ಅನಿವಾಸಿಗಳ ಬದುಕಿನಲ್ಲಿ ಹೊಸ ಸಂಚಲನ ಮೂಡಿಸಿ ಗಲ್ಪ್ ರಾಷ್ಟ್ರ ಗಳು, ಮಲೇಷ್ಯಾ, ಮತ್ತು ಲಂಡನ್ ಗೂ ವಿಸ್ತರಿಸಿ ನಿಂತ
ಅತಿ ಹೆಚ್ಚು ಸದಸ್ಯ ಬಲ ಮತ್ತು ಶಿಶ್ತಿನ ಕಾರ್ಯಕರ್ತರಿರುವ ಕನ್ನಡಿಗರ ಏಕೈಕ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF )
ಕೆ.ಸಿ.ಎಫ್ ಅನ್ನುವಾಗ ಅನಿವಾಸಿ ಕನ್ನಡಿಗರ ಮನದಲ್ಲಿ ಆನಂದದ ಮೊಂಬತ್ತಿ ಉರಿಯಲು ಆರಂಭವಾಗುತ್ತದೆ.
ಕೆ.ಸಿ.ಎಫ್ ನಿಮಗೆ ಉಸಿರು ಇದ್ದಂತೆ. ನಿಮ್ಮೆಲ್ಲಾ ಬ್ಯೂಸಿ ಮತ್ತು ವೈಯುಕ್ತಿಕ ಕಾರ್ಯಗಳ ಒತ್ತಡದಲ್ಲೂ ಇದರ ಕಾವಲುಗಾರರಾಗಿ ನಿಲ್ಲುವ ನಿಮ್ಮ ನಿಷ್ಕಳಂಕ ಗಟ್ಟಿ ಮನಸ್ಸು ಸಂಘಟನೆಯನ್ನು ಈ ಮಟ್ಟದಲ್ಲಿ ಬೆಳೆಸಿದೆ.ಕಳೆದ ಹತ್ತು ವರ್ಷಗಳಲ್ಲಿ ಸಮಾಜದ ಮುಂದೆ ಅಪ್ರತಿಮ ಕೊಡುಗೆಯನ್ನು ನೀಡಲು ನಿಮಗೆ ಸಾಧ್ಯವಾಗಿದೆ.
ದೇವ ಭಯ, ಧಾರ್ಮಿಕ ಶಿಸ್ತು, ಅಚ್ಚುಕಟ್ಟುತನ, ಶ್ರದ್ಧೆ, ದೇಶ ಪ್ರೇಮ, ಪ್ರಾಮಾಣಿಕತೆ, ಸಾಮಾಜಿಕ ಕಳಕಳಿ, ಅಂತರಂಗ ಸಂಸ್ಕಾರ, ವ್ಯವಹಾರಿಕ
ಪಾರದರ್ಶಕತೆ ಹಾಗೂ ಪರಿಶುದ್ದತೆಗಳನ್ನು ಹೊಂದಿರುವ ಉತ್ತಮ ಸಮಾಜದ ನಿರ್ಮಾಣದಲ್ಲಿ ನಿಮ್ಮ ಸೇವೆ ನಿಜಕ್ಕೂ ಅನನ್ಯ.
ನೂರಾರು ಕನಸುಗಳನ್ನು ನನಸು ಮಾಡಿದ ನಿಮ್ಮ ದೃಢ ಹೆಜ್ಜೆ ಬೆಟ್ಟದಂತ ಸವಾಲುಗಳನ್ನು ಮೆಟ್ಟಿ ನಿಂತಿದೆ.ಪ್ರೀತಿಯ ಸಹ ಕಾರ್ಯಕರ್ತರೇ,
ಮಾನಸಿಕ ಶುದ್ದಿ, ಸಹನೆ, ಸಹಿಷ್ಟುತೆ, ಸಹಾನುಭೂತಿ, ಶಿಸ್ತು , ದೇಶ ಪ್ರೇಮ,
ಸತ್ಯ ವಿಶ್ವಾಸದ ಅನುಯಾಯಿಗಳಾಗಿ ಒಗ್ಗಟ್ಟಿನಲ್ಲಿ ಧೈರ್ಯದೊಂದಿಗೆ ಮುನ್ನುಗ್ಗಿರಿ.ಯಾವುದೇ ಛಿದ್ರತೆ, ಅನೈಕ್ಯತೆಯ ವಿಷಗಾಳಿ ಹತ್ತಿರ ಬಾರದಂತೆ ಜಾಗರೂಕತೆರಾಗಿರಿ.
Be Saviour of the culture ( ಸಂಸ್ಕೃತಿಯ ಸಂರಕ್ಷರಾಗಿರಿ) ಎಂಬುದು ಕೆ.ಸಿ.ಎಫ್ ನ ದಶ ವಾರ್ಷಿಕದ ಘೋಷವಾಕ್ಯ.
ಸಕಾರಾತ್ಮಕವಾಗಿ ಯೋಚಿಸಿರಿ. ಸಮಾಜ ನಿಮ್ಮಿಂದ ರಚನಾತ್ಮಕ ಕಾರ್ಯಗಳನ್ನು ನಿರೀಕ್ಷಿಸುತ್ತಿದೆ.
ಒಳ್ಳೆಯ ಮನಸ್ಸುಗಳು ನಿಮ್ಮೊಂದಿಗಿವೆ. ಅಲ್ಲಾಹನ ಸಹಾಯ ಖಂಡಿತಾ ಒಳಿತಿನ ವಾಹಕರ ಮೇಲಿದೆ.
ಒಳಿತಿನ ಕಡೆಗೆ ಧಾವಿಸೋಣ. ಅಲ್ಲಾಹು ಅನುಗ್ರಹಿಸಲಿ.- ಆಮೀನ್
ಸರ್ವರಿಗೂ ಕೆ.ಸಿ,ಎಫ್ ಫೌಂಡೇಶನ್ ಡೇ ಶುಭಾಶಯಗಳು.
ಡಿ.ಪಿ ಯೂಸುಫ್ ಸಖಾಫಿ ಬೈತಾರ್.
ಅಧ್ಯಕ್ಷರು
KCF International councul
@ Mangaluru
15/02/2023







