ರಿಯಾದ್: ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ಇತರ ಗಲ್ಫ್ ದೇಶಗಳಲ್ಲಿ ರೆಸಿಡೆನ್ಸಿ ದಾಖಲೆಗಳನ್ನು ಹೊಂದಿರುವವರಿಗೆ ಆನ್ಲೈನ್ ವೀಸಾಗಳನ್ನು ನೀಡಲಾಗುವುದು ಎಂದು ಸೌದಿ ಪ್ರವಾಸೋದ್ಯಮ ಸಚಿವಾಲಯ ಪ್ರಕಟಿಸಿದೆ. ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಕೆಲವೇ ಗಂಟೆಗಳಲ್ಲಿ ವೀಸಾ ಲಭಿಸಿದೆ.
ಫೋಟೋ ಲಗತ್ತಿಸಲಾದ ಆನ್ಲೈನ್ ವೀಸಾವನ್ನು ಇ-ಮೇಲ್ ಮೂಲಕ ಕಳಿಸಲಾಗುತ್ತದೆ. ಸೌದಿ ಡಿಜಿಟಲ್ ರಾಯಭಾರ ಕಚೇರಿಯು ಸೌದಿ ಅರೇಬಿಯಾದಲ್ಲಿ 90 ದಿನಗಳವರೆಗೆ ಇರಲು ಅನುಮತಿಯೊಂದಿಗೆ ಬಹು ಪ್ರವೇಶ (Multi Entry) ವೀಸಾಗಳನ್ನು ನೀಡುತ್ತಿದೆ. ಉದ್ಯೋಗದಾತರ ಅನುಮತಿ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್ ಅಗತ್ಯವಿಲ್ಲದ ಕಾರಣ ವೀಸಾ ಪ್ರಕ್ರಿಯೆಗಳು ತ್ವರಿತವಾಗಿ ನಡೆಯುತ್ತಿದೆ ಎಂದು ಅರ್ಜಿದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೌದಿ ವಿಸಿಟ್ ವೀಸಾ ಕಾನೂನಿನ ಹೊಸ ಬದಲಾವಣೆಯು ದೇಶದ ವಾಣಿಜ್ಯ ವಲಯದಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಿದೆ. ಇತರ ಗಲ್ಫ್ ದೇಶಗಳಿಂದ ಹೆಚ್ಚಿನ ಸಂಖ್ಯೆಯ ಜನರು ಸೌದಿ ಅರೇಬಿಯಾಕ್ಕೆ ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ಮತ್ತು ಕುಟುಂಬದೊಂದಿಗೆಯೂ, ಅಲ್ಲದೆಯೂ ಉಮ್ರಾ ನಿರ್ವಹಿಸಲು ಆಗಮಿಸಲಿದ್ದಾರೆ.
















ಇನ್ನಷ್ಟು ಸುದ್ದಿಗಳು
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