janadhvani

Kannada Online News Paper

ಧಾರ್ಮಿಕ ಕ್ಷೇತ್ರಗಳನ್ನು ಚುನಾವಣೆ ಪ್ರಚಾರಕ್ಕೆ ಬಳಕೆ ಮಾಡದಿರಲು ವಕ್ಫ್ ಸೂಚನೆ

ಚಿಕ್ಕಮಗಳೂರು ದಿನಾಂಕ 24/04/2023 ಜಿಲ್ಲಾ ವಕ್ಫ್ ಮಂಡಳಿ ಕಾರ್ಯಾಲಯ
ಭಾರತ ಚುನಾವಣಾ ಆಯೋಗದ ಪತ್ರ ಸಂಖ್ಯೆ 3/1/2022/SDR/Vol.1/ದಿನಾಂಕ 19/01/2023
ಉಲ್ಲೇಖಿತ ಪತ್ರದಲ್ಲಿ 2023 ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚನಾವಣೆ ಮೇ 10ರಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರಯುಕ್ತ The religious institution (prevention of misuse ) Act 1988 ಕಲಂ 3.5&6 ರಲ್ಲಿ ತಿಳಿಸಿರುವಂತೆ ಧಾರ್ಮಿಕ ಸಂಸ್ಥೆಗಳ ಅಥವಾ ಧಾರ್ಮಿಕ ವಿಧಿಗಳನ್ನು ರಾಜಕೀಯ ಚಟುವಟಿೆ ಅಥವಾ ರಾಜಕೀಯ ಲಾಭಕ್ಕಾಗಿ ಬಳಸುವುದನ್ನು ನಿಷೇಧಿಸಲಾಗಿರುತ್ತದೆ

ಇದಕ್ಕೆ ಸಂಬಂಧಿಸಿದಂತೆ ವಕ್ಫ್ ಮಂಡಳಿ ಅಧೀನದಲ್ಲಿರುವ ವಕ್ಫ್ ನೋಂದಾಯಿತ ಅಥವಾ ನೋಂದಾಯಿತ ವಿಲ್ಲದಿರುವ ಸಂಸ್ಥೆಗಳಲ್ಲಿ ಅಥವಾ ಮಸೀದಿ ದರ್ಗಾ, ಈದ್ಗಾ ಮೈದಾನ, ಇನ್ನಿತರೆ ಧಾರ್ಮಿಕ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಚಟುವಟಿಕೆಗಳು ಕಂಡುಬಂದಲ್ಲಿ ಸಂಬಂಧಪಟ್ಟ ಆಡಳಿತ ಸಮಿತಿಯವರನ್ನು ನೇರ ಹೊಣೆಗಾರರು ಎಂದು ಬಿಂಬಿಸಿ ಅಂತಹ ವ್ಯಕ್ತಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು

ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಉಲ್ಲೇಖಿತ ಪತ್ರದಲ್ಲಿ ನಿರ್ದೇಶಿಸಲಾಗಿದೆ ಆದುದರಿಂದ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚನಾವಣೆಗೆ ಸಂಬಂಧಿಸಿದಂತೆ ಪ್ರತಿಯೊಂದು ಧಾರ್ಮಿಕ ಸಂಸ್ಥೆಗಳ ಅಧ್ಯಕ್ಷರು,ಕಾರ್ಯದರ್ಶಿಗಳು,
ಆಡಳಿತಾಧಿಕಾರಿಗಳು ಚುನಾವಣಾ ಮಾದರಿ ನೀತಿ ಸಂಹಿತೆ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com