ರಿಯಾದ್: ಉಮ್ರಾ ಯಾತ್ರಾರ್ಥಿಗಳು ನುಸುಕ್ ‘nusuk’ ಆ್ಯಪ್ ಬಳಸುವಂತೆ ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ (Ministry of Hajj and Umrah) ಹೇಳಿದೆ. ಉಮ್ರಾ ಪರವಾನಿಗೆಗಳನ್ನು ನೀಡಲು ಬಳಸುತ್ತಿದ್ದ ಇಅ್ ತಮರ್ನಾ ಆ್ಯಪ್ ಗೆ ಬದಲಾಗಿ ನುಸುಕ್ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿದೆ.
ಯಾವುದೇ ದೇಶದಿಂದ ನುಸುಕ್ ಅಪ್ಲಿಕೇಶನ್ ಮೂಲಕ ಉಮ್ರಾ ಪ್ಯಾಕೇಜ್‌ಗಳನ್ನು ಮತ್ತು ಸಂಪೂರ್ಣ ವೀಸಾ ಕಾರ್ಯವಿಧಾನಗಳನ್ನು ಪಡೆಯಲು ಸಾಧ್ಯವಿದೆ ಎಂದು ಸಚಿವಾಲಯ ಹೇಳಿದೆ.
ಉಮ್ರಾ ಯಾತ್ರಿಕರು ಮತ್ತು ಸಂದರ್ಶಕರಿಗೆ ಪರವಾನಗಿ ನೀಡಲು ಬಳಸುತ್ತಿದ್ದ ಇಅ್ತಮರ್ನಾ ಆ್ಯಪ್ ಅನ್ನು ಮಾರ್ಪಡಿಸಿ ನುಸುಕ್ ಎಂಬ ಹೊಸ ಅಪ್ಲಿಕೇಶನ್ ನ್ನು ಸಿದ್ಧಪಡಿಸಲಾಗಿದೆ. ಇನ್ನು ಮುಂದೆ ಉಮ್ರಾ ಪರವಾನಿಗೆಗಳನ್ನು ಪಡೆಯಲು ನುಸುಕ್ ಆ್ಯಪ್ ಬಳಸಲಾಗುವುದು ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಪ್ರಕಟಿಸಿದೆ.
ದೇಶೀಯ ಯಾತ್ರಿಕರು ಮತ್ತು ವಿದೇಶಗಳಿಂದ ಬರುವ ಯಾತ್ರಿಕರು ನುಸುಕ್ ಅಪ್ಲಿಕೇಶನ್ ಮೂಲಕ ಪರವಾನಗಿ ಸೇರಿದಂತೆ ಸೇವೆಗಳನ್ನು ಪಡೆಯಬೇಕೆಂದು ಸಚಿವಾಲಯ ಹೇಳಿದೆ.
ಈಗಾಗಲೇ ಇಅ್ತಮರ್ನಾ ಆ್ಯಪ್ ನ್ನು ಬಳಸುತ್ತಿರುವವರು ಅದರ ಹೊಸ ಆವೃತ್ತಿಗೆ ಅಪ್ಡೇಟ್ ಮಾಡಿದರೆ, ನುಸುಕ್ ಆ್ಯಪ್ ಲಭ್ಯವಾಗಲಿದೆ.







