ಅಬುಧಾಬಿ: ‘ಜೆರುಸಲೇಮ್ ಎಂದೆದೂ ಫಲಸ್ತೀನ್ ರಾಜಧಾನಿ’ ಎಂಬ ಘೋಷವಾಕ್ಯದೊಂದಿಗೆ ಈ ತಿಂಗಳ 11,12 ದಿನಾಂಕಗಳಲ್ಲಿ ಜೆರುಸಲೇಮ್ ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಹೊರಟಿರುವ ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರನ್ನು ಯುಎಇ ಫಲಸ್ತೀನ್ ದೂತವಾಸ ಕೇಂದ್ರದಲ್ಲಿ ಬೀಳ್ಕೊಡಲಾಯ್ತು.
ಫಲಸ್ತೀನ್ ಪ್ರಾಧಿಕಾರದ ಅಧೀನದಲ್ಲಿ ನಡೆಯುವ ಸಮ್ಮೇಳನದಲ್ಲಿ,ಫಲಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ರ ಪ್ರತ್ಯೇಕ ಆಮಂತ್ರಣ ಪ್ರಕಾರ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.
ಅಬುಧಾಬಿಯ ಫಲಸ್ತೀನ್ ದೂತವಾಸ ಕೇಂದ್ರದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಯುಎಇ ಫಲಸ್ತೀನ್ ರಾಯಭಾರಿ ಉಸಾಮ್ ಮಸಾಲಿಹ್, ನಿರ್ವಾಹಕ ಲುಅಯ್ಯ್ ಮೂಸಾ, ಇಂಡೋ ಅರಬ್ ಸಾಂಸ್ಕೃತಿಕ ನಿಯೋಗದ ಕಾರ್ಯದರ್ಶಿ ಡಾ.ಅಮೀನ್ ಮುಹಮ್ಮದ್ ಹಸನ್ ಸಖಾಫಿ, ಮರ್ಕಝ್ ಅಬುಧಾಬಿ ಅಧ್ಯಕ್ಷ ಉಸ್ಮಾನ್ ಸಖಾಫಿ ತಿರುವತ್ರ, ಮರ್ಕಝ್ ಮೀಡಿಯಾ ಮೇನೇಜರ್ ಮುನೀರ್ ಪಾಂಡ್ಯಾಲ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.















ಇನ್ನಷ್ಟು ಸುದ್ದಿಗಳು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಯುಎಇ : ನಾಲ್ಕು ಪಾಸ್ಪೋರ್ಟ್ ಸೇವಾ ಕೇಂದ್ರಗಳು ಇಂದಿನಿಂದ ಸ್ಥಗಿತ- ರಾಯಭಾರ ಕಚೇರಿ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ
ಧರ್ಮ ನಿಂದನೆ ದೂರು: ಯುವಕನ ಮರಣದಂಡನೆಯನ್ನು ರದ್ದುಗೊಳಿಸಿದ ಸೌದಿ ಸುಪ್ರೀಂ ಕೋರ್ಟ್
ಸೌದಿ ವಿಮಾನ ಸೇವೆ ಸ್ಥಗಿತ: ವೀಸಾ ಅವಧಿ ಮೀರಿದವರಿಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ- ಭಾರತೀಯ ರಾಯಭಾರ ಕಚೇರಿ
ವಿಮಾನ ನಿಲ್ದಾಣದ ಮೇಲೆ ದಾಳಿ: ಉಮ್ರಾಗೆ ಬಂದಿದ್ದ ಬಾಂಗ್ಲಾದೇಶದ ಶಿಕ್ಷಕನಿಗೆ ದಾರುಣ ಅಂತ್ಯ
ರಿಯಾದ್ ವಿಮಾನ ನಿಲ್ದಾಣ ದಾಳಿ: ಗಾಯಗೊಂಡವರಲ್ಲಿ 11 ಮಂದಿ ಭಾರತೀಯರು- ಭಾರತೀಯ ರಾಯಭಾರ ಕಚೇರಿ