ಕೋಝಿಕ್ಕೋಡ್| ಬರ್ಬರವಾಗಿ ಹತ್ಯೆಗೀಡಾದ ರಿಯಾಝ್ ಮೌಲವಿಯ ಹಂತಕರನ್ನು ಖುಲಾಸೆಗೊಳಿಸಿದ ನ್ಯಾಯಾಲಯದ ತೀರ್ಪು ನಿರಾಶಾದಾಯಕವಾಗಿದೆ ಮತ್ತು ನ್ಯಾಯಾಲಯಗಳಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಲಿದೆ ಎಂದು ಕೇರಳ ರಾಜ್ಯ ಎಸ್‌ವೈಎಸ್ ಆರೋಪಿಸಿದೆ.
ಕೋಮುಗಲಭೆ ಸೃಷ್ಟಿಸುವ ದುರುದ್ದೇಶದಿಂದ ನಡೆಸಲ್ಪಟ್ಟ ಈ ಹತ್ಯೆ, ಸಾಮುದಾಯಿಕ ಆತ್ಮಸಾಕ್ಷಿಯನ್ನು ಬೆಚ್ಚಿ ಬೀಳಿಸಿದ ಕೃತ್ಯವಾಗಿತ್ತು. ಹಿಂದಿನ ಯಾವುದೇ ಪರಿಚಯವಿಲ್ಲದ ಓರ್ವ ವ್ಯಕ್ತಿಯನ್ನು ಕೋಮುಗಲಭೆಗಳ ಉದ್ದೇಶವನ್ನಿಟ್ಟು ಹತ್ಯೆ ನಡೆಸಲಾಗಿತ್ತು, ಆದರೂ ಆರೋಪಿಗಳಿಗೆ ಶಿಕ್ಷೆಯಾಗುವುದಿಲ್ಲ ಎಂದಾದರೆ ಇದು ಸಮೂಹಕ್ಕೆ ಬೆದರಿಕೆಯಾಗಿದೆ.
ದೃಢವಾದ ಸಾಕ್ಷ್ಯಾಧಾರಗಳಿದ್ದರೂ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿರುವುದರಲ್ಲಿ ನಿಗೂಢತೆಯಿದೆ. ಪ್ರಸ್ತುತ ನ್ಯಾಯಾಲಯದ ಆದೇಶದಲ್ಲಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂಬ ಹೇಳಿಕೆ ಮಾತ್ರ ಇದೆ. ಸುಮಾರು ನೂರರಷ್ಟು ಸಾಂದರ್ಭಿಕ ಸಾಕ್ಷ್ಯಗಳಿರುವ ಪ್ರಕರಣದಲ್ಲಿ ಹೇಗೆ ಅನಿರೀಕ್ಷಿತ ತೀರ್ಪು ಬಂತು ಎಂಬ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ. ರಿಯಾಝ್ ಮೌಲವಿಗೆ ನ್ಯಾಯ ಒದಗಿಸಲು ನ್ಯಾಯಾಲಯಗಳೇ ಮುಂದಾಗಬೇಕಿದೆ ಎಂದು ಸಮಸ್ತ ಕೇರಳ ಸುನ್ನಿ ಯುವ ಸಂಘ ತನ್ನ ಪ್ರಕಟಣೆಯಲ್ಲಿ ಆಗ್ರಹಿಸಿದೆ.