janadhvani

Kannada Online News Paper

ದುಬೈ:ಇತಿಹಾಸ ಪುಟ ಸೇರಲಿರುವ ಟೈಪಿಂಗ್ ಸೆಂಟರ್ ಗಳು-ನೌಕರರು ಆತಂಕದಲ್ಲಿ

ದುಬೈ: ವಿಸಾ, ವೈದ್ಯಕೀಯ,ಲೇಬರ್,ಇಮಿಗ್ರೇಶನ್ ಮತ್ತು ಆರೋಗ್ಯ ಕಾರ್ಡುಗಳಿಗಾಗಿ ಟೈಪ್ ಮಾಡುವ ಎಲ್ಲಾ ಸೇವೆಗಳು ಇನ್ನು ಮುಂದೆ ಅಮರ್ ಕೇಂದ್ರಗಳ ಮೂಲಕ ಲಭ್ಯವಾಗಲಿದೆ. ಪ್ರತೀ ಅರೇಬಿಕ್, ಇಂಗ್ಲಿಷ್ ಟೈಪಿಂಗ್ ಯಂತ್ರ, ಫೋಟೋ ಕಾಪಿ ಯಂತ್ರ, ಫ್ಯಾಕ್ಸ್ ಮತ್ತು ಇತರ ಪೇಪರ್ಗಳನ್ನು ಮೇಜಿನ ಮೇಲೆ ಇರಿಸುತ್ತಿದ್ದ ಖಾಸಗಿ ಟೈಪಿಂಗ್ ಕೇಂದ್ರಗಳು ಇತಿಹಾಸದ ಪುಟ ಸೇರಲಿದೆ.

ಖಾಸಗಿ ಟೈಪಿಂಗ್ ಕೇಂದ್ರಗಳಲ್ಲಿ  ಹೊರಗಿನ ಬಾಗಿಲಿನಲ್ಲಿ ಲಭ್ಯವಿದೆ ಎಂದು ಬರೆದಿಡಲಾಗುತ್ತಿದ್ದ ಸೇವೆಗಳಿಗಿಂತಲೂ ಅದರ ಸೇವೆಗಳು ಹೆಚ್ಚು ವಿಪುಲವಾಗಿದ್ದವು.

ವಿಸಾ ಜೊತೆಗೆ, ವೈದ್ಯಕೀಯ ಸೇವೆಗಳು, ಸಿ.ವಿ., ಭಾಷಾಂತರ, ದೂರು ತಯಾರಿಕೆ, ಪಾಸ್ಪೋರ್ಟ್ ನವೀಕರಣ ಇಂದು ಕನ್ಮರೆಯಾದ ಫ್ಯಾಕ್ಸ್ ಕಳುಹಿಸುವಿಕೆ ಮುಂತಾದ ಸೇವೆಗಳಿಗೆ ಮಾಲೀಕರು, ಸಾಮಾನ್ಯ ಅರಬ್ಬರು ಮತ್ತು ಅರಬಿಯೇತರರು ಈ ಟೈಪಿಂಗ್ ಕೇಂದ್ರಗಳನ್ನು ಅವಲಂಬಿಸಿದ್ದರು.ಯುಎಇಯ ಬೆಳವಣಿಗೆಗೆ ನಾಂದಿ ಹಾಡಿದ ಟೈಪಿಂಗ್ ಸೆಂಟರ್‌ಗಳು ಜನ ಸಾಮಾನ್ಯರ ಆಶಾ ಕೇಂದ್ರಗಳಾಗಿದ್ದವು.

