ಶಾರ್ಜಾ(ಯು ಎ ಇ): ಶಾರ್ಜಾ ಸಅದಿಯ್ಯ ಕಮಿಟಿ .ಮತ್ತು ICF KCF RSC ಸಂಘಟನೆಗಳ ಸಹಭಾಗಿತ್ವದಲ್ಲಿ ವರ್ಷಂಪ್ರತಿ ಬಹಳ ವಿಜೃಂಭಣೆಯಿಂದ ನಡೆಸಲ್ಪಡುವ ತಾಜುಲ್ ಉಲಮಾ,ನೂರುಲ್ ಉಲಮಾ ಅನುಸ್ಮರಣಾ ಮಜ್ಲಿಸ್ 2023ರ ಅಕ್ಟೋಬರ್ 20 ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ಶಾರ್ಜಾ ಕ್ಲಾಕ್ ಟವರ್ ಸಮೀಪದ ನೂರ್ ಹಿಲಾಲ್ ಪಾರ್ಟಿ ಹಾಲ್ ನಲ್ಲಿ ನಡೆಯಲಿದೆ.

ಪ್ರಸ್ತುತ ಕಾರ್ಯಕ್ರಮಕ್ಕೆ ಜಾಮಿಅ ಸಅದಿಯ್ಯ ಸಂಸ್ಥೆಯ ಅಧ್ಯಕ್ಷರೂ ಸಮಸ್ತ ಉಪಾಧ್ಯಕ್ಷರಾದ ಬಹು; K S ಆಟಕೋಯ ತಂಙಳ್ ಕುಂಬೋಲ್ ರವರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಯಶಸ್ವಿಗಾಗಿ, ಸೆಪ್ಟೆಂಬರ್ 2 ರಂದು ಶಾರ್ಜಾ ಮುಹಿಮ್ಮಾತ್ ಸೆಂಟರ್ ನಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಶಿರಿಯಾ ಅಬೂಬಕ್ಕರ್ ಉಸ್ತಾದರು ದುಅಃ ನೆರವೇರಿಸಿದರು. ಶಾರ್ಜಾ ಸಅದಿಯ್ಯ ಸಮಿತಿ ಅಧ್ಯಕ್ಷರಾದ ಅಬ್ದುಲ್ಲ ಹಾಜಿ ಉಳ್ವಾರ್ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ನುಅ್ ಮಾನ್ ಕೊಲ್ಲಂಬಾಡಿ ಸ್ವಾಗತಿಸಿದರು. ಅಬೂಬಕ್ಕರ್ ಮದನಿ ತೋಕೆ (ಪಯಕಡಪುರಂ) ಉದ್ಘಾಟಿಸಿದರು. ಸಯ್ಯಿದ್ ಜಿಫ್ರಿ ತಂಙಳ್ ಬೇಕಲ್ ಪ್ರಸ್ತಾವಿಕ ಬಾಷಣ ಮಾಡಿದರು.
ಸಭೆಯಲ್ಲಿ ಶೈಖ್ ಇಮಾಮ್ ಬೇಕಲ್, ಅಬ್ದುಲ್ ಖಾದರ್ ಹಾಜಿ ಕಾಞಂಗಾಡ್, ಸಅದಿಯ್ಯ ಶಾರ್ಜಾ ಓರ್ಗೈಸರ್ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ ಹಾಗೂ ICF, KCF, RSC, ಸಅದಿಯ್ಯ ಅಲುಮ್ನಿ ಮೊದಲಾದ ಸಂಘಟನೆಯ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್