ಮಂಗಳೂರು, ಫೆ.17: ಇಂದು ರಂಝಾನ್ ತಿಂಗಳ ಚಂದ್ರದರ್ಶನವಾಗದ ಕಾರಣ ನಾಳೆ (ಬುಧವಾರ) ಶಅಬಾನ್ 30 ಪೂರ್ತಿಗೊಳಿಸಿ ಗುರುವಾರ(ಫೆ. 19)ರಂಝಾನ್ ಮೊದಲ ದಿನವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಹಾಗೂ ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಝಿಗಳು ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ, ಝೈನುಲ್ ಉಲಮಾ ಮಾಣಿ ಉಸ್ತಾದ್ ಹಾಗೂ ಉಳ್ಳಾಲ ಸಂಯುಕ್ತ ಜಮಾಅತ್ ಖಾಝಿಗಳಾದ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರ ಕಚೇರಿಗಳು ಪ್ರಕಟಣೆಯಲ್ಲಿ ತಿಳಿಸಿದೆ.
ಫೆಬ್ರವರಿ 19-2026 ಗುರುವಾರದಿಂದ ರಂಜಾನ್ ಆರಂಭಗೊಳ್ಳಲಿದ್ದು, ಈ ತಿಂಗಳನ್ನು ಮುಸ್ಲಿಮ್ ಸಮಾಜವು ಬಹಳ ಪವಿತ್ರ ಮತ್ತು ಭಕ್ತಿಯಿಂದ ಕಾಣುತ್ತದೆ. ಈ ತಿಂಗಳ ಹಗಲಿನಲ್ಲಿ ಕಡ್ಡಾಯ ವೃತವನ್ನು ಆಚರಿಸಿ ಹೆಚ್ಚೆಚ್ಚು ಪುಣ್ಯ ಕರ್ಮಗಳಲ್ಲಿ ತಮ್ಮನ್ನು ತೊಡಗಿಸುತ್ತಾರೆ. ರಾತ್ರಿಯಲ್ಲಿ ರಂಜಾನ್‌ನ ಪ್ರತ್ಯೇಕ ಪ್ರಾರ್ಥನೆಯಾದ ತರಾವೀಹ್ ನಲ್ಲೂ ಇತರ ಪ್ರಾರ್ಥನೆಗಳಲ್ಲೂ ಭಾಗಿಯಾಗುತ್ತಾರೆ.
ಇಸ್ಲಾಮ್ ಎಂಬ ಶಾಂತಿಯ ಸಂಕೇತವಾಗಿರುವ ಧರ್ಮದ ಅನುಯಾಯಿಗಳಾದ ಮುಸಲ್ಮಾನರು ಸದಾ ಶಾಂತಿಯನ್ನೇ ಬಯಸುವವರೂ, ಯಾವುದೇ ಜಾತಿ ಧರ್ಮದ ಬೇಧವಿಲ್ಲದೆ , ಇತರರೊಂದಿಗೆ ದಯೆಯನ್ನು ತೋರುವವರೂ, ಸಹಾಯ ಹಸ್ತವನನ್ನು ಚಾಚುವವರೂ ಆಗಿರುತ್ತಾರೆ. ಅದು ಅಲ್ಲಾಹನ ಮತ್ತು ಪ್ರವಾದಿ ಪೈಗಂಬರರ ಸಂದೇಶವಾಗಿರುತ್ತದೆ. ರಂಜಾನ್ ತಿಂಗಳಿನಲ್ಲಿ ನಡೆಸುವ ಪ್ರತಿಯೊಂದು ಪುಣ್ಯ ಕಾರ್ಯಗಳಿಗೆ 70 ಪಟ್ಪು ಹೆಚ್ಚು ಪ್ರತಿಫಲ ದೊರೆಯುತ್ತಿದೆ.