ಪರಿಷ್ಕೃತ ಕಾನೂನುಗಳು ಮತ್ತು ವೀಸಾ ಶುಲ್ಕವನ್ನು ಪಾವತಿಸುವುದು ಇಂತಹ ಕಾರ್ಯಗಳಿಗೆ ಜನಸಾಮಾನ್ಯರು ಈ ಟೈಪಿಂಗ್ ಕೇಂದ್ರಗಳನ್ನು ಇತ್ತೀಚಿನ ವರೆಗೆ ಅವಲಂಬಿಸುತ್ತಿದ್ದರು.ಟೈಪಿಂಗ್ ಕೇಂದ್ರಗಳು ಮತ್ತು ಇಲ್ಲಿನ ನೌಕರರು ಮತ್ತು ಮಾಲೀಕರಲ್ಲಿ ಹೆಚ್ಚಿನವರು ಕೇರಳೀಯರಾಗಿದ್ದರು ಎನ್ನುವ ವಿಶೇಷತೆ ಕೂಡ ಇವೆ.ಸಂದರ್ಶನ ವಿಸಾದಲ್ಲಿ ಬರುತ್ತಿದ್ದವರಿಗೆ ಟೈಪಿಂಗ್ ಕೇಂದ್ರಗಳು ತುಂಬಾ ಸಹಾಯಕವಾಗಿದ್ದವು.ಅರ್ಹ ಶಿಕ್ಷಣವನ್ನು ಪೂರ್ಣಗೊಳಿಸದ ಮಧ್ಯಮ ವರ್ಗದ ವಿದ್ಯಾವಂತರಿಗೆ ಇಂತಹ ಕೇಂದ್ರಗಳು ಪರಿಶೀಲನಾ ಕೇಂದ್ರಗಳಾಗಿದ್ದವು.

ಟೈಪಿಂಗ್ ಕೇಂದ್ರಗಳಲ್ಲಿ ಕೆಲಸ ಮಾಡಿ ಒಂದು ಅಥವಾ ಎರಡು ವರ್ಷಗಳಲ್ಲಿ ತರಬೇತಿಯನ್ನು ಪೂರ್ಣಗೊಳಿಸಿ ದೊಡ್ಡ ಕಂಪೆನಿಗಳಲ್ಲಿ ಕೆಲಸ ಗಳಿಸಿದವರು ಎಷ್ಟೋ ಇದ್ದಾರೆ.ದುಬೈನ ಆಡಳಿತ ವಿಭಾಗ, ಖಾಸಗಿ ಸಂಸ್ಥೆಗಳು ಮತ್ತು ಮಾನವ ಸಂಪನ್ಮೂಲ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರ ಪೈಕಿ ಹೆಚ್ಚಿನವರು ಇಂತಹ ಟೈಪಿಂಗ್ ಕೇಂದ್ರಗಳಲ್ಲಿ ತಮ್ಮ ಆರಂಭಿಕ ತರಬೇತಿಯನ್ನು ಪೂರ್ಣಗೊಳಿಸಿದವರಾಗಿದ್ದಾರೆ.

ಅರಬಿಕ್, ಇಂಗ್ಲಿಷ್, ಉರ್ದು ಮತ್ತು ಹಿಂದಿ ಭಾಷೆಗಳನ್ನು ಕಲಿಯಲು ಅತ್ಯುತ್ತಮ ವೇದಿಕೆಯಾಗಿದ್ದವು ಈ ಟೈಪಿಂಗ್ ಕೇಂದ್ರಗಳು.ಟೈಪಿಂಗ್ ಕೇಂದ್ರಗಳ ಮೂಲಕ ವಿವಿಧ ಜನರೊಂದಿಗೆ ಸಂಪರ್ಕ ಸಾಧಿಸಬಹುದಾಗಿತ್ತು.

1999 ರಲ್ಲಿ ಕೈಬರಹದ ಲೇಬರ್ ಕಾರ್ಡ್ ಗಳಿಗೆ ಬದಲಾಗಿ ಕಂಪ್ಯೂಟರ್ ನಲ್ಲಿ ಮುದ್ರಿತವಾದ ಪ್ಲಾಸ್ಟಿಕ್ ಕಾರ್ಡುಗಳನ್ನು ಮೊದಲ ಬಾರಿಗೆ ಬಿಡುಗಡೆ ಮಾಡಲಾಯಿತು.ಇದು ಟೈಪಿಂಗ್ ಕೇಂದ್ರಗಳ ಕಂಪ್ಯೂಟರೀಕರಣದ ಪ್ರಾರಂಭವಾಗಿತ್ತು.ನಂತರ, 2004 ರಲ್ಲಿ ಕೈಬರಹದ ವಿಸಾವನ್ನು ಇ-ಫೋರಮ್ ವ್ಯವಸ್ಥೆಗೆ ಬದಲಾಯಿಸಲಾಯಿತು.

