janadhvani

Kannada Online News Paper

ಮರೆಯಾದ ಮಹಾನ್ ಸಾಧಕ, ಅನಾಥ ನಿರ್ಗತಿಕರ ಆಶ್ರಯದಾತ, ಸಾಧು ಸ್ವಭಾವದ ಷರೀಫ್ ಸಖಾಫಿ ಉಸ್ತಾದ್

ಯತೀಮ್ ಮಿಸ್ಕೀನ್ ಮಕ್ಕಳನ್ನು ಸ್ವಂತ ಮಕ್ಕಳಂತೆ ಪ್ರೀತಿಸುತ್ತಿದ್ದ ಉಸ್ತಾದ್ ಇಂದು ಸ್ವಂತ ಮಕ್ಕಳನ್ನು ಯತೀಮಾಗಿಸಿ ಯಾತ್ರೆ ಹೊರಟರು

✍️ ಹನೀಫ್ ಅಝ್ಹರಿ ತೀರ್ಥಹಳ್ಳಿ
(ದೀರ್ಘ ಕಾಲ ಶರೀಫ್ ಸಖಾಫಿ ಉಸ್ತಾದರ ಶಿಷ್ಯ)

ಇಲ್ಲದ ಯಾವುದೇ ವಿಷಯ ವಿಚಾರಗಳನ್ನು ಸೇರಿಸಿಲ್ಲ, ಇದ್ದ ಎಲ್ಲಾ ವಿಷಯವನ್ನು ಹೇಳಿಯೂ ಇಲ್ಲ ಉಸ್ತಾದರ ಜೀವನದ ಕೆಲವು (ಅಲ್ಪ ಸ್ವಲ್ಪ) ವಿಷಯಗಳನ್ನು ನಿಮ್ಮ ಮುಂದಿಟ್ಟಿದ್ದೇನೆ.

▪️ಸಾಗರದ ಮರ್ಕಝುಲ್ ಉಲೂಂ ಸಂಸ್ಥೆ ಯನ್ನು ಬಾನೆತ್ತರಕ್ಕೆ ಬೆಳೆಸಿದ ಮಹಾನ್ ಸಾಧಕ ಉಸ್ತಾದ್ ಅದರ ಒಂದು ಭಾಗ 8 ವರ್ಷಗಳಿಂದ SSLC 100% ಪಡೆಯುತ್ತಿರುವುದು ಮತ್ತು ಅಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಸಖಾಫಿ ಸಅದಿ ಅಝ್ಹರಿ ಗಳಾಗಿ ಸೇವೆ ಸಲ್ಲಿಸುತ್ತಿರುವುದು
▪️ಯತೀಮ್ ಮಿಸ್ಕೀನ್ ಮಕ್ಕಳನ್ನು ಸ್ವಂತ ಮಕ್ಕಳಂತೆ ಪ್ರೀತಿಸುತ್ತಿದ್ದ ಉಸ್ತಾದ್ ಇಂದು ಸ್ವಂತ ಮಕ್ಕಳನ್ನು ಯತೀಮಾಗಿಸಿ ಯಾತ್ರೆ ಹೊರಟರು
▪️ನಗುಮುಖ ಮತ್ತು ಸಾಧುಸ್ವಭಾವದಲ್ಲೇ ಬದುಕಿ ಸಾವಿರಾರು ಶಿಷ್ಯಂದಿರು ಮತ್ತು ಅಭಿಮಾನಿ ಗಳನ್ನು ದುಃಖ ಸಾಗರದಲ್ಲಿ ಮುಳುಗಿಸಿ ಯಾತ್ರೆ ಯಾದ ಉಸ್ತಾದ್
▪️ಆಹೋರಾತ್ರಿ ಮರ್ಕಝುಲ್ ಉಲೂಂ ಇದರ ಉನ್ನತಿಗೆ ಶ್ರಮಿಸಿ ಶತ್ರುಗಳು ಕೂಡಾ ನೋಡಿ ನಿಬ್ಬೆರಗಾಗುವ ರೀತಿಯಲ್ಲಿ ಬೆಳೆಸಿದ ಉಸ್ತಾದ್
▪️ಯಾವುದೇ ತೀರ್ಮಾನ ಗಳಿಗೂ ಧೃತಿಗೆಡದೆ ಸದಾ ತಾಳ್ಮೆ ಮತ್ತು ಸಹನೆಯನ್ನೇ ಬದುಕಾಗಿಸಿ ತೋರಿಸಿಕೊಟ್ಟ ಉಸ್ತಾದ್
▪️ಹೀಗೆ ಸಾವಿರಾರು ಸಾಧನೆಗಳನ್ನು ಚಿಕ್ಕ ಸಮಯದಲ್ಲೇ ಮುಗಿಸಿ ದೀರ್ಘ ಕಾಲದ ಯಾತ್ರೆಗೆ ಬೇಕಾದ ಎಲ್ಲಾ ತಯಾರಿಗಳನ್ನು ನಡೆಸಿ ಯಾತ್ರೆ ಹೊರಟ ಉಸ್ತಾದ್

