ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಮ್ಮಾಮ್ ವಲಯದ 30ನೇ ವಾರ್ಷಿಕ ಮಹಾಸಭೆ 13 ಫೆಬ್ರವರಿ 2026 ಶುಕ್ರವಾರ ಜುಮಾ ನಮಾಝಿನ ಬಳಿಕ 1.30 ಕ್ಕೆ ಸರಿಯಾಗಿ ದಮ್ಮಾಂನಲ್ಲಿ ಜರಗಿತು.
ಡಿಕೆಯಸ್ಸಿ ದಮ್ಮಾಮ್ ಝೋನ್ ಅಧ್ಯಕ್ಷ ಅಬ್ದುಲ್ ಹಮೀದ್ ಕಾಪುರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ತಂಙಳ್ ಉಚ್ಚಿಲ ರವರ ದುಆದ ಬಳಿಕ ಇಸ್ಮಾಯೀಲ್ ಕಾಟಿಪಳ್ಳ ಪವಿತ್ರ ಖುರ್ ಆನ್ ಸೂರ: ಅಲ್ ಬಖರ ಆಯತ್ ನಂಬ್ರ: 183 ರಿಂದ 185 ರ ತನಕ ಪಾರಾಯಣ ಗೈದರು.



ಡಿಕೆಯಸ್ಸಿ ದಮ್ಮಾಂ ಝೋನ್ ಹಣಕಾಸು ಕಾರ್ಯದರ್ಶಿ ಅಬ್ದುಲ್ ಕರೀಂ ಪಾಣೆಮಂಗಳೂರು ಸಭೆಗೆ ಆಗಮಿಸಿದ ಹಫರ್ ಅಲ್ ಬಾತಿನ್, ಅಲ್ ಹಸ್ಸ , ಜುಬೈಲ್, ಯೂತ್ ವಿಂಗ್ ಜುಬೈಲ್, ತುಖ್ಬಾ, ಅಲ್ ಖೋಬರ್ ಮತ್ತು ದಮ್ಮಾಂ ಘಟಕಗಳ ಸದಸ್ಯರನ್ನು ಸ್ವಾಗತಿಸಿದರು.
ಡಿಕೆಯಸ್ಸಿ ಕೇಂದ್ರ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಸನ್ ಮೂಡುತೋಟ ಡಿಕೆಯಸ್ಸಿ 30 ವರ್ಷಗಳ ಸಾರ್ಥಕ ಸಾಧನೆಗಳನ್ನು ವಿವರಿಸುತ್ತಾ ಅಲ್ಲಾಹನ ಪವಿತ್ರ ನಾಮದೊಂದಿಗೆ ಸಮಾರಂಭವನ್ನು ಉದ್ಘಾಟಿಸಿದರು.



ಕಛೇರಿ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳ ರವರು ವಾರ್ಷಿಕ ವರದಿ ಹಾಗೂ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ವಾರ್ಷಿಕ ಪ್ರವರ್ತನಾ ವರದಿಯನ್ನು ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆದರು.
ಉತ್ತಮ ಪ್ರವರ್ತನೆಗಳನ್ನು ನಿರ್ವಹಿಸಿದ ಘಟಕಗಳಿಗೆ ಹಾಗೂ ಯಶಸ್ವಿ ಫ್ಯಾಮಿಲಿ ಮುಲಾಖಾತ್ 2025 ಸಮಿತಿಗೆ
APPRECIATION AWARD 2025 ಮೊಮೆಂಟೊ ನೀಡಿ ಗೌರವಿಸಲಾಯಿತು.
ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಅಬ್ದುಲ್ ಹಮೀದ್ ಕಾಪುರವರು ಮಾತನಾಡಿ ಅಲ್ಲಾಹನ ಸಂತೃಪ್ತಿಗಾಗಿ ಮಾತ್ರ ನಾವು ಪ್ರವರ್ತನೆ ಗೈಯ್ಯಬೇಕು ಹಾಗೂ ಅಭಿವೃದ್ಧಿಗೊಳಿಸಬೇಕು ಎಂದು ತಿಳಿಸಿದರು ಹಾಗೂ ನನ್ನ ಅಧಿಕಾರವಧಿಯಲ್ಲಿ ತಾವುಗಳು ನನ್ನೊಂದಿಗೆ ಸಹಕರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಚುನಾವಣಾಧಿಕಾರಿಯಾಗಿ
ಡಿಕೆಯಸ್ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕಣ್ಣಂಗಾರ್ ರವರು
2026-27 ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಿದರು.


