ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಬನ್ನೂರು ಬ್ರಾಂಚ್ ಇದರ ವಾರ್ಷಿಕ ಮಹಾಸಭೆಯು ಫೆಬ್ರವರಿ 05-2023 ಭಾನುವಾರ SYS ಬ್ರಾಂಚ್ ಅಧ್ಯಕ್ಷ ಬಹು| ಇಸ್ಮಾಈಲ್ ಹಾಜಿಯವರ ಅಧ್ಯಕ್ಷತೆಯಲ್ಲಿ ಜರಗಿತು.
ಬಹು|ಇದ್ದುಕುಂಞ ಮದನಿ ದುಆ ನೆರವೇರಿಸಿದರು. ತಾಜುಲ್ ಉಲಮಾ ಸುನ್ನೀ ಚಾರಿಟೇಬಲ್ ಟ್ರಸ್ಟ್ ಬನ್ನೂರು ಇದರ ಪ್ರಧಾನ ಕಾರ್ಯದರ್ಶಿ ಬಹು| ಸೈಫುದ್ದೀನ್ ಸಅದಿ ಪ್ರಾಸ್ತಾವಿಕ ಭಾಷಣ ಮಾಡಿದರು. SYS ಪ್ರಧಾನ ಕಾರ್ಯದರ್ಶಿ K.H ಅಬ್ದುಲ್ಲಾ ಮುಸ್ಲಿಯಾರ್ ಸ್ವಾಗತಿಸಿ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಚುನಾವಣಾ R.O ಆಗಿ ಆಗಮಿಸಿದ ಜಿಲ್ಲಾ ಕಾರ್ಯದರ್ಶಿ ಸ್ವಾಲಿಹ್ ಮುರ, ರಾಜ್ಯ ಇಸಾಬ ಡೈರೆಕ್ಟರ್ ಇಖ್ಬಾಲ್ ಬಪ್ಪಳಿಗೆ KMJ, SYS ಸಮಿತಿಗಳ ಆಯ್ಕೆ ಪ್ರಕ್ರಿಯೆಗೆ ನಾಯಕತ್ವ ನೀಡಿದರು.
ನೂತನವಾಗಿ ಅಸ್ಥಿತ್ವಕ್ಕೆ ಬಂದ KMJ ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಅಕ್ಕರೆ,ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಹಾಜಿ ವಾಡರಗುರಿ ಕೋಶಾಧಿಕಾರಿಯಾಗಿ ಇಸ್ಮಾಈಲ್ ಹಾಜಿ ಅಕ್ಕರೆ ಉಪಾಧ್ಯಕ್ಷರಾಗಿ ಅಬೂಬಕ್ಕರ್ ಹಾಜಿ ಪಾಪ್ಲಿ, ಇಬ್ರಾಹೀಂ ಸುಪಾರಿ, ಜೊತೆ ಕಾರ್ಯದರ್ಶಿಯಾಗಿ K.H ಅಬ್ದುಲ್ಲಾ ಮುಸ್ಲಿಯಾರ್ ,ಪಿ.ಬಿ ಅಬ್ದುರ್ರಹ್ಮಾನ್ ಮದನಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ 11 ಮಂದಿ ಆಯ್ಕೆಯಾದರು.
SYS ಅಧ್ಯಕ್ಷರಾಗಿ ಉಮರ್ ವಾಡರಗುರಿ,ಪ್ರಧಾನ ಕಾರ್ಯದರ್ಶಿಯಾಗಿ ಉಮರುಲ್ ಫಾರೂಖ್ ಬನ್ನೂರು ಗುತ್ತು,ಕೋಶಾಧಿಕಾರಿ ಯಾಗಿ ಶಮೀರ್ ಅಕ್ಕರೆ,ದಅವಾ ಕಾರ್ಯದರ್ಶಿಯಾಗಿ ಸೈಫುಲ್ಲಾ ಸಅದಿ, ಉಪಾಧ್ಯಕ್ಷರಾಗಿ ಶೇಖ್ ಇಸ್’ಹಾಖ್ ಸಾಂತ್ವನ ಕಾರ್ಯದರ್ಶಿಯಾಗಿ ಮುಹಮ್ಮದ್ ಅಲೀ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇತರ 7 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.ಸಭೆಯ ಕೊನೆಯಲ್ಲಿ ಅಬ್ದುಲ್ಲಾ ಮುಸ್ಲಿಯಾರ್ ವಂದಿಸಿದರು.