ಕುವೈತ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್- ಕೆಸಿಎಫ್ ಫೌಂಡೇಶನ್ ಡೇ ಆಚರಣೆ ಸಮಾರಂಭವು ದಿನಾಂಕ ಫೆಬ್ರವರಿ 13 ಶುಕ್ರವಾರ ಮಗ್ರಿಬ್ ನಮಾಝ್ ನಂತರ ಸಾಲ್ಮೀಯ ಸುನ್ನಿ ಸೆಂಟರ್ ನಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನೊಂದಿಗೆ ಆರಂಭವಾಯಿತು.

ಪ್ರಧಾನ ಕಾರ್ಯದರ್ಶಿ ಮುಸ್ತಫ ಉಳ್ಳಾಲ ಸ್ವಾಗತಿಸಿದರು.ಸಂಘಟನಾ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಬಾದುಶ ಸಖಾಫಿ ಉದ್ಘಾಟನೆಗೈದರು.ಶಿಕ್ಷಣ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಶಾಹುಲ್ ಹಮೀದ್ ಸಅದಿ ಝುಹ್ರಿ ಕೆಸಿಎಫ್ ಡೇ ಬಗ್ಗೆ ವಿವರಿಸಿದರು. ಆಡಳಿತ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಫಾರೂಕ್ ಸಖಾಫಿ ರಮಳಾನ್ ತಿಂಗಳ ಬಗ್ಗೆ ತರಗತಿ ನಡೆಸಿದರು. ಕೆಸಿಎಫ್ ಅಂತರರಾಷ್ಟ್ರೀಯ ಆಡಳಿತ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಸಂಘಟನಾ ಚರ್ಚಾಕೂಟದಲ್ಲಿ ವಿಷಯ ಮಂಡಿಸಿ ಉಪಯುಕ್ತ ಸಲಹೆ ನೀಡಿದರು.




ಕೆಸಿಎಫ್ಅಂತರರಾಷ್ಟ್ರೀಯ ನಾಯಕರಾದ ಜನಾಬ್ ಝಕರ್ರಿಯ್ಯಾ ಆನೆಕಲ್ ಮತ್ತು ಜನಾಬ್ ಯಾಕೂಬ್ ಕಾರ್ಕಳ ಕಾರ್ಯಕ್ರಮದ ಅವಲೋಕನ ನಡೆಸಿ ವಿಷಯ ಮಂಡಿಸಿದರು.ನೋರ್ತ್ ಝೋನ್ ಅಧ್ಯಕ್ಷರಾದ ಬಹುಮಾನ್ಯ ಕಾಸಿಂ ಉಸ್ತಾದ್ ಬೆಲ್ಮ ಹಾಗೂ ಸೌತ್ ಝೋನ್ ನಾಯಕರಾದ ಜನಾಬ್ ಶಫೀಕ್ ಬೊಂದೆಲ್ ಆಶಂಷ ಕೋರಿದರು. ಮಹಬುಲ ಸೆಕ್ಟರ್ ಕಾರ್ಯಕರ್ತ ಜನಾಬ್ ಅರ್ಬಾಝ್ ಇಸ್ಲಾಮಿಕ್ ಹಾಡು ಹಾಡಿ ನೆರೆದವರನ್ನು ಮನರಂಜಿಸಿದರು.
ವಿಶೇಷ ಅತಿಥಿಯಾಗಿ ಆಗಮಿಸಿದ ಎಸ್.ಎಸ್.ಎಫ್ ರಾಷ್ಟ್ರೀಯ ನಾಯಕರಾದ ಉಬೈದ್ ಸಖಾಫಿ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.ಅಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಹಿತನುಡಿಗೈದು ದುಆ ನಡೆಸಿಕೊಟ್ಟರು.ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜನಾಬ್ ಅಬ್ಬಾಸ್ ಬಳಂಜೆ ಧನ್ಯವಾದಗೈದರು. ಕೆಸಿಎಫ್ ಡೇ ಪ್ರಯುಕ್ತ ಎರಡು ಝೋನ್ ಗಳಲ್ಲಿ ಕಾರ್ಯಕರ್ತರ ನಡುವೆ ಕ್ರಿಕೆಟ್ ಪಂಧ್ಯಾಟ ನಡೆಸಲಾಗಿತ್ತು. ಕೊನೆಯಲ್ಲಿ
ತಬರುಕ್ ನೀಡಲಾಯಿತು.
ವರದಿ :ಪ್ರಕಾಶನ ಮತ್ತು ಪ್ರಚಾರ ವಿಭಾಗ ಕೆಸಿಎಫ್ ಕುವೈಟ್
















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)