ತಿರುವನಂತಪುರಮ್: ಪಿಡಿಪಿ ಚೇರ್ಮನ್ ಅಬ್ದುಲ್ ನಾಸರ್ ಮಅದನಿ ಅವರು ಮೈನಾಗಪ್ಪಳ್ಳಿಯ ತಮ್ಮ ಕುಟುಂಬದ ಮನೆಗೆ ತಲುಪಿ ಹೆತ್ತವರನ್ನು ಭೇಟಿಯಾದರು.
ರೋಗಪೀಡಿತರಾದ ತಾಯಿ ಅಸ್ಮಾಬಿ ಅವರನ್ನು ಭೇಟಿ ಮಾಡಲು ಅನುಮತಿ ನೀಡಲ್ಪಟ್ಟ ಹಿನ್ನಲೆಯಲ್ಲಿ ಮಅದನಿ ಅವರು ಕೇರಳಕ್ಕೆ ತೆರಳಿದರು.
ಮಅದನಿಯವರು ಅನ್ ವಾರುಶ್ಶೇರಿ ಬಳಿಯಿರುವ ಕುಟುಂಬದ ಮನೆಯಾದ ತೋಟುವಾಲ್ ಮನೆಗೆ ಬಂದು ತಮ್ಮ ತಂದೆಯವರನ್ನು ತಬ್ಬಿಕೊಂಡರು.ನಂತರ ಕ್ಯಾನ್ಸರ್ ರೋಗದಿಂದಾಗಿ ಕೋಣೆಯಲ್ಲಿ ವಿಶ್ರಮಿಸುತ್ತಿರುವ ತಾಯಿ ಅಸ್ಮಾಬಿಯವರ ಬಳಿ ತೆರಳಿ ರೋಗವಿವರವನ್ನು ಕೇಳಿ ತಿಳಿದು ಆಶ್ವಾಸನೆ ನೀಡಿದರು.
ತೀವ್ರ ಅನಾರೋಗ್ಯಕ್ಕೊಳಗಾದ ತಾಯಿಯನ್ನು ನೋಡುವುದಕ್ಕೂ ಕೂಡ ಕೋರ್ಟ್‌ಗೆ ಸಮೀಪಿಸಿ, ಬಹಳ ಕಷ್ಟ ಅನುಭವಿಸುವಂತಾಯಿತು ಎಂದು ಮಅದನಿ ಹೇಳಿದರು. ಅರ್ಜಿ ಸಲ್ಲಿಸಿದ ದಿನ ನ್ಯಾಯಾಧೀಶರು ರಜೆಯಲ್ಲಿದ್ದರು.ಮರುದಿನ ಪ್ರಾಸಿಕ್ಯೂಟರ್ ರಜೆಯಲ್ಲಿದ್ದರು. ಮಾರನೇದಿನ ಡಿಫಂಟ್ ಫೈಲ್ ಮಾಡಿರಲಿಲ್ಲ. ಈ ರೀತಿಯಾಗಿ ಅರ್ಜಿಯನ್ನು ಅಂಗೀಕರಿಸಲು ವಿಳಂಬ ಉಂಟಾಯ್ತು.ತುರ್ತು ಸಂದರ್ಭಗಳಲ್ಲಿ ನ್ಯಾಯ ಪಡೆಯಲು, ನ್ಯಾಯಾಲಯದ ಕಾನೂನಿನಲ್ಲಿ ತಿದ್ದುಪಡಿ ಮಾಡಬೇಕು.ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ಚೆಲಮೇಶ್ವರ್ ನನಗೆ ಜಾಮೀನು ನೀಡಿದರು.
ತಾಯಿಯನ್ನು ಭೇಟಿಮಾಡಲು ಅಗತ್ಯವಾದಾಗ ಅನುಮತಿಯನ್ನು ನೀಡ ಬೇಕು ಎಂದು ಅಂದು ನಿರ್ಧರಿಸಲಾಗಿತ್ತು. ಆ ಅವಕಾಶವನ್ನು ಕೂಡ ಬದಲಾಯಿಸಲಾಗಿದೆ. ನ್ಯಾಯಾಲಯಗಳು ಕರುಣಿಸಿದರೂ ಅಧಿಕಾರಿಗಳು ಅದನ್ನು ತಡೆಯಲು ಪ್ರಯತ್ನ ಪಡುತ್ತಾರೆ.
ಈ ತಿಂಗಳ ಎರಡಕ್ಕೆ ಮನೆಗೆ ತೆರಳಲು ಅನುಮತಿ ನೀಡಲಾಗಿತ್ತು.ಮೂರಕ್ಕೆ ತೆರಳಲು ಸಿದ್ಧತೆ ನಡೆಸಿದಾಗ , ಭದ್ರತೆಗೆ ಅಗತ್ಯವಾದ ಪೊಲೀಸರ ಕೊರತೆ ಇದೆ ಎಂದು ಪ್ರಯಾಣ ಮೊಟಕು ಗೊಳಿಸಿ,ನಂತರ ಭದ್ರತೆಗೆ ಪೊಲೀಸರನ್ನು ಒದಗಿಸಿದ್ದಾರೆ.
