“ಧಾರ್ಮಿಕ ಸ್ವಾತಂತ್ರ್ಯವು ಒಬ್ಬರ ಧಾರ್ಮಿಕ ಉಡುಪನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ”
“ಭಾರತದ ಕರ್ನಾಟಕವು ಧಾರ್ಮಿಕ ಉಡುಪುಗಳ ಅನುಮತಿಯನ್ನು ನಿರ್ಧರಿಸುವಂತಿಲ್ಲ.ಶಾಲೆಗಳಲ್ಲಿ ಹಿಜಾಬ್ ನಿಷೇಧ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಹಾಗೂ ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳನ್ನು ಕಡೆಗಣಿಸುತ್ತದೆ” ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಯುಎಸ್ ರಾಯಭಾರಿ (IRE) ರಶಾದ್ ಹುಸೈನ್ ಶುಕ್ರವಾರ ಹೇಳಿದ್ದಾರೆ.
Religious freedom includes the ability to choose one’s religious attire. The Indian state of Karnataka should not determine permissibility of religious clothing. Hijab bans in schools violate religious freedom and stigmatize and marginalize women and girls.
— Amb. at Large for International Religious Freedom (@IRF_Ambassador) February 11, 2022
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಶುಕ್ರವಾರ ಮೆಲ್ಲೋರ್ನ್‌ನಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರನ್ನು ಭೇಟಿಯಾದ ದಿನ ಬೆಳವಣಿಗೆ ನಡೆದಿದೆ. ಉಭಯ ನಾಯಕರು ಆಯಕಟ್ಟಿನ ಹಿಂದೂ ಮಹಾಸಾಗರ ಪ್ರದೇಶದಲ್ಲಿ ದ್ವಿಪಕ್ಷೀಯವಾಗಿ ಮತ್ತು ಕ್ವಾಡ್ ಗುಂಪಿನ ಮೂಲಕ ಸಹಕಾರವನ್ನು ಬಲಪಡಿಸುವ ಪ್ರಯತ್ನಗಳನ್ನು ಪರಿಶೀಲಿಸುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ಮಹತ್ವ ಉಂಟು ಮಾಡಿದೆ.
ಇಸ್ಲಾಮಿಕ್ ಸಹಕಾರ ಸಂಘಟನೆ (OIC) ಗೆ ಅಧ್ಯಕ್ಷ ಬರಾಕ್ ಒಬಾಮಾ ಅವರ US ವಿಶೇಷ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಹುಸೇನ್ ಅವರನ್ನು ಇತ್ತೀಚೆಗೆ ಬಿಡೆನ್ ಆಡಳಿತವು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ US ರಾಯಭಾರಿಯಾಗಿ ನೇಮಿಸಿಕೊಂಡಿತ್ತು. ಇದೀಗ ಅವರ ಹೇಳಿಕೆಯಿಂದ ಹಿಜಾಬ್ ವಿವಾದದಲ್ಲಿ ಅಮೇರಿಕಾವೂ ಮಧ್ಯೆ ಪ್ರವೇಶಿಸಿದಂತಾಗಿದೆ.







