janadhvani

Kannada Online News Paper

✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ

2013 ಪೆಬ್ರವರಿ 15 ರಂದು ಶೈಖುನಾ ತಾಜುಲ್ ಫುಕಹಾಅ್ ಬೇಕಲ ಉಸ್ತಾದ್ ( ನ.ಮ )ರವರ ಮೂಲಕ ದುಬೈ ಯಲ್ಲಿ KCF ಜನ್ಮ ತಾಳಿತು.‌ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಇಂದು ಹತ್ತರ ಸಂಭ್ರಮಚಾರಣೆಯಲ್ಲಿದೆ.KCF ನ ಹತ್ತರೊಳಗೆ ಹುಡುಕ‌ ಹೊರಟರೆ ಸಾಧನೆಯ ಶಿಖರವೇ ಕಾಣಬಹುದು. ಕರ್ನಾಟಕ ಯಾತ್ರೆಯಿಂದ ಹಿಡಿದು ಉತ್ತರ ಕರ್ನಾಟಕ ಧಾರ್ಮಿಕ ಲೌಕಿಕ ಶಿಕ್ಷಣ ಕೇಂದ್ರದ ಹಾದಿಯಾಗಿ ಕರ್ನಾಟಕ ಕೇರಳದ ಬಹುತೇಕ ದೀನಿ ಸಂಸ್ಥೆ ಗಳ ಬೆನ್ನೆಲುಬಾಗಿ ನೆರಳು ನೀಡುತ್ತಿರುವುದು KCF ಆಗಿದೆ. ಕುಟುಂಬದ ಜವಾಬ್ದಾರಿ ಹೊತ್ತು ವಿದೇಶಕ್ಕೆ ದುಡಿಯಲು ಹೋದ ಕರುನಾಡ ಸಹೋದರರು ತಮ್ಮ ದುಡಿಮೆಯ ಒಂದಂಶವನ್ನು KCF ಗೆ ನೀಡಿ ಆ ಮೂಲಕ ದೊಡ್ಡ ವೊಂದು ಶಿಕ್ಷಣ ಕ್ರಾಂತಿಯನ್ನು ಕರ್ನಾಟಕದಲ್ಲಿ ನಿರ್ಮಿಸಿದ್ದಾರೆ.

SSF ಉತ್ತರ ಕರ್ನಾಟಕದಲ್ಲಿ ಇಹ್ಸಾನ್ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ್ದರೆ ಅದರ ಬೆನ್ನೆಲು ಬಾಗಿ ದುಡಿದವರು KCF ನ ಕಾರ್ಯಕರ್ತರು. ಬಡವರಿಗೆ ಮನೆ, ದೀನಿ ಸಂಸ್ಥೆಗಳಿಗೆ ದೇಣಿಗೆ, ನಿರ್ಗತಿಕ ಯುವತಿಯರ ವಿವಾಹ ಸಹಿತ ನೂರಾರು ಕುಟುಂಬಗಳ ಕಣ್ಣೀರೊರೆಸಲು KCF ಗೆ ಸಾಧ್ಯವಾಗಿದೆ. ವಿದೇಶಿ ಜೈಲಿನಲ್ಲಿ ನಿರಪರಾಧಿಯಾಗಿ ಬಂಧಿಸಲ್ಪಟ್ಟವರಿಗೆ, ದುಡಿಯಲು ಹೋಗಿ ವಂಚನೆಗೊಳಗಾದವರಿಗೆ ಜಾತಿ,ಮತ ನೋಡದೆ KCF ಅಭಯಾಸ್ತ ನೀಡಿದೆ. ಅದರ ಜೊತೆಗೆ ಸುನ್ನತ್ ಜಮಾಅತ್ ಶಕ್ತಿ ಗೊಳ್ಳಲು ಕಾರಣವೂ ಆಗಿದೆ.

ಸಾಧಾರಣ ಗಲ್ಫ್‌ಗೆ ಹೋಗಿ ಬಂದವರಿಗೆ ಬಿದ್‌ಅತ್ ನ ಸೊಂಕು ಮೆತ್ತಿಕೊಳ್ಳುವ ಕಾಲವೊಂದಿತ್ತು.KCF ಮೂಲಕ ಅದು ನಿವಾರಣೆ ಯಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಅಹ್‌ಲುಸುನ್ನ:ದ ಪತಾಕೆಯ ಮೂಲಕ ಯುವಕರನ್ನು ಒಗ್ಗೂಡಿಸಿ ಅವರಿಗೆ ಬಿದ್‌ಅತ್ ಸೋಂಕು ತಗುಲದಂತೆ ಭದ್ರತೆ ನೀಡಿದೆ. ಇಂದು ವಿದೇಶದಿಂದ ಊರಿಗೆ ಬರುವವರು “ನಾನು‌ KCF ನ ಸದಸ್ಯ” ಎಂದು ಅಭಿಮಾನ ದಿಂದ ಹೇಳುತ್ತಾರೆ. ಹಜ್ ಸಮಯದಲ್ಲಿ ಸ್ವಯಂ ಸೇವಕರಾಗಿ ಸೌದಿ ಅರೇಬಿಯಾದ ಸರ್ಕಾರದಿಂದ ಪ್ರಶಂಸೆಯನ್ನೂ KCF ಪಡೆದುಕೊಂಡಿದೆ.

ಈ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ KCF ಗೆ ಇಂದು ಹತ್ತರ ಸಂಭ್ರಮ. KCF ನ ಸದಸ್ಯರು ತಮ್ಮ ದುಡಿಮೆಯ ಒಂದು ಭಾಗ ನಮ್ಮೂರ ಏಳಿಗೆಗಾಗಿ ನೀಡುವಾಗ ಅವರಿಗೆ ಪತ್ಯುಪಕಾರವಾಗಿ ನಾವು ನೀಡಬೇಕಾದದ್ದು ದುಆ ಆಗಿದೆ. ಸದಾ ಅವರಿಗಾಗಿ ದುಆ ಮಾಡೋಣ.KCF ಬಲಿಷ್ಠವಾಗಿರಬೇಕು.‌ಹಾಗಾದರೆ ಇಲ್ಲಿ ಮುಸ್ಲಿಂ ಸಮುದಾಯ ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತದೆ.ಅಲ್ಲಾಹನು, KCF ಸದಸ್ಯರಿಗೆ ರಕ್ಷಣೆಯ ನೆರಳನ್ನು ನೀಡಲಿ. ಅವರ ಕೈ ಗಳನ್ನು ಬಲ ಪಡಿಸಲಿ.