janadhvani

Kannada Online News Paper

ಬ್ರದರ್ಸ್ ಗಳಿಗೆ ಸನ್ಮಾನ ,ವಿರೋಧಿಗಳಿಗೆ ಅವಮಾನ

✍️ರಾಫಿ ನಗರ

ನಿನ್ನೆ ಮಂಗಳೂರಿನ ಪ್ರತಿಷ್ಠಿತ ಹೋಟೇಲ್ ಒಂದರಲ್ಲಿ ಮಂಗಳೂರಿನ ಇಬ್ಬರು ಶ್ರೀಮಂತ ಕುಲಗಳು ಹಜ್ಜ್ ನಿಂದ ಬಂದ ಯುಟಿ ಖಾದರ್ ಹಾಗೂ ಇಫ್ತಿಕರ್ ಸಹೋದರರಿಗೆ ಸನ್ಮಾನ ವೊಂದು ಹಮ್ಮಿಕೊಂಡು ಖಾಝಿ ಗಳು ಹಾಗೂ ಕೆಲವು ಉಲಮಾಗಳ ಜೊತೆಗೆ ಉದ್ಯಮಿಗಳು ಸೇರಿದ ವಾರ್ತೆಗಳು ಕಾಣಿಸಿತು‌. ಆ ಫೋಟೋ ಹಿಡಿದು ಉಲಮಾ ಗಳಿಗೆ ಗೊತ್ತಿದೆ ಖಾದರ್ ಯಾರೆಂದು, ಅವರಿಗೆ ಉಲಮಾ ಗಳ ಆಶಿರ್ವಾದ ಇದೆಯೆಂಬ ಮೆಸೇಜ್ ಗಳೂ ಅವರ ಅನುಯಾಯಿಗಳು ಹಂಚತೊಡಗಿದ್ದೂ ಕಾಣಲು ಸಾಧ್ಯವಾಯ್ತು. ನಿಜವಾಗಿ ಈ ಘನವೆತ್ತ ಉಲಮಾ ಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುತ್ತಾರೆ, ಅವರು ಭಾಗಿಯಾಗಿ ಬಂದಿರಬಹುದು. ಆದರೆ ಈ ಸನ್ಮಾನದ ಬಳಿಕ ಒಂದು ಸುತ್ತು ಸುನ್ನೀ ಕಾರ್ಯಕರ್ತರ ಸೋಷಿಯಲ್ ಮೀಡಿಯಾ ಗಮನಿಸಿದೆ.

ನನ್ನಲ್ಲಿರುವ ಸಾವಿರದಷ್ಟು ಕಾರ್ಯಕರ್ತರ ವಾಟ್ಸಾಪ್ ಸ್ಟೇಟಸ್ ನಲ್ಲಾಗಲಿ, ಅವರ ಫೇಸ್ಬುಕ್ ಇನ್ಸ್ಟಾಗ್ರಾಮ್ ನಲ್ಲಾಗಲಿ ಒಬ್ಬನೇ ಒಬ್ಬ ಹಂಚಿಕೊಂಡಿರುದಾಗಲಿ, ತಮ್ಮ ಸ್ಟೇಟಸ್ ಇಟ್ಟಿರುದಾಗಲಿ ಗಮನಕ್ಕೆ ಬಂದಿಲ್ಲ, ಕೆಲವೇ ರಾಜಕೀಯ ಅನುಯಾಯಿಗಳು, ಹಿಂಬಾಲಕರು ಹಂಚಿಕೊಳ್ಳುತ್ತಿದ್ದರು. ಅಂದರೆ ನಾಯಕರು ಹೋಗುವ ರೀತಿಗೂ , ಕಾರ್ಯಕರ್ತರು ನಾಯಕರನ್ನು ಪಾಲಿಸುವ ರೀತಿಗೂ ಪ್ರಬುಧ್ಧತೆ ವ್ಯಕ್ತವಾಗುತ್ತಿತ್ತು. ನಾಯಕರಾಗಿ ಅವರ ತೀರ್ಮಾನ ಸರಿಯಾಗಿಯೂ, ಕಾರ್ಯಕರ್ತರಾಗಿ ಕಾರ್ಯಕರ್ತರ ನಿಲುವು ಪ್ರಬುದ್ಧವಾಗಿ ಯು ಇಲ್ಲಿ ಗಮನಿಸಬಹುದು.

