ನವದೆಹಲಿ, ಜು.5- ಗೋರಕ್ಷಣೆ ಹೆಸರಲ್ಲಿ ನಡೆಯುವ ಹಿಂಸಾಚಾರಕ್ಕೆ ತುತ್ತಾದವರಿಗೆ ಪರಿಹಾರ ಕೊಡುವುದು ಕುರಿತಂತೆ ಮಾರ್ಗಸೂಚಿಯನ್ನು ನಿಗದಿಪಡಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ಪರಿಹಾರ ನೀಡಿಕೆ ವಿಷಯದಲ್ಲಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರ ಅಭಿಪ್ರಾಯವನ್ನು ಬದಿಗಿರಿಸಿರುವ ಸುಪ್ರೀಂಕೋರ್ಟ್ ಪರಿಹಾರ ನೀಡುವಾಗ ಜಾತಿ, ಲಿಂಗದ ಆಧಾರದಲ್ಲಿ ನೀಡಲು ಬರುವುದಿಲ್ಲ ಎಂದು ಹೇಳಿದೆ.
ಗುಂಪು ಹಿಂಸಾಚಾರದಲ್ಲಿ ಯಾರೇ ಬಲಿಯಾಗಬಹುದು. ಅವರನ್ನು ಇಂತಹ ಸಮುದಾಯಕ್ಕೆ ಸೇರಿದವರು ಎಂದು ಪ್ರತ್ಯೇಕವಾಗಿ ಪರಿಗಣಿಸಲಾಗದು ಎಂದು ಸುಪ್ರೀಂ ನ್ಯಾಯಪೀಠ ಹೇಳಿದೆ.
ಗೋರಕ್ಷಣೆ ಹೆಸರಲ್ಲಿ ನಡೆಯುವ ಹಿಂಸಾಚಾರಕ್ಕೆ ತುತ್ತಾದವರಿಗೆ ಪರಿಹಾರ ನೀಡುವಾಗ ಅವರ ಧರ್ಮ, ಜಾತಿ, ಲಿಂಗ ಆಧಾರವನ್ನು ಪರಿಗಣಿಸಿ ವಿಶೇಷ ಪರಿಹಾರ ನೀಡಬೇಕು ಎಂದು ಇಂದಿರಾ ಜೈಸಿಂಗ್ ಹೇಳಿದ್ದರು.