janadhvani

Kannada Online News Paper

ಲಸಿಕೆ ಪಡೆಯದವರಿಗೂ ಸೌದಿಗೆ ಪ್ರವೇಶ- ಹೋಟೆಲ್ ಕ್ವಾರಂಟೈನ್ ಕಡ್ಡಾಯ

ಪ್ರಸ್ತುತ, ಸೌದಿ ಅರೇಬಿಯಾದ ಹೊರಗಿನಿಂದ ಲಸಿಕೆಯನ್ನು ಪಡೆದವರೂ, ಲಸಿಕೆ ಹಾಕಿಸದವರೂ ಸೌದಿ ಅರೇಬಿಯಾಕ್ಕೆ ಬಂದ ನಂತರ ಐದು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ.

ರಿಯಾದ್: ಭಾರತದಿಂದ ಮೂರನೇ ಡೋಸ್ ಲಸಿಕೆ ಪಡೆಯದವರಿಗೂ ಸೌದಿ ಅರೇಬಿಯಾಕ್ಕೆ ಪ್ರವೇಶ ಅನುಮತಿಸಲಾಗಿದೆ. ತವಕ್ಕಲ್ನ ಸ್ಟೇಟಸ್ ಪರಿಗಣಿಸುವುದು ಸೌದಿಯಿಂದ ಲಸಿಕೆ ಪಡೆದವರನ್ನು ಮಾತ್ರವಾಗಿದೆ. ಆದರೆ, ಹೋಟೆಲ್ ಕ್ವಾರಂಟೈನ್ ಕಡ್ಡಾಯವಾಗಿದೆ.

ಈ ಹಿಂದೆ, ಭಾರತದಿಂದ ಸೌದಿ-ಅನುಮೋದಿತ ಲಸಿಕೆಗಳನ್ನು ಪಡೆದುಕೊಂಡು ತವಕ್ಕಲ್‌ನಾದಲ್ಲಿ ಅಪ್ಡೇಟ್ ಮಾಡಿದ್ದಲ್ಲಿ,  ಸೌದಿ ಅರೇಬಿಯಾಕ್ಕೆ ಬಂದ ನಂತರ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಗೆ ವಿನಾಯಿತಿ ನೀಡಲಾಗಿತ್ತು. ಆದರೆ ಆ ನಿಯಮ ಈಗ  ಅಸ್ತಿತ್ವದಲ್ಲಿಲ್ಲ.

ಪ್ರಸ್ತುತ, ಸೌದಿ ಅರೇಬಿಯಾದ ಹೊರಗಿನಿಂದ ಲಸಿಕೆಯನ್ನು ಪಡೆದವರೂ, ಲಸಿಕೆ ಹಾಕಿಸದವರೂ ಸೌದಿ ಅರೇಬಿಯಾಕ್ಕೆ ಬಂದ ನಂತರ ಐದು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಇದಲ್ಲದೆ, ಭಾರತದಲ್ಲಿ ಎರಡು ಡೋಸ್‌ಗಳನ್ನು ಸ್ವೀಕರಿಸಿ ಆರು ತಿಂಗಳು ಪೂರೈಸಿದವರಿಗೆ ಸೌದಿ ಅರೇಬಿಯಾದಿಂದ ಬೂಸ್ಟರ್ ಡೋಸ್ ಲಭಿಸಲಿದೆ. ಆದ್ದರಿಂದ, ದೇಶದಲ್ಲಿ ತೆಗೆದುಕೊಂಡ ಲಸಿಕೆಗಳ ಪ್ರಮಾಣ ಪತ್ರವು ,ಪ್ರಸ್ತುತ ಸೌದಿ ಅರೇಬಿಯಾಕ್ಕೆ ಪ್ರವೇಶಿಸುವ ಮಾನದಂಡವಲ್ಲ. ಸೌದಿ ಅರೇಬಿಯಾದಿಂದ ಲಸಿಕೆ ಪಡೆದು ಮನೆಯಿಂದ ಹಿಂದಿರುಗುವವರು ಮಾತ್ರ ತವಕ್ಕಲ್ ನ  ಮತ್ತು ಸೌದಿ ಲಸಿಕೆ ಪ್ರಮಾಣಪತ್ರಗಳನ್ನು ವಿಮಾನ ನಿಲ್ದಾಣಗಳಲ್ಲಿ ತೋರಿಸಬೇಕಾಗುತ್ತದೆ. 

ಇತರರಿಗೆ ಹೋಟೆಲ್ ಕ್ವಾರಂಟೈನ್ ಬುಕಿಂಗ್ ದಾಖಲೆ ಮಾತ್ರ ಮುಖ್ಯವಾಗಿದೆ. ಊರಿನಲ್ಲಿ ಲಸಿಕೆ ಹಾಕಿಸಿಕೊಳ್ಳದವರಿಗೆ ಸೌದಿ ಅರೇಬಿಯಾದಿಂದ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಭಾಗಶಃ ಲಸಿಕೆ ಪಡೆದವರಿಗೆ ನಂತರದ ಡೋಸ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇಮ್ಯೂನ್ ಅಲ್ಲದ ವ್ಯಕ್ತಿಗಳು ಸೌದಿ ಅರೇಬಿಯಾಕ್ಕೆ ಬಂದ ನಂತರ ಬೂಸ್ಟರ್ ಡೋಸ್ ಅನ್ನು ಸ್ವೀಕರಿಸಿ ಇಮ್ಯೂನ್ ಸ್ಟೇಟಸ್ ದೊರೆಯಲಿದೆ. ಪ್ರಸ್ತುತ, ಸೌದಿ ಅರೇಬಿಯಾದಿಂದ ದೀರ್ಘ ರಜೆಯಲ್ಲಿ  ಊರಿಗೆ ತೆರಳುವವರು ಮೂರನೇ ಡೋಸ್ ಪಡೆಯುವುದು ಉಚಿತ ಎಂದು ಸಲಹೆ ನೀಡಲಾಗಿದೆ.