ರಿಯಾದ್: ಸೌದಿ ಅರೇಬಿಯಾದ ವ್ಯಾಪಾರ ಕೇಂದ್ರಗಳ ವಹಿವಾಟು ಅವಧಿಯನ್ನು ಸಂಜೆ 6 ಕ್ಕೆ ಸೀಮಿತಗೊಳಿಸಬೇಕೆಂದು ಶೂರಾ ಕೌನ್ಸಿಲ್ ಸದಸ್ಯ ಒತ್ತಾಯಿಸಿದ್ದಾರೆ. ಶೂರಾ ಕೌನ್ಸಿಲ್ ಈ ಹಿಂದೆ ರಾತ್ರಿ 9ಕ್ಕೆ ಸಮಯವನ್ನು ನಿಗದಿ ಪಡಿಸುವಂತೆ ಮಂತ್ರಿ ಮಂಡಲಕ್ಕೆ ಶಿಫಾರಸ್ಸು ಮಾಡಲಾಗಿತ್ತು.
ರಾತ್ರಿ 9ಕ್ಕೆ ನಿಗದಿಪಡಿಸುವ ಬೇಡಿಕೆಯ ಬಗ್ಗೆ ವಿವರವಾದ ಚರ್ಚೆಯ ನಂತರ ಶೂರಾ ಕೌನ್ಸಿಲ್‌ನ ಶಿಫಾರಸುಗಳನ್ನು ಕ್ಯಾಬಿನೆಟ್ ಗೆ ಸಲ್ಲಿಸಲಾಗಿತ್ತು. ಶಿಫಾರಸಿಗೆ ಸಂಬಂಧಿಸಿದಂತೆ ಚೇಂಬರ್ ಆಫ್ ಕಮರ್ಷಿಯಲ್‌ನೊಂದಿಗೆ ಸಮಾಲೋಚನೆಯು ನಡೆಯುತ್ತಾ ಇದೆ.
ಈ ಮಧ್ಯೆ, ಶೂರಾ ಕೌನ್ಸಿಲ್‌ನ ಸದಸ್ಯ ಸಯೀದ್ ಖಾಸಿಮ್ ಅಲ್ ಖಲಿದಿ ಈ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಔಷಧಾಲಯಗಳು ಮತ್ತು ಪೆಟ್ರೋಲ್ ಪಂಪ್ ಗಳನ್ನು ಹೊರತುಪಡಿಸಿ ಇತರ ಸಂಸ್ಥೆಗಳ ಕೆಲಸದ ಸಮಯವನ್ನು 6 ಗಂಟೆಗೆ ನಿಗದಿ ಮಾಡಬೇಕೆಂದು ಅವರು ಹೇಳಿದ್ದಾರೆ.
ಮುಂಜಾನೆ ಒಂದು ಗಂಟೆಯ ವರೆಗಿನ ವ್ಯಾಪಾರ ಸ್ವದೇಶಿಗಳಿಗೆ ಅವಶ್ಯಕತೆಯಿಲ್ಲ. ಮನೆ, ಕುಟುಂಬ ಅಥವಾ ಸಾಮಾಜಿಕ ಜೀವನವಿಲ್ಲದೆ ಕೆಲಸ ಮಾಡುವ ವಿದೇಶಿಯರಿಗೆ ಕೆಲಸದ ಸಮಯವನ್ನು ಕಡಿತಗೊಳಿಸುವ ಮೂಲಕ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು.
ಸಮಯ ಬದಲಾವಣೆಯು ಬಿನಾಮಿ ಉದ್ಯಮಗಳನ್ನು ತಡೆಯಲು ಮತ್ತು ಸ್ಥಳೀಯ ಜನರ ನಿರುದ್ಯೋಗವನ್ನು ಪರಿಹರಿಸಲು ಸಹಾಯ ಮಾಡಲಿದೆ.
ಸೈಯದ್ ಕಾಸಿಮ್ ಅಲ್ ಖಾಲಿದಿ ಮಾತನಾಡುತ್ತಾ, ಈ ಕ್ರಮವು ಖಾಸಗಿ ವಲಯ ಪ್ರವೇಶಿಸಲು ಸ್ಥಳೀಯ ಯುವಕರಿಗೆ ಸಹಾಯ ಮಾಡಲಿದೆ ಮತ್ತು ವಿದೇಶಗಳಿಗೆ ಹಣದ ಹರಿವನ್ನು ತಡೆಯಲಿದೆ ಎಂದು ಹೇಳಿದ್ದಾರೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