ಭರವಸೆಯ ಮಹಾ ಕನಸುಕಂಡು ದೂರದ ಮರುಭೂಮಿಗೆ ಆಸರೆಯನ್ನ ಹುಡುಕಿ ಕಡಲು ದಾಟಿದ ಅನಿವಾಸಿಯ ಜೀವನದಲ್ಲಿ ಅದರಲ್ಲೂ ಅನಿವಾಸಿ ಕನ್ನಡಗರ ಜೀವನದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಡೆದದ್ದು ಬದಲಾವಣೆಯ ಹೊಸ ಪರ್ವವೇ ಕೆಸಿಎಫ್!!!
ಸರಿಸುಮಾರು ಹತ್ತು ವರ್ಷಗಳ ಹಿಂದಿನ ಚಿತ್ರಣವನ್ನು ಮುಂದಿಟ್ಟು ನೋಡುವುದಾದರೆ ಕರ್ನಾಟಕ, ಕರಾವಳಿ-ಕರ್ನಾಟಕದಲ್ಲಿ ಅಹ್ಲು ಸುನ್ನದ ಸುಂದರ ಆಶಯವನ್ನು ಬೆಳೆಸಿಕೊಂಡು ಬಂದಿದ್ದ ಯುವಕರು ಅನಿವಾಸಿಯಾಗಿ ದುಡಿದು ಎರಡೋ ಮೂರೋ ವರ್ಷಗಳಲ್ಲಿ ತಾಯ್ನಾಡಿಗೆ ಹಿಂದಿರುಗುವಾಗ ಅಹ್ಲುಸುನ್ನದ ಆಶಯ ಆದರ್ಶವನ್ನು ಕಸತುಟ್ಟಿಗೆ ಎಸೆದು ಬರುತ್ತಿದ್ದರು.
ಆದರೆ ಇಂದು ಈ ದಿನ ಅಲ್ ಹಮ್ದುಲಿಲ್ಲಾಃ ಗಲ್ಫ್ ದೇಶವಾದ ಜಿಸಿಸಿಯಲ್ಲಿ ಕರಾವಳಿ ಕರ್ನಾಟಕದ ಸರಿಸಾಟಿಯಿಲ್ಲದ ಮಹಾ ವಿದ್ವಾಂಸ ಮರ್ಹೂಂ ತಾಜುಲ್ ಫುಖಾಹ್ ಬೇಕಲ್ ಉಸ್ತಾದ್ 2013 ರಲ್ಲಿ ಜಗತ್ತೇ ತನ್ನೆಡೆಗೆ ತಿರುಗಿ ನೋಡುತ್ತಿರುವ ದೇಶ, ಜಗತ್ತನ್ನು ತನ್ನೆಡೆಗೆ ಸೆಳೆಯುತ್ತಿರುವ ಯುನೈಟಡ್ ಎಮಿರೇಟ್ಸ್ ಅರಬ್ ದೇಶದಲ್ಲಿ ಕೆಸಿಎಫ್ ಎಂಬ ಅಹ್ಲುಸುನ್ನದ ಸಂಘಟನೆಗೆ ಆಡಿಪಾಯವಿಟ್ಟರು…
ಸಂಘಟನೆಯಲ್ಲಿ ಕಾರ್ಯಾಚರಿಸಿ, ಅದರ ಹಿಂದೆ ನಡೆದು, ಅಂದರೆ ಮಧ್ಯರಾತ್ರಿಯಲ್ಲೂ ಓಡಾಡಿ ಕಟ್ಟಿ ಬೆಳೆಸಿದ ಸಂಘಟನೆಯಾಗಿದೆ ಕೆಸಿಎಫ್.
ಅಂದಿನಿಂದ ಇಂದಿನವರೆಗೆ ಅಂದರೆ ಕೆಸಿಎಫ್ ಬೆಳೆದುಬಂದ ಹತ್ತುವರ್ಷಗಳಲ್ಲಿ ಕರ್ನಾಟಕ – ಕರಾವಳಿ ಕರ್ನಾಟಕ ಯುವಕರು ಅನಿವಾಸಿ ಕನ್ನಡಿಗನಾಗಿ ಅಹ್ಲುಸ್ಸುನ್ನದ ಆಶಯವನ್ನು ಬದಿಗಿಟ್ಟು ನಡೆಯುತ್ತಿರುವುದು ಬಹು ವಿರಳ.
ಹತ್ತುವರ್ಷಗಳಲ್ಲಿ ಕಂಡ ಬದಲಾವಣೆಗಳು ಬರೆದಿಡಬೇಕಾದ ಮೊದಲ ಉದಾಹರಣೆಯಾಗಿದೆ.
ಇದರ ಹಿಂದಿನ ವಿದ್ವಾಂಸರ ಪರಿಶ್ರಮಕ್ಕೆ ಅಭಿನಂದಿಸಲು ಪದಗಳೇ ಇಲ್ಲ!!!ಹತ್ತು ವರ್ಷಗಳನ್ನು ತುಂಬಿದ ಕೆಸಿಎಫ್ ಗೆ ಮೊದಲು ಅಭಿನಂದಿಸುತ್ತಿದ್ದೇನೆ.
