ಬನ್ನೂರು 16:( ಜನಧ್ವನಿ ವಾರ್ತೆ) ಜಿ,ಸಿ,ಸಿ ಸುನ್ನೀ ಫ್ರೇಂಡ್ ,ಎಸ್.ಎಸ್.ಎಫ್ ಬನ್ನೂರು ಶಾಖೆ ಹಾಗೂ ಎಸ್.ವೈ.ಎಸ್ ಬನ್ನೂರು ಇದರ ಸಂಯಕ್ತ ಆಶ್ರಯದಲ್ಲಿ ಸುನ್ನೀ ಸೆಂಟರ್ ಬನ್ನೂರು ವತಿಯಿಂದ ಬನ್ನೂರು ಮೊಹಲ್ಲಾ ವ್ಯಾಪ್ತಿಯ ಬಡ 50 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ ಬನ್ನೂರಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್,ವೈ,ಎಸ್ ಬನ್ನೂರು ಬ್ರಾಂಚ್ ಕಾರ್ಯದರ್ಶಿ ಹಾಗೂ ಜಿಲ್ಲಾ ಸದಸ್ಯರಾದ ಅಬ್ದುಲ್ಲಾ ಮುಸ್ಲಿಯಾರ್ ಮಾತನಾಡಿ ಪವಿತ್ರವಾದ ರಂಝಾನ್ ತಿಂಗಳನ್ನು ಎಲ್ಲರೂ ಸಮಾನರಾಗಿ ಅತ್ಯಂತ ಸಂತೋಷದಿಂದ ಆಚರಿಸಬೇಕು.ಹಲವು ಪುಣ್ಯ ಲಭಿಸುವಂತ ತಿಂಗಳಾದ ರಂಝಾನ್ ತಿಂಗಳು ಅಂತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಎಂದು ರಂಝಾನ್ ಸಂದೇಶ ನೀಡಿದರು
ಸುನ್ನೀ ಸೆಂಟರ್ ಕಾರ್ಯನಿರ್ವಾಹಕ ಸಮಿತಿ ಅಧ್ಯಕ್ಷರಾದ ಫಾರೂಕ್ ಮಾತನಾಡಿ ಬನ್ನೂರು ಸುನ್ನೀ ಸೆಂಟರ್ 10 ತಿಂಗಳ ಅವದಿಯಲ್ಲಿ ಬಡ ವಿದ್ಯಾರ್ಥಿಯ ಶಿಕ್ಷಣಕ್ಕೆ ಸಹಾಯ ಧನ ವಿತರಣೆ,ಬಡ ಹೆಣ್ಣಿನ ಮದುವೆಗೆ ಸಹಾಯ ಧನ ವಿತರಣೆ,ಬಡ ಮಕ್ಕಳ ಸುನ್ನತ್ (ಮುಂಜಿ)ಕಾರ್ಯಕ್ರಮ,ಮದ್ರಸಕ್ಕೆ ಬೆಂಚು ವಿತರಣೆ, ಹೀಗೆ ಹಲವಾರು ಸಾಂತ್ವನ,ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಹಲವಾರು ಬಡವರಿಗೆ ಆಸರೆಯಾಗಿದೆ ಎಂದು ಸುನ್ನೀ ಸೆಂಟರ್ ನಡೆಸಿದ ಕಾರ್ಯವೈಖರಿಗಳನ್ನು ನೆನಪಿಸಿದರು.
ಎಸ್,ವೈ,ಎಸ್ ಬನ್ನೂರು ಬ್ರಾಂಚ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ,ಸುನ್ನೀ ಸೆಂಟರ್ ಬನ್ನೂರು ಪ್ರಮುಖರಾದ ಅಬೂಬಕ್ಕರ್ ಪಾಪ್ಲಿ, ಸಾದಿಕ್,ರಿಯಾಝ್ ಪಾಪ್ಲಿ,ಮುಹಮ್ಮದ್ ಇಕ್ಬಾಲ್ (ಮಮ್ಮು) ಅಕ್ಕರೆ, ಇಬ್ರಾಹಿಮ್,ಜಿ ಸಿ ಸಿ ಸುನ್ನೀ ಫ್ರೆಂಡ್ಸ್ ಪ್ರಮುಖರಾದ ಬಶೀರ್,ಎಸ್ ಎಸ್ ಎಫ್ ಬನ್ನೂರು ಶಾಖೆ ಉಪಾಧ್ಯಕ್ಷರಾದ ಶಮೀರ್ ಸದಸ್ಯರಾದ ಸುಹೈಲ್ ಹುಸೈನ್, ನದೀಮ್ ಮೊದಲಾದವರು ಉಪಸ್ಥಿತಿರಿದ್ದರು.