ಹೌದು ಇಡೀ ಸಾಗರ ಮಾತ್ರವಲ್ಲ ಶಿಷ್ಯ ವೃಂದ ಬಂದು ಬಳಗ ಒಮ್ಮೆಲೇ ಮೂಕವಿಸ್ಮಯರಾದ ಸಮಯ… ಷರೀಫ್ ಸಖಾಫಿ ಉಸ್ತಾದ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೇಳಿದ ಕ್ಷಣ ಪ್ರಾರ್ಥನೆಗಳು ಮೊಳಗಿತು. ಉಸ್ತಾದರ ಷಿಫಾಗೆ ಬೇಕಾಗಿ ನಿರಂತರ ಸ್ವಲಾತ್ ಗಳ ಮೂಲಕ ಕುರ್ ಆನ್ ಗಳನ್ನು ಓದಿ ಎಲ್ಲರೂ ದುಆ ಮಾಡಿದರು. ಎಲ್ಲಿಯವರೆಗೆ ಎಂದರೆ ಶೈಖುನಾ ಸುಲ್ತಾನುಲ್ ಉಲಮಾರ ಬುಖಾರಿ ದರ್ಸಿನಲ್ಲಿ ಸಮೇತ. ಖಲೀಲುಲ್ ಬುಖಾರಿ ತಂಗಳ್ ಮಕ್ಕಾದಿಂದ ಸಮೇತ. ಮದನೀಯಂ ಮಜ್ಲಿಸ್ ನಲ್ಲಿ ಮದ್ರಸಾಗಳಲ್ಲಿ ದರ್ಸ್ ಗಳಲ್ಲಿ ಪುಟಾಣಿ ಕಂದಮ್ಮಗಳು ಸಮೇತ ಕೈಗಳನ್ನು ಎತ್ತಿ ಬೇಡಿದರು. ಎಲ್ಲರ ಮನಸ್ಸು ಉಸ್ತಾದರು ಆದಷ್ಟು ಬೇಗನೆ ಷಿಫಾ ಆಗಿ ಬರುವುದನ್ನು ನೋಡುವ ಹಂಬಲದಲ್ಲಿತ್ತು. ಆದರೆ ಸೃಷ್ಟಿಕರ್ತನ ತೀರ್ಮಾನ ಬೇರೆಯೇ ಆಗಿತ್ತು. ಝುಲ್ ಹಿಜ್ಜಾ ತಿಂಗಳು ಅರಫಾ ದಿನದಂದು ಶುಕ್ರವಾರದಂದು ಅದೂ ಕೂಡ ಜುಮಾಕ್ಕೆ ಸ್ವಲ್ಪ ಮುಂಚೆ ಅಲ್ಲಾಹನ ಕರೆಗೆ ಓಗೊಟ್ಟರು. ಎಲ್ಲರೂ ಆಗ್ರಹಿಸುವ ಮರಣ ಷರೀಫ್ ಸಖಾಫಿ ಉಸ್ತಾದರಿಗೆ ಅಲ್ಲಾಹನು ಬರೆದಿದ್ದನು. ಕಾರಣ ಉಸ್ತಾದರು ಮಾಡಿದ ಸೇವನೆ ಗಳಾಗಿರಬಹುದು.

