janadhvani

Kannada Online News Paper

ಗಂಗೊಳ್ಳಿ ಪ್ರತಿಭಟನೆಯಲ್ಲಿ ಅವಹೇಳನಕಾರಿ ಘೋಷಣೆ- ದೂಮಲಿಕೆ ಮಸೀದಿ ಆಡಳಿತ ಸಮಿತಿಯಿಂದ ದೂರು ದಾಖಲು

ಪುಂಜಾಲಕಟ್ಟೆ, ಅ.7: ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಅ.1ರಂದು ಗಂಗೊಳ್ಳಿಯಲ್ಲಿ ನಡೆದ ಗೋಹತ್ಯೆ ವಿರೋಧಿ ಪ್ರತಿಭಟನೆಯಲ್ಲಿ ಪ್ರವಾದಿ ಪೈಗಂಬರ್ ಮುಹಮ್ಮದ್(ಸ.ಅ) ಮತ್ತು ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದದವರನ್ನು ಮತ್ತು ಸಂಘಟಕರನ್ನು ಬಂಧಿಸಿ ಸೂಕ್ತ ಕಠಿನ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿಸಿ ಬಿಸ್ಮಿಲ್ಲಾ ಜುಮ್ಮಾ ಮಸೀದಿ ದೂಮಳಿಕೆ,ಕಾವಳಕಟ್ಟೆ ಆಡಳಿತ ಸಮಿತಿ ವತಿಯಿಂದ ಇಂದು ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಈ ಸಂದರ್ಭದಲ್ಲಿ ಬಿಸ್ಮಿಲ್ಲಾ ಜುಮ್ಮಾ ಮಸೀದಿ ದೂಮಳಿಕೆ ಆಡಳಿತ ಕಮೀಟಿಯ ಅಧ್ಯಕ್ಷರಾದ ಎಚ್.ಹಿ ಹನೀಫ್, ಕಾರ್ಯದರ್ಶಿ ಆರಿಫ್ ಎನ್.ಸಿ.ರೋಡ್,ಕೋಶಾಧಿಕಾರಿ ಹಂಝ ಅಲಂಗಾಳು,ಕಮೀಟಿ ಸದಸ್ಯರಾದ ಅಬೂಸಾಲಿ ಎನ್.ಸಿ.ರೋಡ್ ಮತ್ತು ಹಂಝ ಬೇಂಗತೋಡಿ ಉಪಸ್ಥಿತರಿದ್ದರು.