ದುಬೈ: ನಿಪ್ಹಾ ವೈರಸ್ ನಿಂದಾಗಿ ಕೇರಳದಲ್ಲಿ ಸಾವು ಸಂಭಸಿದ್ದು, ಗಲ್ಫ್ ದೇಶಗಳಲ್ಲೂ ಕಳವಳವನ್ನು ಉಂಟು ಮಾಡಿದೆ. ಈಗ ಕೇರಳದಲ್ಲಿ ಉಳಿದಿರುವವರು ಮತ್ತು ಕೇರಳಕ್ಕೆ ಯಾತ್ರೆ ಹೊರಡುವವರಿಗೆ ಬಹ್ರೈನ್ ಮತ್ತು ಯುಎಇ ಎಚ್ಚರ ವಹಿಸುವಂತೆ ಸೂಚನೆ ನೀಡಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಕೇರಳಕ್ಕೆ ಪ್ರಯಾಣಿಸದಂತೆ ಬಹ್ರೈನ್ ತಮ್ಮ ನಾಗರಿಕರಿಗೆ ಸಲಹೆ ನೀಡಿದೆ.ಬಹ್ರೈನ್‌ನ ಮುಂಬಯಿ ದೂತಾವಾಸವು ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಸಂದೇಶವನ್ನು ನೀಡಿದೆ.
ತಿರುವನಂತಪುರದ ಯುಎಇ ದೂತಾವಾಸ ಕೇಂದ್ರವು ನಿಪ್ಹಾ ವೈರಸ್ ಬಗ್ಗೆ ತಮ್ಮ ನಾಗರಿಕರಿಗೆ ಎಚ್ಚರಿಕೆ ವಹಿಸುವಂತೆ ವಿನಂತಿಸಿದೆ.ಕೇರಳ ಮತ್ತು ದಕ್ಷಿಣ ಭಾರತದ ರಾಜ್ಯಗಳ ಪ್ರಜೆಗಳಿಗೆ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಎಚ್ಚರಿಕೆಯನ್ನು ನೀಡಿದೆ.
ನಿಪ್ಹಾ ವೈರಸ್ ವಿರುದ್ದ ಭಾರತ ಸರಕಾರ ಮತ್ತು ಕೇರಳ ಸರ್ಕಾರಗಳು ನೀಡುವ ಮುನ್ನೆಚ್ಚರಿಕೆಗಳನ್ನು ಗಮನಿಸುವಂತೆ ದೂತಾವಾಸ ಎಚ್ಚರಿಕೆ ನೀಡಿದೆ.