2008 ರಲ್ಲಿ ಸಾಗರದ ಮರ್ಕಝುಲ್ ಉಲೂಂ ಗೆ ಕಾಲಿಟ್ಟ ಉಸ್ತಾದ್ ಸಹಿಸಿದ ಕಷ್ಟಗಳು ಮಾಡಿದ ತ್ಯಾಗಗಳು ಹೇಳಿ ತೀರದು. ಹಲವಾರು ಬಾರಿ ರಾತ್ರಿ ಮಂಗಳೂರಿನಿಂದ ಬಂದು ಬೆಳಗ್ಗಿನ ಜಾವ 4 ಗಂಟೆಗೆ ಸಾಗರದಿಂದ ಮರ್ಕಝ್ ಗೆ 3 km ವರೆಗೆ ನಡೆದದ್ದೂ ಇದೆ. ಹೀಗೆ ತ್ಯಾಗವೇ ಬದುಕಾಗಿಸಿದ ಉಸ್ತಾದರೊಂದಿಗೆ ಯಾರು ಬಂದು ತನ್ನ ಕಷ್ಟಗಳನ್ನು ಹೇಳಿಕೊಂಡರೂ ಮನಕರಗಿ ತನ್ನ ಪರಿಶ್ರಮಕ್ಕೂ ಮಿಗಿಲಾದ ರೀತಿಯಲ್ಲಿ ಸಹಾಯ ಮಾಡುವುದು ವಾಡಿಕೆ. ಅದರಲ್ಲೂ ಯತೀಮ್ ಮಿಸ್ಕೀನ್ ಮಕ್ಕಳ ವಿಷಯ ಹೇಳುವುದೇ ಬೇಡ. ಆ ಮಕ್ಕಳಿಗೆ ಏನೂ ಕಡಿಮೆಯಾಗದ ರೀತಿಯಲ್ಲಿ ತನ್ನ ಮಕ್ಕಳಿಗಿಂತಲೂ ಹೆಚ್ಚು ಸಮಯ ಯತೀಂ ಮಕ್ಕಳೊಂದಿಗೆ ಕಳೆದು ಅವರ ಅಹವಾಲುಗಳನ್ನು ಆಲಿಸಿ ಬೇಸರಗಳನ್ನು ನೀಗಿಸುವಲ್ಲಿ ಉಸ್ತಾದರು ಪ್ರತ್ಯೇಕ ಕಾಳಜಿ ವಹಿಸುತ್ತಿದ್ದರು. ಜೀವನದಲ್ಲಿ ತನ್ನ ಮನೆಯವರು ಮಕ್ಕಳಿಗಿಂತಲೂ ಅನಾಥ ನಿರ್ಗತಿಕ ಮಕ್ಕಳಿಗೆ ಮಾಡಿದ ಸಹಾಯಗಳೇ ಹೆಚ್ಚು. ಜೀವನದ ಎಲ್ಲಾ ಸಮಯಗಳನ್ನು ಮರ್ಕಝಿನ ಉನ್ನತಿಗೆ ಮೀಸಲಿಟ್ಟ ಉಸ್ತಾದ್ ಮರ್ಕಝ್ ಇಷ್ಟೊಂದು ಉನ್ನತಿಗೆ ತಲುಪಲು ಮುಖ್ಯ ಕಾರಣರಾಗಿದ್ದರು.