ಈಗ ಈ ಸನ್ಮಾನ ಹಮ್ಮಿಕೊಂಡ ಯೇನಪೋಯ ಹಾಗೂ ರಶೀದ್ ಹಾಜಿಗೆ ಕೆಲವೊಂದು ಪ್ರಶ್ನೆಗಳಿದೆ. ಇವರು ಕೇವಲ ಉದ್ಯಮಿಗಳು ಮಾತ್ರವಲ್ಲದೆ ಇಲ್ಲಿನ ಕೆಲವು ಮಸ್ಜಿದ್ ಆಡಳಿತ ಸಮಿತಿಗಳ ಮುಖ್ಯಸ್ಥರೂ ಆಗಿದ್ದಾರೆ. ಈ ಸನ್ಮಾನ ಸಹೋದರರ ಮಾರ್ಗದರ್ಶನ ಪಡೆಯದೆ ಇವರು ಹಮ್ಮಿಕೊಳ್ಳಲು ಸಾಧ್ಯವಿಲ್ಲ ಎಂಬುದು ಎಲ್ಲಾ ಪ್ರಙಾವಂತರಿಗೂ ಗೊತ್ತಿದೆ. ಕಾರಣ ಅವರೊಳಗಿನ ನಂಟೇನೆಂದು ತಿಳಿಯದವರು ವಿರಳ. ಅದೇನೇ ಇರಲಿ , ಮಂಗಳೂರಿನಲ್ಲಿ ಅಮಾಯಕರಿಬ್ಬರು ಹತ್ಯೆಯಾದರು, ಈ ಕುರಿತು ಯೇನಪೋಯ ಹಾಜಿ ಮತ್ತು ರಶೀದ್ ಹಾಜಿಯ ಹೇಳಿಕೆಯೊಂದು ಸಮುದಾಯಕ್ಕೆ ತೋರಿಸಲು ಸಾಧ್ಯವಿದೆಯೇ!? ಈ ಅನ್ಯಾಯಕ್ಕೆದುರಾಗಿ ಒಂದು ಸಭೆ ಉಲಮಾಗಳನ್ನು ಒಟ್ಟು ಸೇರಿಸಿದ ಒಂದು ಉದಾಹರಣೆ ಇವರಿಂದ ತೋರಿಸಲು ಸಾಧ್ಯವೇ!? ಇವರ ಸಂಪತ್ತಿನಿಂದ ಒಂದು ಸಹಾಯ ಆ ಯತೀಂ ಮಕ್ಕಳಿಗೆ ನೀವು ನೀಡಿದ್ದು ಗಮನಿಸಿದ್ದೀರೇ!? ಆ ಅನ್ಯಾಯಕ್ಕೊಳಗಾದ ರಹೀಂ ಮನೆಯಲ್ಲಿ ಈ ಕುಲಪತಿಗಳನ್ನು ರಶೀದ್ ಹಾಜಿ ಯನ್ನು ಕಂಡವರು ಯಾರಾದ್ರೂ ಇದ್ದಾರೆಯೇ!?

ಈ ಗಣ್ಯರು ಪಂಪ್ವೆಲ್ ಹಾಗೂ ಬಂದರ್ , ಈದ್ಗಾ ಸಹಿತ ಮೊಹಲ್ಲಾಗಳಿಗೆ ಮುಂದಾಳತ್ವ ನೀಡುವವರು. ಇವರನ್ನು ಸಮುದಾಯ ಪ್ರಶ್ನಿಸದಿದ್ದರೆ ಈ ಸನ್ಮಾನಗಳಿಗೆ ಬ್ರೇಕ್ ಬೀಳುವುದಿಲ್ಲ. ಹಜ್ ಕರ್ಮ ಮಾಡಿದ ಸಾಧನೆಗೆ ಇವರು ಸನ್ಮಾನಿಸಿದ್ದಾದರೆ, ಸಂಸದರಾಗಿ ನಳಿನ್ ಕುಮಾರ್ ಕಟೀಲ್ ಆಯ್ಕೆಯಾದಾಗಲೂ ಇವರು ಸನ್ಮಾನಿಸಿದ್ದಾರೆ. ಬಂಡವಾಳಶಾಹಿಗಳ ಈ ಸನ್ಮಾನಗಳಿಗೆ ಸ್ಪಷ್ಟ ಕಾರಣಗಳು ಬೇಕಿಲ್ಲ. ಹಜ್ ಕರ್ಮ ಇಲ್ಲಿನ ಅದೆಷ್ಟೋ ಬಡವರು ಕೂಡಾ ನಿರ್ವಹಿಸಿದ್ದಾರೆ. ಅವರಿಗೆ ಯಾರಿಗಾದರೂ ಈ ಬಂಡವಾಳಶಾಹಿಗಳು ಸನ್ಮಾನ ಮಾಡಿದ್ದು ನೀವೆಂದಾದರೂ ನೋಡಿದ್ದೀರೇ!?