ಮಾನವೀಯತೆಗೆ ಮೌಲ್ಯವನ್ನು ನೀಡಿ ಕರ್ನಾಟಕದಾದ್ಯಂತ ಪ್ರಚಾರವಿಲ್ಲದೇ ಹಲವಾರು ಜನರ, ಹಲವಾರು ಅನಿವಾಸಿ ಕನ್ನಡಿಗರ, ಬದುಕಿಗೆ ಹೊಸ ಬೆಳಕಾಗಿಯೂ, ಇಂದಿಗೂ ಅಂಧಕಾರದ ಬದುಕನ್ನು ರೂಪಿಸುತ್ತಿರುವ ಮುಸ್ಲಿಂ ಎಂಬ ನಾಮವನ್ನಿಟ್ಟು ಮುಸ್ಲಿಮೇತರ ಆಚರಣೆಯನ್ನು ನಡೆಸುತ್ತಿರುವ ಜನರು, ಇಸ್ಲಾಮಿನ ಕುರುಹುಗಳೇ ಕಾಣದ ಮನೆಗಳು, ಮಸೀದಿಗಳೇ ಕಾಣದ ಮನುಷ್ಯರು, ಇಂತಹ ಜನರೆಡೆಯಲ್ಲಿ ಕೆಸಿಎಫ್ ನ ಇಹ್ಸಾನ್ ನ ದಾಈಗಳು ಕಾರ್ಯಾಚರಿಸಿ ಉತ್ತರ ಕರ್ನಾಟಕದಂತಹ ಹಲವಾರು ಕಡೆಗಳಲ್ಲಿ, ಆದರ್ಶ ಕುರುಡಾದ ಜನರಲ್ಲಿ ಕೆಸಿಎಫ್ ಹೊಸ ಬೆಳಕನ್ನು ಚೆಲ್ಲಿತು.
ಪ್ರಪಂಚದಾದ್ಯಂತ ಮಹಾಮಾರಿ ಕೊರೋನಾ ಆವರಿಸಿದ ಸಮಯ ಎಲ್ಲಾ ವಿಧದಲ್ಲೂ ಸಹಕರಿಸುವಲ್ಲಿ ಕೆಸಿಎಫ್ ಮುಂದಾಳತ್ವ ವಹಿಸಿ ಜನರ ಕಷ್ಟ ನೀಗುಸುತ್ತಿದ್ದವು.
ಊರಿನ, ಕುಟುಂಬದ ಬಾಧ್ಯತೆಗಳನ್ನೆಲ್ಲಾ ಮನಗೊಂಡು ನಾಡು, ಕುಟುಂಬ, ಸ್ನೇಹಿತರು ಎಲ್ಲವನ್ನು ಬಿಟ್ಟು ಕಡಲು ದಾಟಿದ ಅನಿವಾಸಿಗಳು ಒಂದು ಕಾಲದಲ್ಲಿ ಕೆಲಸ ವಾಸಸ್ಥಳ ಎಂಬುದು ಮಾತ್ರವಲ್ಲದೆ ಹೊರ ಪ್ರಪಂಚ ಯಾವುದನ್ನು ಕಾಣದೆ ಮೇಣದ ಬತ್ತಿಯಂತೆ ಕರಗಿ ಮುಗಿಯುವ ಜೀವನ ಸಾಗಿಸುವ ಸಮಯ…
ಅಂತಹದವರೆಡೆಗೆ ಕೆಸಿಎಫ್ ಬಂದು ಬದುಕಿಗೆ ಬೆಳಕಾಗಿ ದಾರಿ ತೋರಿಸಿದೆ.
ಹೀಗೆ ನೋಡಿದಾಗ ಬರೆದು ಮುಗಿಯದಷ್ಟು ಸಾಲುಗಳು, ಧಾರ್ಮಿಕವಾಗಿಯೂ ಸಾಮಾಜಿಕವಾಗಿಯೂ ಹಲವು ಯೋಜನೆಗಳನ್ನು ಮಾಡಿ ಮುಗಿಸಿದ್ದು, ಇನ್ನು ಮಾಡಿ ಮುಗಿಸಲು ಮುಂದಾದ ಯೋಜನೆಗಳು ನೂರಾರು.ಅಲ್ಲಾಹು ಜನರೆಡೆಯಲ್ಲಿ ಜನರೊಂದಿಗೆ ಇಷ್ಟಪಟ್ಟು ಅಲ್ಲಾಹನ ಇಷ್ಟದಾಸರಲ್ಲಿ ಕಾಣುವ ಸಂಘಟನೆ ಯಾಗಲಿ(ಆಮೀನ್) ಎಂದು ಹಾರೈಸುವೆ.
✍️ಕೆಎಸ್ಎಮ್ ಎಲಿಮಲೆ
(KCF ಒಮಾನ್)