2010 ರಲ್ಲಿ ನಾನು 4 ನೇ ತರಗತಿ ಕಲಿಯುತ್ತಿದ್ದ ಸಂದರ್ಭ ನನ್ನನ್ನು ಸಾಗರದ ಮರ್ಕಝುಲ್ ಅಲೂಂ ಗೆ ನನ್ನನ್ನು ಸೇರಿಸಿದರು ಅಂದಿನಿಂದ ಉಸ್ತಾದರನ್ನು ಬಹಳ ಹತ್ತಿರದಿಂದಲೇ ಬಲ್ಲೆ ಅದರಲ್ಲಿ ಹಲವು ವಿಷಯ ಮೇಲೆ ಹೇಳಿದೆ ಅದಕ್ಕಿಂತಲೂ 1000 ಪಟ್ಟು ಜಾಸ್ತಿ ಹೇಳಲಿಕ್ಕಿದೆ ಮರ್ಕಝುಲ್ ಅಲೂಂ ನಲ್ಲಿ ಇಂದು +2 ವರೆಗೆ ಶಾಲೆ ಇದೆ ಎಂದರೆ ಅದರ ಹಿಂದೆ ಇರುವ ಉಸ್ತಾದರ ಪರಿಶ್ರಮ ಅವಿಸ್ಮರಣೀಯ SSLC ಗೂ ಕೂಡಾ permission ಇರಲಿಲ್ಲ. ಉಸ್ತಾದರು ಹಲವು ಬಾರಿ ರಾತ್ರಿ ನಿದ್ರೆ ಬಿಟ್ಟು 11 ಗಂಟೆಯ ಹೊತ್ತಿಗೆ permission ಗಾಗಿ ಸಾಗರ ದಿಂದ ಬೆಂಗಳೂರು ಬಸ್ ಹತ್ತುತ್ತಾ ಇದ್ದದ್ದು ಈಗಲೂ ನೆನಪಿದೆ 2 3 ದಿನ ಬೆಂಗಳೂರಿನಲ್ಲಿ ನಿಂತು permisson ಗಾಗಿ ರಾತ್ರಿ ಹಗಲು ಅಲೆದಾಡಿದ ಫಲ ಇಂದು SSLC 2nd puc ಶರೀಯತಿ ನೊಂದಿಗೆ ಬಹಳ ವ್ಯವಸ್ಥಿತ ವಾಗಿ ನಡೆಯುತ್ತಿದೆ.