ರಂಜಾನ್ ಸಾಮಾನ್ಯವಾಗಿ 29 ಅಥವಾ 30 ದಿನಗಳಿರಲಿದೆ. ರಂಜಾನ್‌ನ 29 ನೇ ದಿನ ಶವ್ವಾಲ್ ತಿಂಗಳ ಚಂದ್ರ ದರ್ಶನವು ಇದರ ಅವಧಿಯನ್ನು ನಿರ್ಧರಿಸುತ್ತದೆ.ಅಂದು ಚಂದ್ರ ದರ್ಶನವಾದಲ್ಲಿ ಮರುದಿನ ಈದುಲ್ ಫಿತರ್ ಆಚರಿಸಲಾಗುತ್ತದೆ. ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದಿದ್ದಲ್ಲಿ ರಂಜಾನ್ 30 ದಿನ ಪೂರ್ತೀಕರಿಸಿ ಮರುದಿನ ಈದ್ ಆಚರಿಸಲಾಗುತ್ತದೆ.
















ಇನ್ನಷ್ಟು ಸುದ್ದಿಗಳು
ಬೈತಡ್ಕ ಉರೂಸ್: ಸಾವಿರ ಕೆಜಿ ಸಕ್ಕರೆ ಸಂಗ್ರಹಿಸಿ ಗಮನ ಸೆಳೆದ ‘ಮಾಲೆಂಗ್ರಿ ಫ್ರೆಂಡ್ಸ್’ ವಾಟ್ಸಾಪ್ ತಂಡ
ಡಿಕೆಯಸ್ಸಿ ತಬೂಕ್ ಘಟಕದ ವಾರ್ಷಿಕ ಮಹಾಸಭೆ
ಪಶ್ಚಿಮ ಏಷ್ಯಾ ಬಿಕ್ಕಟ್ಟು: ಗಲ್ಫ್ ರಾಷ್ಟ್ರಗಳಿಂದ 8.43 ಲಕ್ಷ ಭಾರತೀಯರು ವಾಪಸ್
ಶಾಫಿ ಸಅದಿ ವಿರುದ್ಧ ಸುಳ್ಳು ಸುದ್ದಿ ಪ್ರಕಟ: ‘ಮಿನಾರಂ’ ಡಿಜಿಟಲ್ ಪತ್ರಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ
ಎಪ್ರಿಲ್ 12: ಮಾದರಿ ಮದುವೆ ಅಭಿಯಾನ ಸಮಾರೋಪದ ಪ್ರಚಾರಾರ್ಥ ಸಾಂಘಿಕ ನಾಯಕರ ಸಭೆ
ಕಾಟಿಪಳ್ಳ: ನೂತನ ಮದ್ರಸ ಕಟ್ಟಡ ಉದ್ಘಾಟನಾ ಸಮಾರಂಭ- ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ
ಶರಫುಲ್ ಉಲಮಾ 7ನೇ ವಾರ್ಷಿಕ ಅನುಸ್ಮರಣೆ- ಮೇ 13, 14 ರಂದು ವಿವಿಧ ಕಾರ್ಯಕ್ರಮ
ಬಶೀರ್ ಕಿನ್ಯ ಅವರಿಗೆ ಸಮ್ಮೇಳನಾಧ್ಯಕ್ಷತೆಯ ಗೌರವ: ಸಾಹಿತ್ಯ ಲೋಕದ ಬಹುಭಾಷಾ ಪಂಡಿತನಿಗೆ ಒಲಿದ ಮನ್ನಣೆ
ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಉಚಿತ ಪ್ರಯಾಣ- ಐತಿಹಾಸಿಕ ‘ಮಕ್ಕಳ ಸ್ನೇಹಿ ಸಾರಿಗೆ’ ಯೋಜನೆ ಸಿದ್ಧ
ಕಿನ್ಯಾ ‘ಗೋಲ್ಡನ್ ಹೆಲ್ತ್’ ಶಿಲಾನ್ಯಾಸ: ರೋಗ ಬರದಂತೆ ತಡೆಯುವ ಜನಜಾಗೃತಿ ಇಂದಿನ ಅಗತ್ಯ- ಸ್ಪೀಕರ್ ಯು.ಟಿ. ಖಾದರ್