ರಿಯಾದಿನಲ್ಲಿ ಉದ್ಯೋಗದಲ್ಲಿದ್ದ ಉಪ್ಪಿನಂಗಡಿ ನಿವಾಸಿ ಇಸ್ಮಾಯಿಲ್ ಕೊಡಿಪ್ಪಾಡಿ ಎಂಬವರು 06/09/2021ರಂದು ಹೃದಯಾಘಾತದಿಂದ ನಿಧನ ಹೊಂದಿದರು.
ಮೃತ ವ್ಯಕ್ತಿಯ ಅಂಗಡಿ ಮಾಲಕರಾದ ಮನ್ಸೂರ್‌ರವರು ನಿಧನ ವಾರ್ತೆಯನ್ನು ಕೆಸಿಎಫ್ ರಿಯಾದ್ ಝೋನ್ ಸಾಂತ್ವನ ಇಲಾಖೆಗೆ ನೀಡಿದ ತಕ್ಷಣ ಕಾರ್ಯಪ್ರವೃತ್ತರಾದ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮಜೀದ್ ವಿಟ್ಲ ಮತ್ತು ದಮ್ಮಾಮ್ ಝೋನ್ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಭಾಷಾ ಗಂಗಾವಳಿಯವರು ಭಾರತೀಯ ರಾಯಭಾರಿ ಕಚೇರಿಯ ದಾಖಲೆಗಳನ್ನು ಸರಿಪಡಿಸಿ ಸಹಕರಿಸಿದರು. ಇತರ ದಾಖಲೆಗಳನ್ನು ಕಂಪೆನಿಯ ಸ್ಪಾನ್ಸರ್, ಮನ್ಸೂರ್ ಬಾಯ್, ಕೆಸಿಎಫ್ ನಾಯಕರಾದ ಫಾರೂಕ್ ಪಾಣೆಮಂಗಳೂರು ಮಾಡಿಸಿದರು. ಊರಿನಿಂದ ಬೇಕಾದ ದಾಖಲೆಗಳನ್ನು ತ್ವರಿತವಾಗಿ ಮಾಡಿಸಲು ಮೃತ ವ್ಯಕ್ತಿಯ ಸಹೋದರ ಝಕರಿಯಾ ಹಾಗೂ ವಕೀಲ ಅಶ್ರಫ್ ಸಹಕರಿಸಿದರು.
ದಾಖಲೆಗಳೆಲ್ಲವೂ ಸರಿಪಡಿಸಿದ ತಕ್ಷಣ 09/09/2021 ರಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ನಾಯಕರಾದ ಅಬ್ದುಲ್ಲಾ ಮದನಿಯವರ ನೇತೃತ್ವದಲ್ಲಿ ರಿಯಾದಿನ ನಸೀಮ್ ಕಬ್ರ್ ಸ್ಥಾನದಲ್ಲಿ ದಫನ ಕಾರ್ಯವನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷರಾದ ಹನೀಫ್ ಕಣ್ಣೂರು, ಝೋನ್ ಸಾಂತ್ವನ ಇಲಾಖೆಯ ಅಧ್ಯಕ್ಷ ಮಜೀದ್ ವಿಟ್ಲ, ಝೋನ್ ನಾಯಕರುಗಳಾದ ಫಾರೂಕ್ ಪಾಣೆಮಂಗಳೂರು, ಸಮೀರ್ ಜೆಪ್ಪು, ರಮೀಝ್ ಕುಳಾಯಿ, ಲತೀಫ್ ಅಶ್ರಫಿ, ಅಶ್ರಫ್ ಗುರುಪುರ ಮತ್ತು ಮೃತ ವ್ಯಕ್ತಿಯ ಸಂಬಂಧಿಗಳಾದ ನಾಸಿರ್ ಉಪ್ಪಿನಂಗಡಿ, ಬಶೀರ್ ಮತ್ತು ಮುಹಮ್ಮದ್ ಹಾಗೂ ಮೃತ ವ್ಯಕ್ತಿಯ ಕಂಪೆನಿ ಸಂಪೂರ್ಣವಾಗಿ ಸಹಕಾರ ನೀಡಿದರು.
ಮೃತರ ಕುಟುಂಬಸ್ಥರು, ಗೆಳೆಯರು ಮತ್ತು ಕೆಸಿಎಫ್ ನಾಯಕರು, ಕಾರ್ಯಕರ್ತರು ಭಾಗಿಯಾಗಿ ಮೃತರಿಗಾಗಿ ದುಆ ನೆರವೇರಿಸಿದರು. ಮೃತರು ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