ಅನಾಥ ನಿರ್ಗತಿಕ ಮಕ್ಕಳಿಗೆ ಏನೂ ಕಡಿಮೆ ಆಗಬಾರದು ಎಂದು ಯಾರಾದರೂ ಹಜಾರ್ ಗಳು ಬಂದರೆ ಅವರೊಂದಿಗೆ ಹೇಳಿ ಹೊಸ ಬಟ್ಟೆಗಳನ್ನು ಹೊಲಿಸಿಕೊಡುತ್ತಿದ್ದರು ಹಬ್ಬದ ಸಂದರ್ಭಗಳಲ್ಲಿ ಹೊಸ ಬಟ್ಟೆ ಕೊಡಿಸುವುದು ಶಾಲೆಯ ಪುಸ್ತಕಗಳು ಯೂನಿಫಾರ್ಮ್ ಗಳು ಎಷ್ಟೋ ಬಾರಿ ಉಚಿತವಾಗಿ ಕೊಡಿಸುತ್ತಿದ್ದರು ಎಷ್ಟೋ ಬಾರಿ ticket ಗೆ ಹಣ ಕೊಟ್ಟದ್ದೂ ಇದೆ ನಾನು ಉಸ್ತಾದನ್ನು ಭೇಟಿಯಾದರೆ ಮರ್ಕಝ್ ಗೆ ಆಹ್ವಾನಿಸುತ್ತಿದ್ದರು ಮತ್ತು ಕಲಿಯಲು ಸಹಾಯ ಬೇಕಾ ಎಂದು ಕೇಳುತ್ತಿದ್ದರು ಮಾತ್ರವಲ್ಲ ಮರ್ಕಝ್ ಗೆ ಹೋದರೆ ಬರಿಕೈಯಲ್ಲಿ ಕಳಿಸಿಯೇ ಇಲ್ಲ. ಉಸ್ತಾದರ ಬಳಿ ಇಲ್ಲವಾದರೂ ಹೆಂಡತಿಯೊಂದಿಗೆ ಕೇಳಿಯಾದರೂ ಕೊಡುತ್ತಿದ್ದರು. ಮುತಅಲ್ಲಿಂ ಗಳೆಂದರೆ ಅಷ್ಟೊಂದು ಪ್ರೀತಿ. ಜೀವನದ ಉನ್ನತಿಗೆ ಬೇಕಾಗಿ ಯಾವ ರೀತಿ ಬೇಕಾದರೂ ಸಹಾಯ ಮಾಡುತ್ತಿದ್ದರು. ಅಲ್ಲಿ ಕಲಿತ ನಂತರ ಬೇರೆ ಬೇರೆ ದರ್ಸ್ ಗಳಿಗೆ ಸೇರಿಸಿ ಚೆನ್ನಾಗಿ ಕಲಿತು ಮುಂದೆ ಬರುವಂತೆ ಹೇಳಿ ಪ್ರೋತ್ಸಾಹಿಸುತ್ತಿದ್ದರು. ಎಲ್ಲಾ ರೀತಿಯಲ್ಲಿಯೂ ಧೈರ್ಯ ತುಂಬುತ್ತಿದ್ದರು. ಅದರ ಫಲವಾಗಿ ಇಂದು ಸಾಗರ ಮರ್ಕಝ್ ನಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಸಖಾಫಿ ನೂರಾನಿ ಸಅದಿ ಅಝ್ಹರಿ ಗಳಾಗಿ ಸೇವೆ ಸಲ್ಲಿಸುತ್ತಿರುವುದು. ನಾನು 5ನೇ ತರಗತಿ ಮದರಸಾದಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಬಂದ ಸಂದರ್ಭ ಉಸ್ತಾದರು ಎಲ್ಲಾ ರೀತಿಯಲ್ಲಿಯೂ ಪ್ರೋತ್ಸಾಹಿಸಿದರು. ಬ್ಯಾನರ್ ಗಳನ್ನು ಅಳವಡಿಸಿದರು paper ಗಳಲ್ಲಿ ಪ್ರಸಾರ ಮಾಡಿದರು. ಅಂದು ಮರ್ಕಝ್ ಹಲವರ ಕೆಂಗಣ್ಣಿಗೂ ಗುರಿಯಾಗಿತ್ತು. ಒಂದು ಸಂಸ್ಥೆ ಉನ್ನತಿಯಿಂದ ಉನ್ನತಿಯೊಂದಿಗೆ ತಲುಪುವಾಗ ಶತ್ರುಗಳು ಹುಟ್ಟುವುದು ಸಹಜ ಅದೇ ರೀತಿ ಮರ್ಕಝ್ ಉನ್ನತಿಗೆ ತಲುಪುವಾಗ ಶತ್ರುಗಳು ಸಹಜವಾಗಿಯೇ ಹುಟ್ಟಿಕೊಂಡರು ಹೇಗಾದರೂ ಮಾಡಿ ಏನಾದರೂ ಮಾಡಿ ಅದರ ಅವನತಿಯನ್ನು ಕಾಣಲು ಶತ್ರುಗಳು ಕಾದುಕುಳಿತರು. ಆದರೆ ಅದೆಲ್ಲವನ್ನು ಮೆಟ್ಟಿ ಮರ್ಕಝನ್ನು ಮೇಲಕ್ಕೆತ್ತಲು ಉಸ್ತಾದರಿಗೆ ಚಿಕ್ಕ ಸವಾಲೇನೂ ಆಗಿರಲಿಲ್ಲ ಆದರೆ ವಿನಯ ತಾಳ್ಮೆಯೇ ಜೀವನವಾಗಿಸಿದ್ದ ಉಸ್ತಾದ್ ತವಕ್ಕುಲ್ ಎಂಬ ಹರಿತವಾದ ಆಯುಧದೊಂದಿಗೆ ಮುಂದಕ್ಕೆ ಸಾಗಿ ಮರ್ಕಝನ್ನು ಬಾನೆತ್ತರಕ್ಕೆ ಬೆಳೆಸಿದರು……………

