janadhvani

Kannada Online News Paper

ಯಾರಿಗೂ ಬೇಡವಾದ ಏರ್ ಇಂಡಿಯಾ- ಖರೀದಿಯಿಂದ ಹಿಂದಕ್ಕೆ ಸರಿದ ಕಂಪನಿಗಳು

ಮುಂಬಯಿ: ಏರ್ ಇಂಡಿಯಾ ಮಾರಾಟಕ್ಕೆ ಕೇಂದ್ರ ಸರಕಾರವು ಒಳವು ಪ್ರಕಟಿಸಿ ಎರಡು ವಾರಗಳ ನಂತರ ದೇಶದ ಎಲ್ಲಾ ಪ್ರಮುಖ ಕಂಪನಿಗಳು ಹಿಂದಕ್ಕೆ ಸರಿದಿದೆ. ಕೇಂದ್ರ ಸರ್ಕಾರದ ಷರತ್ತುಗಳೊಂದಿಗಿನ ಭಿನ್ನಾಭಿಪ್ರಾಯವಾಗಿದೆ ಕಂಪನಿಗಳು ಹಿಂದೆ ಸರಿಯಲು ಕಾರಣ.

ಈ ಹಿಂದೆ ಏರ್ ಇಂಡಿಯಾವನ್ನು ಖರೀದಿಸಲು ಆಸಕ್ತಿ ಹೊಂದಿದ್ದ, ಇಂಡಿಗೊ, ಜೆಟ್ ಏರ್ವೇಸ್ ಮತ್ತು ಟಾಟಾ ಗ್ರೂಪ್ ಗಳು ಪ್ರಾರಂಭದಲ್ಲಿ ಹಿಂದಕ್ಕೆ ಸರಿಯಿತು.

ಗಲ್ಫ್ ರಾಜ್ಯಗಳ ಪ್ರಮುಖ ಕಂಪೆನಿಗಳಾದ ಎಮಿರೇಟ್ಸ್ ಮತ್ತು ಖತಾರ್ ಏರ್ಲೈನ್ಸ್ ಕೂಡಾ  ಹಿಂದಕ್ಕೆ ಸರಿದಿದೆ ಎಂದು ವರದಿಯಾಗಿದೆ.ಸಧ್ಯ ಯಾವುದೇ ಏರ್ಲೈನ್ ಕಂಪೆನಿಯನ್ನು ಖರೀದಿಸುವ ತೀರ್ಮಾನವಿಲ್ಲ ಎಂದು ಎಮಿರೇಟ್ಸ್ ಹೇಳಿಕೊಂಡಿದೆ.
ಕತಾರ್ ಏರ್ವೇಸ್ ಕೂಡ ಏರ್ ಇಂಡಿಯಾವನ್ನು ಖರೀದಿಸುವ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ತಿಳಿಸಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಪೈಸ್ ಜೆಟ್‌ಗೂ ಯಾವುದೇ ಉದ್ದೇಶವಿಲ್ಲ ಎನ್ನಲಾಗಿದೆ.ಸ್ಪೈಸ್ ಜೆಟ್ ‌ನ ಅಧ್ಯಕ್ಷ ಅಜಯ್ ಸಿಂಗ್ ತನ್ನ ಕಂಪೆನಿ ತೀರಾ ಚಿಕ್ಕದಾಗಿದ್ದು ಏರ್ ಇಂಡಿಯಾವನ್ನು ಖರೀದಿಸುವಷ್ಟು ಸಾಮರ್ಥ್ಯವಿಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರೀಕರಿಸುವ ಮುನ್ನ ಏರ್ ಇಂಡಿಯಾದ ಮಾಲೀಕತ್ವವಿದ್ದ ವಿಮಾನಯಾನ ಸಂಸ್ಥೆಯಾದ ಟಾಟಾ ಗ್ರೂಪ್ ಏರ್ ಇಂಡಿಯಾವನ್ನು ವಹಿಸಲಿದೆ ಎಂದು ನಂಬಲಾಗಿತ್ತು. ಆದರೆ ಸರಕಾರ ಮುಂದಿಟ್ಟಿರುವ ನಿಯಮಗಳೊಂದಿಗೆ ಅದು ಸಾಧ್ಯವಿಲ್ಲ ಎಂಬುದು ಟಾಟಾ ಗ್ರೂಪಿನ ನಿಲುವಾಗಿದೆ. ಏರ್ ಇಂಡಿಯಾದ ಅಂತಾರಾಷ್ಟ್ರೀಯ ಸೇವೆಗಳಲ್ಲಿ ಇಂಡಿಗೊಗೆ ಆಸಕ್ತಿಗಳಿವೆ.

ಜೆಟ್ ಏರ್ವೇಸ್ ಕೂಡ ಷೇರು ಮಾರಾಟದಲ್ಲಿ ಭಾಗವಹಿಸುವುದಿಲ್ಲ.ನಾವು ಸರಕಾರದ ಮುಂದಿಟ್ಟಿರುವ ಷರತ್ತುಗಳು ಮತ್ತು ಕಂಪನಿಯ ಹಿತಾಸಕ್ತಿಗಳನ್ನು ಪರಿಗಣಿಸಿದಾಗ ಭಾಗವಹಿಸುವುದು ಅಸಾಧ್ಯ ಎಂದು ಜೆಟ್ ಏರ್ವೇಸ್ ನ ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತ್ ಅಗರ್ವಾಲ್ ಹೇಳಿದ್ದಾರೆ.

ಏರ್ ಇಂಡಿಯಾದ 76 ಶೇಕಡಾ ಶೇರುಗಳು ಮತ್ತು ಏರ್ ಇಂಡಿಯಾದ 100 ಶೇಕಡಾ ಶೇರುಗಳು ಹಾಗೂ ಸಾಟ್ಸ್ ಏರ್ ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ 50 ಶೇ. ಪಾಲನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದೆ.

ಇವುಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಮಾರಲಾಗುವುದಿಲ್ಲ ಎಂಬುದು ಸರಕಾರದ ನಿಲುವಾಗಿದೆ. ಇದರಿಂದಾಗಿ ಪ್ರಮುಖ ಕಂಪನಿಗಳು ಹಿಂದೆ ಸರಿದಿದೆ.ಅದೇ ವೇಳೆ ಬ್ರಿಟಿಷ್ ಏರ್ವೇಸ್, ಲುಫ್ಥಾನ್ಸ, ಸಿಂಗಾಪುರ್ ಏರ್ಲೈನ್ಸ್ ಮತ್ತು ಗಲ್ಫ್ ಏರ್ಲೈನ್ ​​ಸೇರಿದಂತೆ ನಾಲ್ಕು ವಿದೇಶಿ ಕಂಪನಿಗಳು ಖರೀದಿಯಲ್ಲಿ ಆಸಕ್ತಿ ತೋರಿಸುತ್ತಿವೆ ಎನ್ನುವ ಬಗ್ಗೆ ಮಾಹಿತಿಯಿದೆ.

error: Content is protected !! Not allowed copy content from janadhvani.com