ರಿಯಾದ್: ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ವಲಸಿಗರ ಇಖಾಮಾ ಮತ್ತು ರೀ ಎಂಟ್ರಿ ವೀಸಾವನ್ನು ವಿಸ್ತರಿಸಲು ರಾಜ ಸಲ್ಮಾನ್ ಮತ್ತೊಮ್ಮೆ ಆದೇಶಿಸಿದ್ದಾರೆ. ಇದರೊಂದಿಗೆ, ಭಾರತದಿಂದ ಸೌದಿ ಅರೇಬಿಯಾಕ್ಕೆ ಮರಳಲು ಸಾಧ್ಯವಾಗದವರ ಇಖಾಮ, ಮರು ಪ್ರವೇಶ ವೀಸಾ ಮತ್ತು ಸಂದರ್ಶಕರ ವೀಸಾವನ್ನು ನವೆಂಬರ್ 30 ರವರೆಗೆ ಉಚಿತವಾಗಿ ವಿಸ್ತರಿಸಲಾಗುತ್ತದೆ.
ಪ್ರಯಾಣ ನಿಷೇಧದಿಂದಾಗಿ ಸೌದಿ ಅರೇಬಿಯಾಕ್ಕೆ ಮರಳಲು ಸಾಧ್ಯವಾಗದವರಿಗೆ, ಇಕಾಮ, ಎಕ್ಸಿಟ್-ರೀ-ಎಂಟ್ರಿ ಮತ್ತು ವಿಸಿಟ್ ವೀಸಾವನ್ನು ವಿಸ್ತರಿಸಲಾಗುತ್ತದೆ. ಪ್ರಸ್ತುತ, ಸೆಪ್ಟೆಂಬರ್ ವರೆಗೆ ವಿಸ್ತರಿಸಲಾಗಿತ್ತು. ಸೌದಿ ಅರೇಬಿಯಾದ ರಾಜ ಸಲ್ಮಾನ್ ಆದೇಶವನ್ನು ಆಧರಿಸಿ, ಮುಂದಿನ ದಿನಗಳಲ್ಲಿ ಪಾಸ್ಪೋರ್ಟ್ ವಿಭಾಗವು ವಿಸ್ತರಣೆಯ ಪ್ರಕ್ರಿಯೆಯನ್ನು ಆರಂಭಿಸಲಿದೆ. ಇದು ಅನೇಕ ಭಾರತೀಯ ವಲಸಿಗರಿಗೆ ಪರಿಹಾರವಾಗಲಿದೆ.ಇದರ ವೆಚ್ಚವನ್ನು ಸೌದಿ ಸರ್ಕಾರ ಭರಿಸುತ್ತದೆ.
ನಿಮ್ಮ ವೀಸಾ ನವೀಕರಿಸಲಾಗಿದೆಯೆ ಎಂದು ದೃಢೀಕರಿಸಲು ಮತ್ತು ನಿಮ್ಮ ಇಕಾಮ ಸಂಖ್ಯೆ ಮತ್ತು ಸಂಬಂಧಿತ ಮಾಹಿತಿಯನ್ನು ನಮೂದಿಸಲು muqeem.com ಪೋರ್ಟಲ್ನಿಂದ ವೀಸಾ ವ್ಯಾಲಿಡಿಟಿ ಲಿಂಕ್ ಅನ್ನು ಕ್ಲಿಕ್ ಮಾಡಿ. ಇದನ್ನು ಅಬ್ಶಿರ್ ಮೂಲಕವೂ ಪರಿಶೀಲಿಸಬಹುದು. ಪ್ರಸ್ತುತ, ಸೌದಿ ಅರೇಬಿಯಾದಿಂದ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ನೇರವಾಗಿ ಸೌದಿ ಅರೇಬಿಯಾಕ್ಕೆ ಮರಳಲು ಅವಕಾಶವಿದೆ. ಉಳಿದವರು ಸೌದಿ ಅರೇಬಿಯಾ ಪ್ರವೇಶಿಸಲು ಸೌದಿಗೆ ಪ್ರವೇಶ ನಿರ್ಬಂಧವಿಲ್ಲದ ದೇಶಗಳಲ್ಲಿ 14 ದಿನಗಳನ್ನು ಕಳೆದು ಸೌದಿಗೆ ಪ್ರವೇಶಿಸಿ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಬೇಕು.
















ಇನ್ನಷ್ಟು ಸುದ್ದಿಗಳು
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?