ಶಿವಮೊಗ್ಗ: ಹೊಸನಗರ ತಾಲೂಕಿನ ಜಯನಗರ ಶಾಫಿ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ & ನೂರುಲ್ ಇಸ್ಲಾಂ ಅರಬಿಕ್ ಮದ್ರಸ ಮತ್ತು SSF SYS ಜಯನಗರ ಜಂಟಿ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1449ರ ಜನ್ಮ ದಿನಾಚರಣೆ ಪ್ರಯುಕ್ತ ಇಂದಿನಿಂದ 3 ದಿನಗಳ ಕಾಲದ ‘ಬೃಹತ್ ಮೀಲಾದ್ ಜಲ್ಸ’ ಕಾರ್ಯಕ್ರಮ ನಡೆಯಲಿದೆ.
ಇಂದು ಜುಮುಅಃ ನಮಾಝ್‌ನ ನಂತರ ಮುಹ್ಯುದ್ದೀನ್ ಶಾಫಿ ಜುಮುಅಃ ಮಸ್ಜಿದ್‌ನ ಖತೀಬರಾದ ಶಾಹುಲ್ ಹಮೀದ್ ಸಖಾಫಿ ನೆಲ್ಯಾಡಿ, ಮುಖ್ಯೋಪಾಧ್ಯಾಯರಾದ ಉಮರುಲ್ ಫಾರೂಖ್ ಸಖಾಫಿ ವಳವೂರು, ಅಧ್ಯಕ್ಷರಾದ ಅಬ್ದುಲ್ ಖಾದರ್ ಬಾಷಾ ಜಯನಗರ, SSF& SYS ನಾಯಕರ ನೇತೃತ್ವದಲ್ಲಿ ಧ್ವಜಾರೋಹಣ ಹಾಗೂ ಐ.ಕೆ ಇಕ್ಬಾಲ್ ಮದನಿ ಕುಕ್ಕೋಟ್ಟುರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ ನೀಡಲಾಯಿತು.
27-9-2024ರಂದು ಶುಕ್ರವಾರ ಮಗ್‌ರಿಬ್ ನಮಾಝ್‌ನ ಬಳಿಕ ನೂರುಲ್ ಇಸ್ಲಾಂ ಅರಬಿಕ್ ಮದ್ರಸಾ ವಿಧ್ಯಾರ್ಥಿಗಳಿಂದ ‘ಜಲ್ಸತುಲ್ ಮಹಬ್ಬ ಮೀಲಾದ್ ಮೆಹ್ಪಿಲ್’, ದಿನಾಂಕ 28-9-2024ರಂದು ಮಗ್ರಿಬ್ ನಮಾಝ್‌ನ ಬಳಿಕ ಅಲ್-ಹಾಜ್ ಅಸಯ್ಯಿದ್ ಅಬೂಬಕರ್ ಸಿದ್ಧೀಖ್ ತಙ್ಙಳ್ ಅಲ್-ಹಾದಿ ತೀರ್ಥಹಳ್ಳಿರವರ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ಮಜ್ಲಿಸ್ ಹಾಗೂ ಮಂಗಳೂರಿನ ಪ್ರಖ್ಯಾತ ಅಲ್-ಅಮೀನ್ ಇಖ್ವಾನ್ ತಂಡದಿಂದ ಬುರ್ದಾ ಮಜ್ಲಿಸ್, ಮಾಸ್ಟರ್ ಸಲ್ಮಾನುಲ್ ಫಾರಿಶ್ ಉಳ್ಳಾಲರವರಿಂದ ನಅ್‌ತೇ ಶರೀಫ್ ನಡೆಯಲಿದೆ.
29-9-2024ರಂದು ಬೆಳಿಗ್ಗೆ 9 ಘಂಟೆಗೆ ಬೃಹತ್ ಮೀಲಾದ್ ಜಾಥಾ ನಡೆಯಲಿದೆ. ಪ್ರಸ್ತುತ ಜಾಥಾದಲ್ಲಿ ಪ್ರಸಿದ್ಧ ವಾಗ್ಮಿಯೂ, ಜಯನಗರದ ಮಾಜಿ ಖತೀಬರೂ ಆದ D.A ಹಸನ್ ಸಖಾಫಿ ಬೆಜ್ಜವಳ್ಳಿಯವರು ಮುಖ್ಯ ಭಾಷಣ ನಡೆಸಲಿದ್ದಾರೆ.
ಈ ಕಾರ್ಯಕ್ರಮಗಳಲ್ಲಿ ಜೆ.ಎಂ ಸಿದ್ಧೀಖ್ ಜಯನಗರ, ಜೆ.ಎಂ ಝುಬೈರ್ ಹಾಜಿ ಜಯನಗರ, ಹೊಸನಗರ ಖತೀಬರಾದ ಯೂಸುಫ್ ಸಖಾಫಿ ಬನಾರಿ, ಹೊಸನಗರ ಶಾಫಿ ಜುಮುಅಃ ಮಸ್ಜಿದ್ ಅಧ್ಯಕ್ಷರಾದ ಅಮಾನುಲ್ಲಾ, ಉರುಮಾಲ್ ಮಾಸಿಕದ ಸಂಪಾದಕರಾದ ಐ.ಕೆ ಇಕ್ಬಾಲ್ ಮದನಿ, ಕುಕ್ಕೋಟ್ಟು, ಜೆ.ಎಂ ಮುಹಮ್ಮದ್ ಜಯನಗರ, ಹಂಝ ಜಯನಗರ, ನಾಸಿರ್ ಜಯನಗರ, ಶೌಕತ್ ಅಲಿ ಜಯನಗರ, ಜಯನಗರ ಹನಫೀ ಮಸ್ಜಿದ್ ಇಮಾಂ ಮೌಲಾನಾ ಅಬ್ದುಲ್ ಸಲಾಮ್ ಹಝ್ರತ್, ಹನಫಿ ಮಸ್ಜಿದ್ ಅಧ್ಯಕ್ಷ ಮುಹಮ್ಮದ್ ಅಶ್ರಫ್, ತೌಫೀಖ್ ಜಯನಗರ, ಚಿಕನ್ ಅಶ್ರಫ್ ಜಯನಗರ, ಈ. ಅಮಾನುಲ್ಲಾ ಜಯನಗರ ಸೇರಿದಂತೆ ಅನೇಕ ಉಲಮಾ-ಉಮರಾಗಳು ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