ಸುಳ್ಳು ಆರೋಪಗಳನ್ನು ಹೊರಿಸಿ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಾರೆ ಆದರೆ, ನಂಬಿಕೆಯ ಆಧಾರದಲ್ಲಿ ಬದುಕುತಿದ್ದೇನೆ ಎಂದು ಮಅದನಿ ಮಾಧ್ಯಮದವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.
ಬೆಂಗಳೂರಿನ ಬೆನ್ಸನ್ ಪಟ್ಟಣದಿಂದ ರಸ್ತೆಮಾರ್ಗವಾಗಿ ಮಅದನಿ ಕೇರಳಕ್ಕೆ ಪ್ರಯಾಣಿಸಿದ್ದರು.ಎನ್ಐಎ ನ್ಯಾಯಾಲಯವು ಮೇ. 3 ರಿಂದ 11 ರವರೆಗೆ ಕೇರಳದಲ್ಲಿ ಉಳಿಯಲು ಅನುಮತಿ ನೀಡಿದೆ.
ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿಗಳೊಂದಿಗೆ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ವಿಮಾನಯಾನವನ್ನು ಕೈಬಿಡಲಾಗಿ, ರಸ್ತೆ ಮಾರ್ಗವಾಗಿ ಯಾತ್ರೆ ಹೊರಡಲಾಯಿತು. ಸೇಲಂ, ಕೊಯಮತ್ತೂರು, ಪಾಲಕ್ಕಾಡ್ ಮತ್ತು ತ್ರಿಶೂರ್ ಮಾರ್ಗವಾಗಿ ಆಗಮಿಸಿ ಶುಕ್ರವಾರ ರಾತ್ರಿ ಮಅದನಿ ಸಸ್ತಾಂಕೋಟೆ ಮನೆ ತಲುಪಿದರು.ಪಾಲಕ್ಕಾಡ್ನಲ್ಲಿ ಮಧ್ಯಾಹ್ನ ಜುಮುಆ ನಿರ್ವಹಿಸಿದ ನಂತರ ಅವರು ಪ್ರಯಾಣ ಮುಂದುವರಿಸಿದ್ದರು.
ಮಅದನಿ ವಾಸಿಸುವ ಅನ್ವಾರುಶ್ಶೇರಿಯ ಭದ್ರತಾ ವ್ಯವಸ್ಥೆಗಳ ಜವಾಬ್ದಾರಿಯನ್ನು ಕೊಟ್ಟಾರಕ್ಕರ ಡಿವೈಎಸ್ಪಿ ಅವರಿಗೆ ವಹಿಸಲಾಗಿದೆ.ಎಸ್ಐ ಶ್ರೇಣಿಯ ಪೋಲಿಸ್ ಅಧಿಕಾರಿಯ ನೇತೃತ್ವದಲ್ಲಿ 15 ಪೊಲೀಸರು ಸದಾ ಭದ್ರತೆ ನೀಡಲಿದ್ದಾರೆ.
ಕರ್ನಾಟಕದಲ್ಲಿ ಚುನಾವಣೆಯ ಕಾರಣ ಅಗತ್ಯವಿರುವ ಪೊಲೀಸರು ಲಭ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಬೆಂಗಳೂರು ಸಿಟಿ ಪೊಲೀಸರು ತಿಳಿಸಿದರು.ಅಲ್ಲದೆ, ರಸ್ತೆ ಮಾರ್ಗವಾಗಿ ಪ್ರಯಾಣಿಸಲು 80,000 ರೂ. ಮತ್ತು ಅದರ ಜಿಎಸ್ಟಿ ಯನ್ನು ಬೆಂಗಳೂರು ಪೊಲೀಸರು ಬೇಡಿಕೆ ಇಟ್ಟಿದ್ದರು.ನಂತರ ಕಮೀಷನರ್ ಸಿಟ್ಟಿಂ ಆರ್ಮ್ಡ್ ರಿಸರ್ವ್ ಪೋಲಿಸ್ (ಸಿಆರ್ಎ) ಯ ಸಹಾಯದಿಂದ ಭದ್ರತೆಯನ್ನು ಒದಗಿಸಲು ಏರ್ಪಾಟು ಮಾಡಿದ ನಂತರ ಮಅದನಿ ಕೇರಳಕ್ಕೆ ಭೇಟಿ ನೀಡಿ ಅವರ ಹೆತ್ತವರನ್ನು ನೋಡುವಂತಾಯಿತು.