2026-27 ನೂತನ ಸಮಿತಿ ಪದಾಧಿಕಾರಿಗಳು:
ಡೆವಲಪ್ ಮೆಂಟ್ ಚೆಯರ್ಮ್ಯಾನ್:
ಅಬ್ದುಲ್ ಹಮೀದ್ ಕಾಪು
ಅಧ್ಯಕ್ಷರು:ಅಶ್ರಫ್ ನಾಳ
ಪ್ರಧಾನ ಕಾರ್ಯದರ್ಶಿ:ಶಾಫಿ ಶುಐಬ್ ಮಂಗಳೂರು
ಹಣಕಾಸು ಕಾರ್ಯದರ್ಶಿ:ಅಬೂಬಕ್ಕರ್ ಬರ್ವ ಉಪಾಧ್ಯಕ್ಷರುಗಳು:
ಸಿರಾಜ್ ಕುಂತೂರು (ಹಫರ್)
ಅಬೂಬಕ್ಕರ್ ಅಜಿಲಮೊಗರು
ಸಮೀರ್ ಪಲಿಮಾರ್
ಕಾರ್ಯದರ್ಶಿಗಳು:
ಜಮಾಲ್ ಸ್ವಾಲಿಹ್ ಕಣ್ಣಂಗಾರ್
ಅನ್ವರ್ ಪಡುಬಿದ್ರಿ
ಸಂವಹನ ಕಾರ್ಯದರ್ಶಿ:
ಅಬ್ದುಲ್ ಕರೀಂ ಪಾಣೆಮಂಗಳೂರು
ಮುಖ್ಯ ಸಲಹೆಗಾರರು:
ಹಾತಿಮ್ ಕೂಳೂರು,
ಸಲಹೆಗಾರರು:
ಮುಹಮ್ಮದ್ ಹಸನ್ ಮೂಡುತೋಟ
ಅಬ್ದುಲ್ ಅಝೀಝ್ ಆತೂರು
ಕೆ.ಎಚ್. ರಫೀಖ್ ಸೂರಿಂಜೆ
ಅಬ್ದುಲ್ ಅಝೀಝ್ ಮೂಳೂರು
ಓರ್ಗನೈಝರ್ಸ್:
ದಾವೂದ್ ಕಜಮಾರ್
ಅಬ್ದುಲ್ ಅಝೀಝ್ ಮೂಡುತೋಟ
ಸುಲೈಮಾನ್ ಮಿಲನ್ ಸೂರಿಂಜೆ
ಕಛೇರಿ ಕಾರ್ಯದರ್ಶಿ: ಇಸ್ಮಾಯೀಲ್ ಕಾಟಿಪಳ್ಳ
ಲೆಕ್ಕ ಪರಿಶೋಧಕರು: ಮುಹಮ್ಮದ್ ರೋಯಲ್ ಮುಕ್ವೆ.
ಉಳಿದ ಸದಸ್ಯರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಗೊಳಿಸಲಾಯಿತು.
ನೂತನವಾಗಿ ಆಯ್ಕೆಗೊಂಡ ದಮ್ಮಾಂ ವಲಯ ಅಧೀನಕ್ಕೊಳಪಟ್ಟ ಘಟಕಗಳಿಗೆ ಅಭಿನಂದನೆಗಳ ಬ್ರೋಶರನ್ನು ನೀಡಲಾಯಿತು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಅಶ್ರಫ್ ನಾಳರವರು ಮಾತನಾಡುತ್ತಾ ಇನ್ನು ಮುಂದಕ್ಕೂ ಹೆಚ್ಚಿನ ಪ್ರವರ್ತನೆಯನ್ನು ಡಿಕೆಯಸ್ಸಿಗಾಗಿ ಮೀಸಲಿಟ್ಟು ನಮ್ಮೊಂದಿಗೆ ಸಹಕರಿಸಿ ಯಶಸ್ವಿಗೊಳಿಸಿರಿ ಎಂದು ನುಡಿದರು.
ಸಮಾರಂಭದ ಕೊನೆಯಲ್ಲಿ ಕಛೇರಿ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳ ಧನ್ಯವಾದ ಹಾಗೂ ಕಾರ್ಯಕ್ರಮ ನಿರೂಪಿಸಿದರು.







