ಕುವೈಟ್ ಸಿಟಿ: ಕುಟುಂಬಗಳು ವಾಸವಿರುವ ವಸತಿ ಸಮುಚ್ಚಯಗಳಲ್ಲಿ ಅವಿವಾಹಿತರು ವಾಸಿಸುವುದನ್ನು ನಿಷೇಧಿಸಲಾಗಿರುವುದಾಗಿ ಕುವೈತ್ ಮುನಿಸಿಪಾಲಿಟಿಯು ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.
ಅವಿವಾಹಿತರು ವಾಸವಿದ್ದಲ್ಲಿ ತಕ್ಷಣ ಅವರನ್ನು ಸ್ಥಳಾಂತರಿಸುವಂತೆ ಮುನಿಸಿಪಾಲಿಟಿ ನಿರ್ದೇಶನ ನೀಡಿದೆ ಎಂದು ಕೌನ್ಸಿಲ್ ಸದಸ್ಯ ಮುಹಮ್ಮದ್ ಅಲ್ ರಾಖಿಬ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕುವೈಟ್ ಕುಟುಂಬಗಳ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರತ್ಯೇಕವಾಗಿ ಎಚ್ಚರಿಸಲಾದೆ.
ಆದಾಗ್ಯೂ ಪ್ರಸ್ತುತ ಭದ್ರತಾ ಬೆದರಿಕೆಗಳನ್ನು ಅಧಿಕಾರಿಗಳು ಕಡೆಗಣಿಸುವ ಕಾರಣಕ್ಕಾಗಿ ಕುಟುಂಬಗಳು ಇತರ ವಲಯಗಳಿಗೆ ಪಲಾಯನ ಗೈಯ್ಯುವ ಸ್ಥಿತಿ ಎದುರಾಗಿದೆ.
ಕುಟುಂಬಗಳು ವಾಸಿಸುವ ಪ್ರದೇಶಗಳಿಂದ ವಿದೇಶಿ ಅವಿವಾಹಿತರನ್ನು ತಪ್ಪಿಸಲು ಕ್ರಮ ಕೈಗೊಂಡಿರುವುದಾಗಿ ಫರ್ವಾನಿಯಾ ಗವರ್ನರ್ ಶೈಖ್ ಫೈಝಲ್ ಅಲ್ ಹ್ಯುಮೂದ್ ಅಲ್ ಮಾಲಿಖ್ ಅಲ್ ಸಬಾ ತಿಳಿಸಿದ್ದಾರೆ.ಅವರು ವಿವಿಧ ಪ್ರದೇಶಗಳ ಮೇಯರ್ಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಪ್ರಸ್ತುತ, 1.4 ಮಿಲಿಯನ್ ಅವಿವಾಹಿತರು ದೇಶದಲ್ಲಿದ್ದಾರೆ. ಇವುಗಳ ಪೈಕಿ 3,16,000 ಸ್ಥಳೀಯ ನಾಗರಿಕರು. ಉಳಿದ ವಿದೇಶೀಯರ ಪೈಕಿ 8,50,000 ಪುರುಷರು, 2,30,000 ಮಹಿಳೆಯರು.ಅವಿವಾಹಿತರ ವಾಸವನ್ನು ಬದಲಾಯಿಸಲು ತುರ್ತು ಸಭೆ ನಡೆಸುವುದಾಗಿ ಗವರ್ನರ್ ಹೇಳಿದರು.ಹಿರಿಯ ಭದ್ರತಾ ಅಧಿಕಾರಿಗಳ ಸಭೆಯಲ್ಲಿ ಈ ವಿಷಯದಲ್ಲಿ ಚರ್ಚಿಸಲಾಗುವುದು ಎಂದವರು ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