ಯಾರಾದರೂ ಕಷ್ಟ ಎಂದು ಬಂದರೆ ಉಸ್ತಾದರ ಮನಕರಗುವುದಂತೂ ಗ್ಯಾರಂಟಿ ಮಕ್ಕಳು ಮನೆಯವರು ಈದಿಗೆ ಹೊಸ ಬಟ್ಟೆ ಧರಿಸದಿದ್ದರೂ ಅನಾಥ ಮಕ್ಕಳು ಧರಿಸಬೇಕು ಎಂದು ಪ್ರತ್ಯೇಕ ಶ್ರಮವಹಿಸುತ್ತಿದ್ದರು ಕೆಲವೊಮ್ಮೆ ಉಸ್ತಾದರ್ ಸ್ವಂತ ಹಣದಲ್ಲಿಯಾದರೂ ಮಕ್ಕಳಿಗೆ ಬೇಕಾದದ್ದನ್ನು ಖರೀದಿಸಿ ಕೊಡುತ್ತಿದ್ದರು ಅಸರ್ ನ ನಂತರ ಮಕ್ಕಳು ಕಾಲಿ ಚಾ ಕುಡಿಯುವುದು ಕಂಡರೆ ಸಾಲಮಾಡಿಯಾದರೂ ಮಕ್ಕಳಿಗೆ ತಿಂಡಿ ತಂದು ಕೊಡುವ ಉಸ್ತಾದರು ಸರ್ವಸ್ವಕ್ಕಿಂತಲೂ ಮಿಗಿಲಾಗಿ ಅನಾಥ ಮಕ್ಕಳನ್ನು ತ್ರೀತಿಸಿದ ಕಾರಣ ಕೊನೆಯದಾಗಿ ತನ್ನ ಮನೆಯವರು ಮತ್ತು ಮಕ್ಕಳೊಂದಿಗೆ ಪವಿತ್ರಾ ಉಮ್ರಾ ನಿರ್ವಹಿಸಿ ಎಲ್ಲಾ ಭಾಧ್ಯತೆಗಳನ್ನು ಪೂರೈಸಿ ಒಳ್ಳೆಯ ದಿನ ಒಳ್ಳೆಯ ಸಮಯ ಮರಣ ಹೊಂದಿದರು ಉಸ್ತಾದರ ಆ ಮಯ್ಯಿತನ್ನು ನೋಡುವಾಗ ದುಃಖ ಸಹಿಸಲಿಲ್ಲ ಉಸ್ತಾದರು ಮರಣದ ಕುರಿತು ತೆಗೆದ ತರಗತಿ ನೆನಪಾಯಿತು ಇನ್ನೂ ಹಲವು ಅನುಭವಗಳು ಹೇಳಲಿಲ್ಲಿದೆ ಆದರೆ ಇನ್ನು ನಮ್ಮಲ್ಲಿರುವುದು ಉಸ್ತಾದರಿಗಿರುವ ಪ್ರಾರ್ಥನೆ ಮಾತ್ರ ಕುರ್ ಆನ್ ತಹ್ಲೀಲ್ ಗಳು ಮಾತ್ರ ಉಸ್ತಾದರಿಗೆ ಪ್ರತಿನಿತ್ಯ ನಮ್ಮ ದುಆ ಗಳಲ್ಲಿ ಸೇರಿಸೋಣ …ಅಲ್ಲಾಹ್ ಉಸ್ತಾದರಿಗೆ ಮಗ್ಫಿರತ್ ಮರ್ಹಮತ್ ನೀಡು ಅಲ್ಲಾಹ್ ಸ್ವರ್ಗದಲ್ಲಿ ಉನ್ನತ ಸ್ಥಾನ ನೀಡು ರಬ್ಬೇ ಅವರೊಂದಿಗೆ ನಮ್ಮನ್ನೂ ಜನ್ನಾತುಲ್ ಫಿರ್ದೌ ಸಿನಲ್ಲಿ ಒಟ್ಟಿಗೆ ಸೇರಿಸು ರಬ್ಬೇ ಮಕ್ಕಳಿಗೆ ಮನೆಯವರಿಗೆ ಸಹಿಸುವ ಶಕ್ತಿ ನೀಡು ಅಲ್ಲಾಹ್.