ಖಾದರ್ ಸಾಹೇಬರೇ , ಅವರ ಅನುಯಾಯಿಗಳೇ .ನಾನು ಕೂಡಾ ಕಾಂಗ್ರೆಸ್ ಗೆ ಮತ ನೀಡಿದ ಮತದಾರ. ನೀವು ಸನ್ಮಾನಕ್ಕೆ ಅರ್ಹವಾಗುವುದು ಹತ್ಯೆಯಾದ ಅಶ್ರಫ್ ಹಾಗೂ ರಹೀಂ ಆರೋಪಿಗಳ ಮೇಲೆ ಯುಎಪಿಎ ಕೇಸ್ ದಾಖಲಿಸಿ ಜಾಮೀನು ಸಿಗದಂತೆ ಪ್ರಾಮಾಣಿಕ ಪ್ರಯತ್ನ ಮಾಡಿ. ನ್ಯಾಯ ದೊರಕಿಸಿ ಕೊಡಿ. ಆಗ ನಿಮ್ಮ ರಾಜಕೀಯ ವಿರೋಧಿಗಳಿಗೆ ಅವಮಾನ ಆಗ್ತದೆ. ಉಲಮಾಗಳ ಸನ್ಮಾನವನ್ನು ಹಂಚಿಕೊಳ್ಳಲು ಉಲಮಾ ಗಳ ಅನುಯಾಯಿಗಳು ಸಿಗುತ್ತಾರೆ. ಇಲ್ಲದಿದ್ದರೆ ಡ್ಯಾಮೇಜ್ ಕಂಟ್ರೋಲ್ ಪ್ರಯತ್ನಗಳು ಅವೆಲ್ಲವೂ ವ್ಯರ್ಥ ಪ್ರಯತ್ನ. ಅಂಧ ಅನುಯಾಯಿಗಳು ಇದನ್ನು ಅರ್ಥೈಸಬೇಕಿದೆ. ಇಲ್ಲಿ ಕಾಣುತ್ತಿರುವ ತ್ವಾಖಾ ಉಸ್ತಾದ್ ಮುನ್ನೆ ಉಲಮಾ ಕೋರ್ಡಿನೇಷನ್ ಗೆ ರಾಜಿನಾಮೆ ನೀಡಿರುವ ಮಾಹಿತಿಯೂ ಬಂದಿತ್ತು. ಅವೆಲ್ಲದರ ಹಿಂದಿರುವ ಕೈ ಚಳಕಗಳು ಇಲ್ಲಿ ಪ್ರತ್ಯಕ್ಷವಾಗುತ್ತಿದೆ. ಉಮರಾಗಳಿಗೆ ಮಾದರಿಯಾಗಿದ್ದ ಮುಮ್ತಾಜ್ ಅಲಿ ಮರಣ ಹೊಂದಿದಾಗ ಯಾರೆಲ್ಲಾ ಊರು ಬಿಟ್ಟಿದ್ದರು ಎಂಬುದು ಗಾಳಿ ಸುದ್ದಿಯಾಗಿಯು ಹರಡಿತ್ತು.

ಮಂಗಳೂರಿನ ಉದ್ಯಮಿಗಳೇ ಒಂದು ಭಾರಿ ಸಮುದಾಯಕ್ಕೆ ದ್ರೋಹ ಬಗೆಯಬಹುದು , ನಿರಂತರ ದ್ರೋಹ ಬಗೆಯುವಾಗ ಸಮುದಾಯದ ಆಕ್ರೋಶಕ್ಕೆ ,ಶಾಪಕ್ಕೆ ನೀವು ನಿಂತ ನೆಲ ಹುದುಗಿ ಹೋಗಬಹುದು. ಕಾಲಚಕ್ರ ಕಾಲೆಳೆಯುತ್ತದೆ.