janadhvani

Kannada Online News Paper

ದುಲ್ ಪುಖಾರ್ ಸೇವಾ ಟ್ರಸ್ಟ್ 23 ನೇ ಸಮ್ಮೇಳನ ಯಶಸ್ವಿಗೆ ಗಲ್ಫ್ ಕಮಿಟಿ ಕರೆ

ವಿಟ್ಲ: ಕನ್ಯಾನ ಪರಿಸರದಲ್ಲಿ ಬಡ ಮತ್ತು ಅನಾಥರ ಸೇವೆಗೈಯುತ್ತಿರುವ ದುಲ್ ಪುಖಾರ್ ಸೇವಾ ಟ್ರಸ್ಟ್ ಇದರ 23 ನೇ ವಾರ್ಷಿಕ ಸಮ್ಮೇಳನವು 2023 ನೇ ಪೆಬ್ರವರಿ 15 ಬುಧವಾರದಂದು ಕನ್ಯಾನ ರಹ್ಮಾನಿಯಾ ಸಭಾಂಗಣದ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.

ದ.ಕ ಜಿಲ್ಲಾ ಸಂಯುಕ್ತ ಖಾಝಿ ಅಸ್ಸೆಯ್ಯದ್ ಪಝಲ್ ಕೋಯ ಕೂರತ್ ತಂಙಲ್ ನೇತೃತ್ವದಲ್ಲಿ ನಡೆಯುವ ಕಾರ್ಯ ಕ್ರಮವನ್ನು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟಿಸಲಿದ್ದಾರೆ ಸ್ಥಳಿಯ ಮುದರ್ರಿಸ್ ಇಬ್ರಾಹಿಂ ಫೈಝಿ ಅಧ್ಯಕ್ಷತೆ ವಹಿಸಲಿದ್ದು ಖ್ಯಾತ ವಾಗ್ಮಿ ಜಬ್ಬಾರ್ ಸಖಾಫಿ ಪಾತೂರು ಬಾಷಣಗೈಯಲಿದ್ದಾರೆ.

ಹಿರಿಯ ವಿದ್ವಾಂಸರಾದ ವಾಲೆ ಮುಂಡೇವು ಮಹಮೂದ್ ಪೈಝಿ, ಸೆಯ್ಯದ್ ಶಿಹಾಬುದ್ದೀನ್ ತಂಙಲ್ ಮದಕ ಉಪಸ್ಥಿತರಿರಲಿರುವ ಸಮಾರೋಪ ಪ್ರಾರ್ಥನೆಗೆ ಮಅದಿನ್ ಅಕಾಡಮಿ ಮಲಪುರಂ ಕೇರಳ ಇದರ ಚೆಯರ್ಮ್ಯಾನ್ ಅಸ್ಸಯ್ಯದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ತಂಙಲ್ ನೇತೃತ್ವ ನೀಡಲಿದ್ದಾರೆ.

ಕರ್ನಾಟಕ ಸರಕಾರದ ಮಾಜಿ ಸಚಿವ ಶ್ರೀ ಬಿ.ರಮಾನಾಥ ರೈ , ಎಂಎಸ್ ಮಹಮ್ಮದ್ ಗ್ರಾಂ.ಪಂ ಅಧ್ಯಕ್ಷ ಕೆ.ಪಿ ಅಬ್ದುಲ್ ರಹಿಮಾನ್ ಸಹಿತ ಹಲವಾರು ರಾಜಕೀಯ ಸಾಮಾಜಿಕ ದುರೀಣರು ಪಾಲ್ಗೊಳ್ಳಲ್ಲಿದ್ದಾರೆ.

ಈ ಎಲ್ಲಾ ಕಾರ್ಯ ಕ್ರಮಗಳನ್ನು ಎಲ್ಲಾ ಸದಸ್ಯರೂ ಸೇರಿ ಯಶಸ್ವಿಗೊಳಿಸಬೇಕೆಂದು ದುಲ್ ಫುಖಾರ್ ಗಲ್ಫ್ ಕಮಿಟಿ ನೇತಾರರು ಪತ್ರಿಕಾ ಪ್ರಕಟನೆಯಲ್ಲಿ ಕರೆ ನೀಡಿರುತ್ತಾರೆ.