janadhvani

Kannada Online News Paper

ಎಸ್ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ: 2021-24ನೇ ಸಾಲಿನ ಪದಾಧಿಕಾರಿಗಳು

ಬೆಳ್ತಂಗಡಿ.(ಸೆ.18): ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ 2021-2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಬೆಳ್ತಂಗಡಿ ರಹ್ಮಾನಿಯ ಸಭಾಭವನದಲ್ಲಿ ನಡೆಯಿತು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ನಿಸಾರ್ ಕುದ್ರಡ್ಕ, ಉಪಾಧ್ಯಕ್ಷರಾಗಿ ಹನೀಫ್ ಪುಂಜಾಲಕಟ್ಟೆ, ಕಾರ್ಯದರ್ಶಿಯಾಗಿ ನಿಝಾಮ್ ಗೇರುಕಟ್ಟೆ, ಜೊತೆ ಕಾರ್ಯದರ್ಶಿಗಳಾಗಿ ಫಝಲ್ ರಹ್ಮಾನ್ ಉಜಿರೆ ಮತ್ತು ಸಾದಿಕ್ ಲಾಯಿಲಾ, ಕೋಶಾಧಿಕಾರಿಯಾಗಿ ಸ್ವಾಲಿ ಮದ್ದಡ್ಕ ಹಾಗೂ ಸದಸ್ಯರಾಗಿ ಇನಾಸ್ ರೋಡ್ರಿಗಸ್, ನವಾಝ್ ಶರೀಫ್ ಕಟ್ಟೆ, ಅಬ್ದುಲ್ ಅಝೀಝ್ ಝುಹರಿ ಕಿಲ್ಲೂರು, ಹನೀಫ್ ಟಿ.ಎಸ್, ಹೈದರ್ ನೀರ್ಸಾಲ್ ಆಯ್ಕೆಯಾದರು.

ಚುನಾವಣಾ ಅಧಿಕಾರಿಗಳಾಗಿ ಜಿಲ್ಲಾ ಕಾರ್ಯದರ್ಶಿಗಳಾದ ಅಶ್ರಪ್ ಮಂಚಿ, ಜಮಾಲ್ ಜೋಕಟ್ಟೆ, ಅನ್ವರ್ ಸಾದಾತ್ ಬಜತ್ತೂರು ಆಗಮಿಸಿದ್ದರು.

ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಮುಖ್ಯ ಅತಿಥಿಯಾಗಿ ಭಾಗ ವಹಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಹೈದರ್ ನೀರ್ಸಾಲ್ ಪ್ರಾಸ್ತಾವಿಕ ಮಾತಗಳನ್ನಾಡಿದರು. ಕಾರ್ಯದರ್ಶಿಗಳಾದ ಅಕ್ಬರ್ ಬೆಳ್ತಂಗಡಿಯವರು ಮೂರು ವರ್ಷದ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ಗಳಾದ ನಿಝಾಮ್ ಗೇರುಕಟ್ಟೆ ಸ್ವಾಗತಿಸಿ, ಅಶ್ಫಕ್ ಪುಂಜಲ್ ಕಟ್ಟೆ ವಂದಿಸಿದರು.ರವೂಫ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.