ರಿಯಾದ್: ಹಜ್ ಯಾತ್ರೆ ಮುಗಿಸಿ ಮನೆಗೆ ಮರಳುವ ಯಾತ್ರಾರ್ಥಿಗಳಿಗೆ 20 ಲಕ್ಷ ಖುರ್ಆನ್ ಪ್ರತಿಗಳನ್ನು ವಿತರಿಸಲಾಗುತ್ತಿದೆ.ದೊರೆ ಸಲ್ಮಾನ್ ಅವರ ಆದೇಶದಂತೆ, ಸೌದಿ ಅರೇಬಿಯಾದ ಧಾರ್ಮಿಕ ವ್ಯವಹಾರಗಳ ಇಲಾಖೆಯು ಈ ಖುರ್ಆನ್ ಗಳನ್ನು ಸಿದ್ಧಪಡಿಸಿದೆ. ಇವುಗಳನ್ನು ದೇಶದ ವಿವಿಧ ಗಡಿ ದ್ವಾರಗಳಲ್ಲಿ ಯಾತ್ರಾರ್ಥಿಗಳಿಗೆ ವಿತರಿಸಲಾಗುತ್ತದೆ.
77 ಭಾಷೆಗಳಲ್ಲಿ ಖುರ್ಆನ್ ಅನುವಾದಗಳನ್ನು ಯಾತ್ರಿಕರಿಗೆ ವಿತರಿಸಲಾಗುತ್ತದೆ. ಇದಕ್ಕಾಗಿ ಧಾರ್ಮಿಕ ವ್ಯವಹಾರಗಳ ಇಲಾಖೆ ಕೌಂಟರ್ಗಳ ಸಿದ್ಧತೆಯನ್ನು ಪೂರ್ಣಗೊಳಿಸಿದೆ. ಪ್ರತಿ ವರ್ಷ ಹಜ್ಗೆ ಬರುವ ಎಲ್ಲಾ ವಿದೇಶಿ ಯಾತ್ರಾರ್ಥಿಗಳಿಗೆ ದೊರೆ ಸಲ್ಮಾನ್ನಿಂದ ಉಡುಗೊರೆಯಾಗಿ ಮುಸ್ಹಫ್ ಮತ್ತು ಖುರ್ಆನ್ ಅನುವಾದಗಳನ್ನು ವಿತರಿಸಲಾಗುತ್ತದೆ. ಇವುಗಳನ್ನು ಮದೀನಾದಲ್ಲಿರುವ ಕಿಂಗ್ ಫಹದ್ ಖುರ್ಆನ್ ಪ್ರಿಂಟಿಂಗ್ ಕಾಂಪ್ಲೆಕ್ಸ್ನಲ್ಲಿ ಮುದ್ರಿಸಲಾಗಿದೆ.
ಹಜ್ ಯಾತ್ರೆ ಮುಗಿಸಿದ ಭಾರತೀಯ ಯಾತ್ರಿಕರ ವಾಪಸಾತಿ ಸೋಮವಾರದಿಂದ ಆರಂಭವಾಗಿದೆ. ಜಿದ್ದಾದಿಂದ ದೆಹಲಿ, ಕೋಲ್ಕತ್ತಾ, ಲಕ್ನೋ ಮತ್ತು ಜೈಪುರಕ್ಕೆ ಮೊದಲ ಬ್ಯಾಚ್ ಹೊರಟಿದೆ. ಮೊದಲ ದಿನ ಸುಮಾರು ಎರಡು ಸಾವಿರ ಯಾತ್ರಿಕರು ಹೊರಟಿದ್ದರು.
ಜಿದ್ದಾ ಮೂಲಕ ಆಗಮಿಸಿದ ಹಜ್ ಸಮಿತಿಯ ಅಧೀನದಲ್ಲಿರುವ ಯಾತ್ರಾರ್ಥಿಗಳು ಈಗ ಮದೀನಾ ರೌಳಾ ಸಂದರ್ಶನ ಪೂರ್ಣಗೊಳಿಸಬೇಕಾಗಿದೆ. ಮಂಗಳವಾರದಿಂದ ಮದೀನಾಕ್ಕೆ ತೆರಳಲಿದ್ದಾರೆ. ಎಂಟು ದಿನಗಳ ಕಾಲ ಮದೀನಾದಲ್ಲಿ ತಂಗುವ ಮೂಲಕ ಸಂದರ್ಶನ ಪೂರ್ಣಗೊಳ್ಳಲಿದೆ. ಬಳಿಕ ಮದೀನಾ ವಿಮಾನ ನಿಲ್ದಾಣದ ಮೂಲಕ ತಾಯ್ನಾಡಿಗೆ ಮರಳಲಿದ್ದಾರೆ.
















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