ಒಮಾನ್:(ಜನಧ್ವನಿ ವಾರ್ತೆ) ಜಮ್ಮು ಕಾಶ್ಮೀರದ ಕಥುವಾ ಪ್ರದೇಶದಲ್ಲಿ ಮೇಕೆಗಳನ್ನು ಮೇಯಿಸುತ್ತಾ ಆಡುತ್ತಿದ್ದ ಆಸಿಫಾ ಎಂಬ ಎಂಟು ವರ್ಷದ ಪುಟ್ಟ ಬಾಲಕಿಯನ್ನು ನಿರಂತರ ಅತ್ಯಾಚಾರವೆಸಗಿ ನಡೆಸಿದ ಹತ್ಯೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ತೀವ್ರವಾಗಿ ಖಂಡಿಸಿದೆ.
ಈ ಹೀನ ಕೃತ್ಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕೆ.ಸಿ.ಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಸಯ್ಯಿದ್ ಆಬಿದ್ ಅಲ್ ಹೌದ್ರೋಸಿ ತಂಙಳ್ ರವರು ಈ ಮುಗ್ಧ ಮಗುವಿನ ಮೇಲೆ ನಡೆದ ನೀಚ ಕೃತ್ಯವು ಆಸಿಫಾ ಮೇಲೆ ಮಾತ್ರವಲ್ಲ ಮಾನವೀಯತೆಯ ಮೇಲೆ ನಡೆದ ಕೃತ್ಯವಾಗಿದೆ. ಇಂತಹ ಪೈಶಾಚಿಕ ಕೃತ್ಯವನ್ನು ನಡೆಸಿದ ಕಾಮಾಂದ ಎಲ್ಲಾ ಅಪರಾಧಿಗಳನ್ನು ರಕ್ಷಿಸುವ ಬದಲು ಕೃತ್ಯವನ್ನು ಎಸಗಿದ ಪಾಪಿಗಳಿಗೆ ಶಿಕ್ಷೆಯಾಗಲೇ ಬೇಕು. ಉದಾತ್ತವಾದ ಸಂವಿಧಾನದಲ್ಲಿ ನಿರ್ಣಯಿಸಲ್ಪಟ್ಟ ಅರ್ಹ ಶಿಕ್ಷೆಯನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ಭಾರತ ಸರ್ಕಾರವನ್ನು ಕೇಳುತ್ತಾ ಕೆ.ಸಿ.ಎಫ್ ಒಮಾನ್ ರಾಷ್ಟ್ರೀಯ ಸಮಿತಿಯು ಈ ದುಶ್ಕೃತ ಘಟನೆಯನ್ನು ಖಂಡಿಸಿತು.
ಆಸಿಫಾ ಗೆ ನ್ಯಾಯ ಸಿಗಬೇಕೆಂದು ನಮ್ಮೆಲ್ಲರ ಒಕ್ಕೊರಲ ಆಗ್ರಹ. ಅಲ್ಲಾಹನು ಆ ಮಗುವಿನ ತಂದೆ-ತಾಯಿಗೂ, ಕುಟುಂಬ ವರ್ಗದವರಿಗೂ ಆ ದುಖಃವನ್ನು ಸಹಿಸುವಂತಹ ಹೃದಯವನ್ನು ನೀಡಲಿ, ಇನ್ನು ಮುಂದೆ ಇಂತಹ ಯಾವುದೇ ಕೃತ್ಯಗಳು ನಮ್ಮ ಕುಟುಂಬಗಳಿಗೂ ಬಾರದಿರಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಉಮರ್ ಸಖಾಫಿ ಎಡಪ್ಪಾಲ ಕೊಡಗು ಮತ್ತು ಕೆ.ಸಿ.ಎಫ್ ಒಮಾನ್ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಹನೀಫ್ ಸಅದಿ, ಸಂಘಟನಾ ಕಾರ್ಯದರ್ಶಿ ಕಲಂದರ್ ಬಾವ, ಡಿ.ಕೆ.ಎಸ್.ಸಿ. ಅಧ್ಯಕ್ಷ ಝುಬೈರ್ ಸಅದಿ ಪಾಟ್ರಕೋಡಿ, ಕೆ.ಸಿ.ಎಫ್- ಐ.ಎನ್.ಸಿ. ನಾಯಕ ಇಕ್ಬಾಲ್ ಬರ್ಕ ,ಹಾಗೂ ಕೆ ಸಿ ಎಫ್, ಐ.ಸಿ.ಎಫ್. ರಾಷ್ಟ್ರೀಯ ಸಮಿತಿ ಸದಸ್ಯರು ಮತ್ತು ಝೋನ್ ನಾಯಕರುಗಳು ಉಪಸ್ಥಿತರಿದ್ದರು.