ಹೊಸದಿಲ್ಲಿ, ಫೆಬ್ರವರಿ.13: ಕರ್ನಾಟಕದ ಕಾಲೇಜೊಂದರಿಂದ ಹಿಜಾಬ್ ಬಗ್ಗೆ ಆರಂಭವಾದ ವಿವಾದವನ್ನು ತಡೆಯಲು ಆಗುತ್ತಿಲ್ಲ. ಹಿಜಾಬ್ ಗಲಾಟೆ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಈ ಕುರಿತು ಮತ್ತೊಮ್ಮೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ನಲ್ಲಿ ಉವೈಸಿ, “ಇನ್ಶಾ ಅಲ್ಲಾ ಒಂದು ದಿನ ಹಿಜಾಬಿ ಪ್ರಧಾನಿಯಾಗುತ್ತಾರೆ” ಎಂದು ಬರೆದಿದ್ದಾರೆ.
ಟ್ವೀಟ್ ವಿಡಿಯೋದಲ್ಲಿ ಮಾತನಾಡಿರುವ ಉವೈಸಿ, “ನಮ್ಮ ಹೆಣ್ಣುಮಕ್ಕಳು ಹಿಜಾಬ್ ಧರಿಸಲು ಬಯಸಿದರೆ ಅಮ್ಮ-ಅಬ್ಬಾ ಹೇಳುವರು – ಮಗು ಧರಿಸು. ಯಾರು ನಿಮ್ಮನ್ನು ತಡೆಯುತ್ತಾರೆ ಎಂದು ನಾವು ನೋಡುತ್ತೇವೆ. ಹಿಜಾಬ್ ಧರಿಸಿ, ಕಾಲೇಜಿಗೆ ಹೋಗುತ್ತಾರೆ, ಕಲೆಕ್ಟರ್ ಆಗುತ್ತಾರೆ, ಬಿಜಿನೆಸ್ ಮ್ಯಾನ್ ಆಗುತ್ತಾರೆ, ಎಸ್‌ಡಿಎಂ ಕೂಡ ಆಗುತ್ತಾರೆ ಮತ್ತು ಮುಂದೊಂದು ದಿನ ಈ ದೇಶದಲ್ಲಿ ಹೆಣ್ಣು ಮಗು ಹಿಜಾಬ್ ಧರಿಸಿ ಪ್ರಧಾನಿಯಾಗುತ್ತಾರೆ” ಎಂದು ಹೇಳಿದ್ದಾರೆ.
ಈ ಹಿಂದೆ ಅಸದುದ್ದೀನ್ ಉವೈಸಿ ಅವರು ಹಿಜಾಬ್ ವಿವಾದದಲ್ಲಿ ಪುಟ್ಟಸ್ವಾಮಿ ತೀರ್ಪನ್ನು ಉಲ್ಲೇಖಿಸಿದ್ದರು. ಭಾರತದ ಸಂವಿಧಾನ ನಿಖಾಬ್ ಅಥವಾ ಹಿಜಾಬ್ ಧರಿಸುವ ಹಕ್ಕನ್ನು ನೀಡಿದೆ. ಪುಟ್ಟಸ್ವಾಮಿ ಅವರ ತೀರ್ಪು ಈ ಅವಕಾಶ ನೀಡುತ್ತದೆ ಎಂದು ಉವೈಸಿ ಹೇಳಿದ್ದರು. ಇದು ನಮ್ಮ ಗುರುತು. ಆ ಹುಡುಗರ ಗುಂಪಿಗೆ ಉತ್ತರಿಸಿದ ಹುಡುಗಿಗೆ ನಾನು ನಮಸ್ಕರಿಸುತ್ತೇನೆ. ಭಯ ಮತ್ತು ಗಾಬರಿ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು. ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ ಚುನಾವಣಾ ರಾಲಿ ಉದ್ದೇಶಿಸಿ ಮಾತನಾಡಿದ ಉವೈಸಿ, ಯಾವುದೇ ಮುಸ್ಲಿಂ ಮಹಿಳೆ ಯಾವುದೇ ಭಯವಿಲ್ಲದೆ ಹಿಜಾಬ್ ಧರಿಸಬಹುದು ಎಂದು ಹೇಳಿದ್ದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