ಉದ್ಯೋಗ ಸಚಿವಾಲಯದ ಸೇವೆಗಳನ್ನು ಪರಿಷ್ಕರಣೆ ಗೊಳಿಸುವುದು ಮತ್ತು ಅದನ್ನು ವಿಪುಲಗೊಳಿಸುವ ಸಲುವಾಗಿ ತಹ್ಸೀಲ್ ವ್ಯವಸ್ಥೆಯು 2009 ರಲ್ಲಿ ಜಾರಿಗೆ ಬಂದಾಗ ಪ್ರಸ್ತುತ ಟೈಪಿಂಗ್ ಕೇಂದ್ರಗಳ ಕಾರ್ಯಾಚರೆಣೆಯು ಊರ್ಜಿತಗೊಂಡವು

2011 ರಲ್ಲಿ, ತಾಶೀಲ್ ಸೆಂಟರ್‌ಗಳನ್ನು ಒಗ್ಗೂಡಿಸುವ ಮತ್ತು ಸ್ವದೇಶೀಕರಣದ ಭಾಗವಾಗಿ ತಹ್ಸೀಲ್ ಸೆಂಟರ್ಗಳನ್ನು ಸ್ಥಾಪಿಸಲಾಯಿತು.ಈ ಹಿಂದೆ ಟೈಪಿಂಗ್ ಕೇಂದ್ರಗಳಲ್ಲಿ ಮಾಡಲಾಗುತ್ತಿದ್ದ ಕಾರ್ಮಿಕ ಸಚಿವಾಲಯಕ್ಕೆ ಸಂಬಂಧಿಸಿದ ಸೇವೆಗಳನ್ನು ತಹ್ಸೀಲ್ ಕೇಂದ್ರಗಳಿಗೆ ವರ್ಗಾಯಿಸಲಾಯುತು.ಈ ಮಧ್ಯೆ, ಇಂಡಿಯನ್ ಪಾಸ್ಪೋರ್ಟ್ ಮತ್ತು ಕಾನ್ಸುಲರ್ ಸೇವೆಗಳನ್ನು ಟೈಪಿಂಗ್ ಸೆಂಟರ್‌ನಿಂದ ಖಾಸಗಿ ಕಂಪನಿಗೆ ಹಸ್ತಾಂತರಿಸಲಾಯಿತು.

ನಂತರ, ವಲಸಿಗರಿಗೆ ಮತ್ತು ವಿದೇಶಿಯರಿಗೆ ಎಮಿರೇಟ್ಸ್ ID ಯನ್ನು ಕಡ್ಡಾಯಗೊಳಿಸಿದಾಗ ಟೈಪಿಂಗ್ ಕೇಂದ್ರಗಳು ಮತ್ತೆ ಪ್ರಚೋದನೆಗೊಂಡವು.ವಲಸೆ ವೀಸಾ ಪ್ರಕ್ರಿಯೆಗಳು ಆನ್ ಲೈನ್ ಆಗಿ ಬಂದವು ಮತ್ತು ಟೈಪಿಂಗ್ ಕೇಂದ್ರಗಳು ಹೆಚ್ಚು ಜನಪ್ರಿಯವಾಯಿತು.

2015 ರಲ್ಲಿ ಎಮಿರೇಟ್ಸ್ ಐಡೆಂಟಿಟಿ ಅಥಾರಿಟಿ ಐಡಿ ಸೇವೆಗಳನ್ನು ಪಡೆಯಲು ಹೊಸ ಮಾನದಂಡಗಳನ್ನು ಪಾಲಿಸಲು ಸಾಧ್ಯವಾಗದ ಸಣ್ಣ ಟೈಪ್ ಕೇಂದ್ರಗಳು ಮುಂದೆ ಆ ಮಾನದಂಡಗಳನ್ನು ಪ್ರಕಾರ ಐಡಿ ಕಚೇರಿಯ ಚಟುವಟಿಕೆಯೊಂದಿಗೆ ಸಕ್ರಿಯವಾಗಿದೆ.

ಅಕ್ಟೋಬರ್ 2017 ರಲ್ಲಿ ವೈದ್ಯಕೀಯ ಸೇವೆಗಳನ್ನು ಸಂಪೂರ್ಣವಾಗಿ ಟೈಪಿಂಗ್ ಕೇಂದ್ರಗಳಿಂದ ತೆಗೆದುಹಾಕಲ್ಪಟ್ಟಿತು.ಭಾರತೀಯರು ಸೇರಿದಂತೆ ಟೈಪಿಂಗ್ ಕೇಂದ್ರದಲ್ಲಿ ಕೆಲಸ ಮಾಡುವವರು ಇದನ್ನು ಜಯಿಸುವುದು ಸಾಧ್ಯವಾಗಲಿಲ್ಲ.

