರ್ ಉಚ್ಚಿಲ ಹಾಗೂ ಪದಾಧಿಕಾರಿಗಳಾದ ಅಬೂಬಕ್ಕರ್ ಬಜಗೋಳಿ, ಅಶ್ರಫ್ ಬಾವ ಆತ್ರಾಡಿ, ಅಬ್ದುರ್ರಹ್ಮಾನ್ ಮೂಳೂರು, ಬಾವಾಕ ಕಣ್ಣಂಗಾರ್ ಮತ್ತು ಪ್ರಧಾನ ಕಾರ್ಯದರ್ಶಿ ನೌಫಲ್ ಕಾಪು ಅವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

ಕೊನೆಯಲ್ಲಿ, ಕೇಂದ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು ಅವರು ಡಿಕೆಯಸ್ಸಿ ಹಮ್ಮಿಕೊಂಡಿರುವ ‘ರಮಳಾನ್ ಪಾಯಿಂಟ್’ ಅಭಿಯಾನಕ್ಕೆ ಎಲ್ಲರೂ ಉದಾರವಾಗಿ ಸಹಕರಿಸಬೇಕೆಂದು ವಿನಂತಿಸಿ, ಧನ್ಯವಾದ ಅರ್ಪಿಸಿದರು.

ಸದಸ್ಯರು ತನು-ಮನ-ಧನದ ಸಹಕಾರದೊಂದಿಗೆ ವ್ಯವಸ್ಥೆ ಮಾಡಿದ್ದ ಇಫ್ತಾರ್ ಕೂಟವು ಕಫ್ಫಾರತುಲ್ ಮಜ್ಲಿಸ್ ಹಾಗೂ ಸ್ವಲಾತಿನೊಂದಿಗೆ ಮುಕ್ತಾಯವಾಯಿತು.