ಪ್ರಧಾನಿ ಮೋದಿಯವರು ನಾಳೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುವ ಪ್ರಮುಖ ಉದ್ದೇಶ ಜಿಲ್ಲೆಯ ನಿರೀಕ್ಷಿತ ರಾಜಕೀಯ ಬೆಳವಣಿಗೆ ಹೊರತು, ಯಾವುದೇ ಅಭಿವೃದ್ಧಿ ಉದ್ದೇಶ ಅಲ್ಲ ಎಂದು ಮುಸ್ಲಿಮ್ ಒಕ್ಕೂಟ ಇದರ ಅಧ್ಯಕ್ಷರಾದ, ಮಾಜಿ ಮೇಯರ್ ಕೆ.ಅಶ್ರಫ್, ಹೇಳಿದ್ದಾರೆ.
ಜಿಲ್ಲೆಯಲ್ಲಿ ನಿರಂತರ ಮತೀಯ ಉದ್ವಿಗ್ನತೆ ಯಿಂದ ಜರ್ಜರಿತ ಗೊಂಡು ಬೃಹತ್ ಉದ್ದಿಮೆಗಳು ನಿಶ್ಶಬ್ದವಾಗಿ ವಲಸೆ ಆರಂಭಿಸಿದ್ದು, ಆರ್ಥಿಕ ಚಟುವಟಿಕೆ ಇತ್ಯಾದಿ ಕುಸಿತವಾಗಿದೆ. ಆಡಳಿತದಲ್ಲಿರುವ ಬಿ.ಜೆ. ಪಿ ಗೆ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಕರ್ನಾಟಕ ಸರಕಾರ ಈ ಹಿಂದೆ ಶಾಲಾ ವಿಷಯದಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪಠ್ಯವನ್ನು ತೆರವು ಗೊಳಿಸಿದ ಕಾರಣಕ್ಕಾಗಿಯೇ ರಾಜ್ಯದ ಜನರ ವಿರೋಧವನ್ನು ಕಟ್ಟಿ ಕೊಳ್ಳ ಬೇಕಾಯಿತು ಎಂದರು.
ಕಳೆದ ತಿಂಗಳು ಸುಳ್ಯದ ವಿವಿಧ ಹತ್ಯಾ ಪ್ರಕರಣದ ಬೆಳವಣಿಗೆ ಪರಿಣಾಮವಾಗಿ ಜಿಲ್ಲೆಯ ಪರಿಗಣನಾತ್ಮಕ ಸಮುದಾಯ ಮತ್ತು ಪಕ್ಷದ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲುರವರ ವಿರುದ್ಧ ನಿಲ್ಲಬೇಕಾಯಿತು. ಪರಿಸ್ಥಿಯನ್ನು ತೇಪೆ ಹಚ್ಚಲು ಪ್ರಧಾನಿ ನರೇಂದ್ರ ಮೋದಿಯನ್ನು ಜಿಲ್ಲೆಗೆ ಆಮಂತ್ರಿಸಿ ಪಕ್ಷಕ್ಕೆ ಆದ ನಷ್ಟವನ್ನು ಸರಿ ದೂಗಿಸುವ ಪ್ರಯತ್ನದ ಭಾಗವೇ ಮಂಗಳೂರಿಗೆ ಮೋದಿ ಆಗಮನದ ವ್ಯವಸ್ಥೆ.
ಪ್ರಧಾನ ಮಂತ್ರಿ ಮೋದಿಯವರು ಜಿಲ್ಲೆಗೆ ಆಗಮಿಸುವುದರಲ್ಲಿ ಸರ್ವರಿಗೂ ಸಹಮತ ಇದೆ. ಆದರೆ, ಅಂದು ನರೇಂದ್ರ ಮೋದಿಯವರು ಜಿಲ್ಲೆಗೆ ಗುಪ್ತವಾಗಿ ಆಗಮಿಸಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆಸದೇ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಭೇಟಿ ನೀಡಿ ಹೋಗಿದ್ದು ಜನರು ಇನ್ನೂ ಮರೆತಿಲ್ಲ.
ಮೋದಿಯವರು ಈ ಬಾರಿ ಮಂಗಳೂರಿಗೆ ಭೇಟಿ ನೀಡುವ ಈ ಸಂದರ್ಭದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಸ್ಥಾಪಿತ ಕುದ್ರೋಳಿ ಕ್ಷೇತ್ರಕ್ಕೇ ಭೇಟಿ ನೀಡಲಿ.
ರಾಜ್ಯ ಸರಕಾರ ಈ ಹಿಂದೆ ಶ್ರೀ ನಾರಾಯಣ ಗುರುಸ್ವಾಮಿ ಯವರ ಜೀವನ ಚರಿತ್ರೆ ಮತ್ತು ದಾರ್ಶನಿಕತೆ ಪ್ರತಿಪಾದಿಸುವ ಪಠ್ಯವನ್ನು ತೆರವು ಗೊಳಿಸಲು ಪ್ರಯತ್ನಿಸಿದ ಷಡ್ಯಂತ್ರಕ್ಕೆ ಪ್ರಾಯಶ್ಚಿತ ವಾದರೂ ಆಗಲಿ.
ಜಿಲ್ಲೆಯ ಸಂಸದರು, ಉಸ್ತುವಾರಿ ಸಚಿವರು, ನಾಮ ನಿರ್ದೇಶಿತ ಸಂಸದರು, ಶಾಸಕರು, ಪಕ್ಷದ ಮುಖಂಡರು ಸರ್ವರೂ ಪ್ರಧಾನಿಯವರ ಮನವೊಲಿಸಿ ಕುದ್ರೋಳಿ ಕ್ಷೇತ್ರಕ್ಕೆ ಪ್ರಧಾನಿಯವರನ್ನು ಭೇಟಿ ಮಾಡುವ. ಪ್ರಯತ್ನ ಮಾಡಲಿ. ರಾಜ್ಯದ ಜನತೆ ನಿರೀಕ್ಷಿಸುತ್ತಿದ್ದಾರೆ ಎಂದು ಕೆ. ಅಶ್ರಫ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