ಕೃತಕ ವಿಸಾ ಮತ್ತು ವಿಸಾ ಪಡೆಯಲು ಕೃತಕ ದಾಖಲೆಗಳನ್ನು ಉಂಟುಮಾಡುವುದನ್ನು ತಡೆಗಟ್ಟುವ ಸಲುವಾಗಿ 2015ರಲ್ಲಿ ಜಾರಿಗೆ ತಂದ ಇ-ವಿಷನ್ ಸೇವೆಯು ಪ್ರಾರಂಭಗೊಂಡಾಗ ಟೈಪಿಂಗ್ ಸೆಂಟರ್ಗಳಿಗೆ ಹೊಸ ಹುರುಪು ಬಂದಿದ್ದವು.ಆದರೆ ಬಹಳ ನಿರೀಕ್ಷೆಯಿದ್ದ ಇ- ವಿಷನ್ ಗೆ ಬಹಳ ಆಯಸ್ಸು ಇರಲಿಲ್ಲ.2017 ರ ಅಂತ್ಯದ ವೇಳೆಗೆ, ಇ- ವಿಷನ್’ ಸಂಪೂರ್ಣವಾಗಿ ನಿಂತು ಅಮರ್ ಸೇವೆಯನ್ನು ಪ್ರಾರಂಭಿಸಲಾಯಿತು.

2018 ರಲ್ಲಿ ಅಮರ್ ಸೇವೆಯ ಲಭ್ಯತೆಗೆ ಹೆಚ್ಚಿನ ಮಾನದಂಡಗಳನ್ನು ಇಮಿಗ್ರೇಶನ್ ಇಲಾಖೆಯ ಮುಂದಿಟ್ಟಿತು.ಅದರ ಪ್ರಕಾರ ಅಮರ್ ಎಂಬ ಸೇವಾ ಕೇಂದ್ರಗಳ ಮೂಲಕ ಮಾತ್ರ ವೀಸಾ ಅರ್ಜಿಗಳನ್ನು ಮತ್ತು ಕಾರ್ಯವಿಧಾನಗಳನ್ನು ಪೂರ್ಣಗೊಳಿಸಬಹುದು.

4,000 ಚದರ ಅಡಿ ವಿಸ್ತೀರ್ಣದ ಕೇಂದ್ರ, ಆರಂಭಿಕ ಹಂತದಲ್ಲಿ ಸ್ವದೇಶಿ ಸಿಬ್ಬಂದಿಗೆ 20 ಶೇ ಮೀಸಲಾತಿ ಅನಿವಾರ್ಯ.ಐದು ವರ್ಷಗಳಲ್ಲಿ ಸಂಪೂರ್ಣವಾಗಿ ಸ್ವದೇಶೀ ಕಾರ್ಮಿಕರ ನೇಮಕ ಮುಂತಾದವು ಅಮರ್ ಕೇಂದ್ರ ಅನುಮತಿಸಲು ವಸತಿ ಇಲಾಖೆಯು ಮುಂದಿಟ್ಟ ಮುಖ್ಯ ನಿರ್ದೇಶನಗಳಲ್ಲಿ ಒಂದಾಗಿದೆ.

ಒಟ್ಟಿನಲ್ಲಿ ವಿಸಾ ಮತ್ತು ಕಾರ್ಮಿಕ ಕಾರ್ಡ್, ಎಮಿರೇಟ್ಸ್ ಐಡಿ, ವೈದ್ಯಕೀಯ ಆರೋಗ್ಯ ಕಾರ್ಡ್ ಇತ್ಯಾದಿಗಳಿಂದ ವಂಚಿತಗೊಂಡ ಟೈಪಿಂಗ್ ಕೇಂದ್ರಗಳು ಇತಿಹಾಸದ ಪುಟ ಸೇರುವ ಲಕ್ಷಣ ಗೋಚರಿಸುತ್ತಿದೆ. ಭಾರತೀಯರ ಸಮೇತ ಆ ವಲಯದಲ್ಲಿ ಕಾರ್ಯಾಚರಿಸುತ್ತಿದ್ದ
ಸಾವಿರಾರು ನೌಕರರು ಮತ್ತು ಮಾಲೀಕರು ಬೇರೆ ವಿಧಾನಗಳನ್ನು ಹುಡುಕುವುದಲ್ಲಿ ನಿರತರಾಗಿದ್ದಾರೆ.

error: Content is protected !! Not allowed copy content from janadhvani.com